ಸೋಮವಾರ, ಡಿಸೆಂಬರ್ 5, 2022
21 °C
ಏಸಸ್ ನೂತನ ಸ್ಮಾರ್ಟ್‌ಫೋನ್ ಬಿಡುಗಡೆ

Asus ROG Phone 6: ಸ್ನ್ಯಾಪ್‌ಡ್ರ್ಯಾಗನ್ 8+ ಜನರೇಶನ್ 1 ಸ್ಮಾರ್ಟ್‌ಫೋನ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ತೈವಾನ್ ಮೂಲದ ಪ್ರಮುಖ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಏಸಸ್, ಹೊಸ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಏಸಸ್ ರಾಗ್ ಫೋನ್ 6 ಡಯಾಬ್ಲೊ ಇಮೋರ್ಟಲ್ ಎಡಿಶನ್ ಬಿಡುಗಡೆಯಾಗಿದ್ದು, ಹೊಸ ಸ್ನ್ಯಾಪ್‌ಡ್ರ್ಯಾಗನ್ 8+ ಜನರೇಶನ್ 1 ಪ್ರೊಸೆಸರ್ ಹೊಂದಿದೆ.

ಏಸಸ್ ರಾಗ್ ಫೋನ್ 6 ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ ಕಳೆದ ಜುಲೈನಲ್ಲಿಯೇ ಬಿಡುಗಡೆಯಾಗಿತ್ತು. ಈ ಬಾರಿ ನೂತನ ಪ್ರೊಸೆಸರ್ ಜತೆಗೆ, ಡಯಾಬ್ಲೊ ಇಮೋರ್ಟಲ್ ಎಡಿಶನ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ.

ಹೊಸ ಮಾದರಿಯಲ್ಲಿ 16GB LPDDR5 RAM ಮತ್ತು 512GB UFS 3.1 ಸ್ಟೋರೇಜ್ ಇರಲಿದೆ. ಡಯಾಬ್ಲೊ ಇಮೋರ್ಟಲ್ ಗ್ರಾಫಿಕ್ಸ್, ಆಕರ್ಷಕ ವಿನ್ಯಾಸ ನೂತನ ಸ್ಮಾರ್ಟ್‌ಫೋನ್‌ನ ವಿಶೇಷತೆಯಾಗಿದೆ ಎಂದು ಕಂಪನಿ ತಿಳಿಸಿದೆ.

6.78 ಇಂಚಿನ ಡಿಸ್‌ಪ್ಲೇ, 50 ಮೆಗಾಪಿಕ್ಸೆಲ್ ಸಹಿತ ಪ್ರಮುಖ ಕ್ಯಾಮೆರಾ, ಜತೆಗೆ 13 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆ್ಯಂಗಲ್, 5 ಮೆಗಾಪಿಕ್ಸೆಲ್ ಮ್ಯಾಕ್ರೊ ಲೆನ್ಸ್ ಕ್ಯಾಮೆರಾ ಹಾಗೂ 12 ಮೆಗಾಪಿಕ್ಸೆಲ್ ಸೆಲ್ಫಿ ಇದರಲ್ಲಿದೆ ಎಂದು ಏಸಸ್ ತಿಳಿಸಿದೆ. ಹೊಸ ಆವೃತ್ತಿ ಬೆಲೆ ವಿವರವನ್ನು ಕಂಪನಿ ಬಹಿರಂಗಪಡಿಸಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು