ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bengaluru Tech Summit 2023: ಹೃದಯ, ಶ್ವಾಸಕೋಶದ ಶಬ್ದ ಆಲಿಸುವ ಎಐ ಸ್ಟೆಥಸ್ಕೋಪ್

Published 29 ನವೆಂಬರ್ 2023, 12:29 IST
Last Updated 29 ನವೆಂಬರ್ 2023, 12:29 IST
ಅಕ್ಷರ ಗಾತ್ರ

ಬೆಂಗಳೂರು: ಹೃದಯ ಬಡಿತ ಸರಿಯಾಗಿದೆಯೇ? ಹೃದಯ ಬಡಿತದಲ್ಲಿ ಏನಾದರೂ ಅಸಮರ್ಪಕ ಏರಿಳಿತವಿದೆಯೇ? ಶ್ವಾಸಕೋಶ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದೆಯೇ? ಹೃದಯ ಸಂಬಂಧಿ ಸಮಸ್ಯೆ ಇದ್ದಲ್ಲಿ ಸುಲಭವಾಗಿ ಪತ್ತೆ ಮಾಡಲು ಕೃತಕ ಬುದ್ಧಿಮತ್ತೆ ಆಧಾರಿತ ಡಿಜಿಟಲ್‌ ಮಾದರಿಯ ಸ್ಟೆಥಸ್ಕೋಪ್‌ ಬೆಂಗಳೂರು ಟೆಕ್‌ ಸಮಿಟ್‌ನಲ್ಲಿ ನೋಡಬಹುದಾಗಿದೆ.

ಎಐಸ್ಟೆತ್‌ ಎಂಬ ಬೆಂಗಳೂರು ವಿಜ್ಞಾನ ಸಂಸ್ಥೆಯ ಮಾರ್ಗದರ್ಶನದಲ್ಲಿ ಎಐ ಹೆಲ್ತ್‌ ಹೈವೇ ಇಂಡಿಯಾ ಕಂಪನಿಯು ನೂತನ ಮಾದರಿಯ ಸ್ಟೆಥಸ್ಕೋಪ್‌ ಅಭಿವೃದ್ಧಿಪಡಿಸಿದೆ.

ಸಾಮಾನ್ಯ ಸ್ಟೆಥಸ್ಕೋಪ್‌ನಂತೆಯೇ ಇರುವ ಈ ಸಾಧನದ ಮಾಹಿತಿ ಕಿವಿಯ ಜತೆಗೆ ಮೊಬೈಲ್‌ನಲ್ಲಿರುವ ಆ್ಯಪ್‌ನಲ್ಲೂ ಲಭ್ಯ. ಸ್ಪೆಕ್ಟ್ರೋಗ್ರಾಮ್‌ ಹಾಗೂ ವೇವ್‌ ಮಾದರಿಯಲ್ಲಿ ಇದು ಮಾಹಿತಿ ನೀಡಲಿದೆ. ಟೆಲಿಕನ್ಸಲ್ಟೇಷನ್‌ ಹಾಗೂ ದೂರದಲ್ಲಿರುವವರನ್ನು ತಪಾಸಣೆ ಮಾಡಿ ಹೃದಯ ಬಡಿತದ ಆಧಾರದಲ್ಲಿ ನಿಖರ ಮಾಹಿತಿ ಪಡೆಯಬಹುದಾಗಿದೆ.

ಮಕ್ಕಳಲ್ಲಿ ಹೃದಯ ಸಂಬಂಧಿ ಸಮಸ್ಯೆ ಇದ್ದಲ್ಲಿ ಇಸಿಜಿ ಮಾಡಲಾಗದು. ಅಂಥ ಸಂದರ್ಭದಲ್ಲಿ ಅವರ ಹೃದಯ ಬಿಡತವನ್ನು ಆಲಿಸಿ, ಅದರ ನಿಖರ ಮಾಹಿತಿ ನೀಡಲು ಈ ಎಐ ಸ್ಟೆಥ್ ನೆರವಾಗಲಿದೆ ಎಂದೆನ್ನುತ್ತಾರೆ ಇಲ್ಲಿನ ಸಿಬ್ಬಂದಿ.

ಇಷ್ಟು ಮತ್ರವಲ್ಲದೇ, ಮೊಬೈಲ್‌ನಲ್ಲಿ ದಾಖಲಾಗುವ ರೋಗಿಯ ಆರೋಗ್ಯ ಮಾಹಿತಿ ಯಾರಿಗೂ ಸಿಗದಂತೆ ಗೋಪ್ಯವಾಗಿಡಲು ಸಾಧ್ಯ. ಜತೆಗೆ ಆಧುನಿಕ ಬ್ಲೂಟೂತ್ ತಂತ್ರಜ್ಞಾನವನ್ನು ಸೆಥಸ್ಕೋಪ್‌ಗೆ ಅಳವಡಿಸಿರುವುದರಿಂದ ಸಾಧನ ಹಾಗೂ ಮೊಬೈಲ್‌ ನಡುವಿನ ಸಂವಹನ ತ್ವರತಗತಿಯಲ್ಲಿರುತ್ತದೆ ಎಂದು ವಿವರಿಸಿದರು.

ಈ ಸಾಧನದಿಂದ ಲಭ್ಯವಾಗುವ ಮಾಹಿತಿ ಅತ್ಯಂತ ನಿಖರವಾಗಿದ್ದು, ವೈದ್ಯರಿಗೆ ಚಿಕಿತ್ಸೆ ನೀಡಲು ಹೆಚ್ಚು ಸಹಕಾರಿಯಾಗಲಿದೆ ಎಂದೆನ್ನುತ್ತಾರೆ ಎಐ ಸ್ಟೆಥ್‌ನ ತಂತ್ರಜ್ಞರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT