ಭಾನುವಾರ, ಏಪ್ರಿಲ್ 2, 2023
33 °C
ಆ್ಯಪಲ್ ಐಫೋನ್‌ನಲ್ಲಿ ಸೋನಿ ಕ್ಯಾಮೆರಾ ಲೆನ್ಸ್ ಬಳಕೆ ಮಾಡಲಾಗುತ್ತಿದೆ.

ಐಫೋನ್‌ನಲ್ಲಿ ಸೋನಿ ಕ್ಯಾಮೆರಾ ಲೆನ್ಸ್: ಆ್ಯಪಲ್ ಸಿಇಒ ಹೇಳಿಕೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆ್ಯಪಲ್ ಕಂಪನಿಯ ಜನಪ್ರಿಯ ಐಫೋನ್‌ನಲ್ಲಿ ಜಪಾನ್ ಮೂಲಕ ಸೋನಿ ಕಂಪನಿಯ ಕ್ಯಾಮೆರಾ ಲೆನ್ಸ್ ಬಳಸಲಾಗುತ್ತಿದೆ.

ಈ ಬಗ್ಗೆ ಆ್ಯಪಲ್ ಸಿಇಒ ಟಿಮ್ ಕುಕ್ ಅವರೇ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.

ಆ್ಯಪಲ್ ಕಂಪನಿ ಹೊಸ ಮಾದರಿಗಳನ್ನು ಬಿಡುಗಡೆ ಮಾಡುವಾಗ ಅದರ ತಾಂತ್ರಿಕ ವಿವರವನ್ನು ಹೆಚ್ಚಾಗಿ ಬಹಿರಂಗಪಡಿಸುವುದಿಲ್ಲ.

ಜಪಾನ್‌ನಲ್ಲಿನ ಸೋನಿ ಕಂಪನಿ ಫ್ಯಾಕ್ಟರಿಗೆ ಇತ್ತೀಚೆಗೆ ಭೇಟಿ ನೀಡಿದ್ದ ಆ್ಯಪಲ್ ಸಿಇಒ ಟಿಮ್ ಕುಕ್, ಕಳೆದ ಹತ್ತು ವರ್ಷಗಳಿಂದ ನಾವು ಕ್ಯಾಮೆರಾ ಲೆನ್ಸ್‌ಗಾಗಿ ಸೋನಿ ಕಂಪನಿ ಜತೆ ಕೈಜೋಡಿಸಿದ್ದೇವೆ. ನಮಗಾಗಿ ಕೆನ್ ಮತ್ತವರ ತಂಡ ಉತ್ಕೃಷ್ಟ ಮಟ್ಟದ ಕ್ಯಾಮೆರಾ ಲೆನ್ಸ್ ತಯಾರಿಸಿಕೊಡುತ್ತಿದೆ ಎಂದು ಹೇಳಿದ್ದಾರೆ.

ಆ್ಯಪಲ್ ಕಳೆದ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಿರುವ ಹೊಸ ಐಫೋನ್ 14 ಪ್ರೊ ಮಾದರಿಗಳಲ್ಲಿ ಇದೇ ಮೊದಲ ಬಾರಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಸೆನ್ಸರ್ ಬಳಕೆ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು