ಭಾನುವಾರ, ಮೇ 29, 2022
30 °C

Apple: ಹೊಸ ಐಪ್ಯಾಡ್ ಏರ್ A15 ಚಿಪ್‌ ಸಹಿತ ಶೀಘ್ರ ಬಿಡುಗಡೆ

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

credit: AFP File Photo

ಸ್ಯಾನ್ ಫ್ರಾನ್ಸಿಸ್ಕೊ: ಟೆಕ್ ಲೋಕದ ಪ್ರಮುಖ ಕಂಪನಿ ಆ್ಯಪಲ್, ನೂತನ ಐಪ್ಯಾಡ್ ಏರ್ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

ಐದನೇ ಆವೃತ್ತಿಯ ಆ್ಯಪಲ್ ಐಪ್ಯಾಡ್ ಏರ್‌ನಲ್ಲಿ ಎ15 ಬಯಾನಿಕ್ ಚಿಪ್, 12 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಸೆಲ್ಫಿ ಕ್ಯಾಮೆರಾ ಮತ್ತು 5ಜಿ ಬೆಂಬಲ ಕೂಡ ಇರಲಿದೆ.

ಮ್ಯಾಕ್‌ರೂಮರ್ಸ್ ವರದಿ ಪ್ರಕಾರ, ಆ್ಯಪಲ್ ಶೀಘ್ರದಲ್ಲೇ ಐಪೋನ್‌ ಎಸ್‌ಇ ಮೂರನೇ ಆವೃತ್ತಿಯನ್ನು ಪರಿಚಯಿಸಲಿದೆ. ಅದೇ ಸಂದರ್ಭದಲ್ಲಿ ಹೊಸ ಐಪ್ಯಾಡ್ ಕೂಡ ಬಿಡುಗಡೆಯಾಗುವ ಸಾಧ್ಯತೆಯಿದೆ.

ಹೊಸ ಐಪ್ಯಾಡ್‌ನಲ್ಲಿ ಪ್ರೊಸೆಸರ್ ಚಿಪ್ ಮಾತ್ರ ಬದಲಾಗಲಿದೆ. ಉಳಿದಂತೆ ವಿನ್ಯಾಸ, ಡಿಸ್‌ಪ್ಲೇ ಮತ್ತು ಹಿಂಬದಿ ಕ್ಯಾಮೆರಾ ಈಗಿರುವಂತೆಯೇ ಇರಲಿದೆ ಎಂದು ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು