ಶನಿವಾರ, ಮೇ 15, 2021
25 °C

iMac: ಹೊಸ ಸರಣಿಯ ಆಕರ್ಷಕ ಐಮ್ಯಾಕ್ ಬಿಡುಗಡೆ ಮಾಡಿದ ಆ್ಯಪಲ್

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

Apple INC.

ಬೆಂಗಳೂರು: ಮಂಗಳವಾರ ನಡೆದ ಆ್ಯಪಲ್ ವಿಶೇಷ ಈವೆಂಟ್‌ನಲ್ಲಿ ಹೊಸ ಐಮ್ಯಾಕ್ ಕಂಪ್ಯೂಟರ್ ಬಿಡುಗಡೆ ಮಾಡಿದೆ. ಆಕರ್ಷಕ ವಿನ್ಯಾಸ ಮತ್ತು ವಿವಿಧ ಬಣ್ಣಗಳಲ್ಲಿ ನೂತನ ಐಮ್ಯಾಕ್ ಮಾರುಕಟ್ಟೆ ಪ್ರವೇಶಿಸಿದೆ.

ಏಳು ಆಕರ್ಷಕ ಬಣ್ಣಗಳು

ಹಸಿರು, ಹಳದಿ, ಕಿತ್ತಳೆ, ನೀಲಿ, ನೇರಳೆ, ಗುಲಾಬಿ ಮತ್ತು ಬೆಳ್ಳಿ ಬಣ್ಣಗಳಲ್ಲಿ ಲಭ್ಯವಿದೆ.

ಆಕರ್ಷಕ ವಿನ್ಯಾಸ

ಡಾಲ್ಬಿ ಅಟ್ಮೋಸ್, 1080p ಫೇಸ್‌ಟೈಮ್ ಎಚ್‌ಡಿ ಕ್ಯಾಮರಾ, 4.5K 24 ಇಂಚಿನ ರೆಟಿನಾ ಡಿಸ್‌ಪ್ಲೇ ಇದರಲ್ಲಿದೆ. ಜತೆಗೆ ಆ್ಯಪಲ್ M1 ಚಿಪ್ ಸಹಿತ ನೂತನ ಐಮ್ಯಾಕ್‌ ದೊರೆಯಲಿದೆ.

ಆ್ಯಪಲ್ ವೆಬ್‌ಸೈಟ್ ಮತ್ತು ಸ್ಟೋರ್ ಮೂಲಕ ಏಪ್ರಿಲ್ 30ರಿಂದ ಪ್ರಿ ಆರ್ಡರ್ ಲಭ್ಯವಿದೆ. ಮೇ ತಿಂಗಳಿನಲ್ಲಿ ಗ್ರಾಹಕರಿಗೆ ದೊರೆಯಲಿದೆ.

ಬೆಲೆ ವಿವರ

ಹೊಸ ಐಮ್ಯಾಕ್ ದರ ₹1,19,900 ರಿಂದ ಆರಂಭವಾಗುತ್ತದೆ. 8GB ಮೆಮೊರಿ ಮತ್ತು 256GB ಸ್ಟೋರೇಜ್ ಕೂಡ ಇದರಲ್ಲಿದೆ. ಜತೆಗೆ ಹೊಸ ವಿನ್ಯಾಸದಲ್ಲಿ ಮ್ಯಾಜಿಕ್ ಕೀಬೋರ್ಡ್, ಮ್ಯಾಜಿಕ್ ಮೌಸ್ ಕೂಡ ಬಿಡುಗಡೆಯಾಗಿದೆ.

ಅಲ್ಲದೆ ಆ್ಯಪಲ್ ಈವೆಂಟ್‌ನಲ್ಲಿ ಹೊಸ ಮಾದರಿಯ ಆ್ಯಪಲ್ ಏರ್‌ಟ್ಯಾಗ್, ಐಪ್ಯಾಡ್ ಪ್ರೊ, ಐಫೋನ್ 12 ಪರ್ಪಲ್ ಕೂಡ ಬಿಡುಗಡೆಯಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು