ಗುರುವಾರ , ಜೂನ್ 24, 2021
21 °C

ಸ್ಮಾರ್ಟ್‌ಫೋನ್‌: ನಿರೀಕ್ಷೆಗಿಂತ ಉತ್ತಮ ಒನ್‌ಪ್ಲಸ್‌ 8

ವಿಶ್ವನಾಥ ಎಸ್. ಶರ್ಮಾ Updated:

ಅಕ್ಷರ ಗಾತ್ರ : | |

Prajavani

ಒನ್‌ಪ್ಲಸ್‌ ಕಂಪನಿ ಪ್ರತಿ ಆರು ತಿಂಗಳಿಗೊಂದು ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುತ್ತದೆ. ಹಾಗಾಗಿ ದೊಡ್ಡಮಟ್ಟದ ವ್ಯತ್ಯಾಸ ಇರದಿದ್ದರೂ ಗುಣಮಟ್ಟದಲ್ಲಿ ಸುಧಾರಣೆ ಮತ್ತು ಕಾರ್ಯವೈಖರಿಗೆ ಸಂಬಂಧಿಸಿದಂತೆ ಗುರುತಿಸಬಹುದಾದ ಬದಲಾವಣೆಗಳಂತೂ ಇದ್ದೇ ಇರುತ್ತವೆ.

ಒನ್‌ಪ್ಲಸ್‌ 8 ಸ್ಮಾರ್ಟ್‌ಫೋನ್‌ 5ಜಿಗೆ ಬೆಂಬಲಿಸುತ್ತದೆ. ಬಣ್ಣ, ವಿನ್ಯಾಸ, ವೇಗದ ದೃಷ್ಟಿಯಿಂದ ಮನಸೆಳೆಯುತ್ತದೆ. ಪರದೆಯ ಮೇಲ್ತುದಿಯ ಎಡಭಾಗದಲ್ಲಿ ಹೋಲ್‌ ಪಂಚ್‌ ಕಟೌಟ್‌ನಲ್ಲಿ ಸೆಲ್ಫಿ ಅಳವಡಿಸಿದ್ದು, ಮೊಬೈಲ್‌ಗೆ ಹೊಸನೋಟ ನೀಡಿದೆ. ತೆಳುವಾಗಿದ್ದು, ತೂಕವೂ ಕಡಿಮೆ ಇದೆ. ಓನಿಕ್ಸ್ ಕಪ್ಪು ಬಣ್ಣವು ಅತ್ಯಂತ ಆಕರ್ಷಕವಾಗಿದೆ.

48 ಎಂಪಿ ಕ್ಯಾಮೆರಾದಲ್ಲಿ ಹಗಲು ಮತ್ತು ಮಂದ ಬೆಳಕಿನಲ್ಲಿಯೂ ಉತ್ತಮವಾಗಿ ಚಿತ್ರಗಳನ್ನು ಸೆರೆಹಿಡಿಯಬಹುದು.  ಪೊರ್ಟ್ರೇಟ್‌ ಆಯ್ಕೆಯಲ್ಲಿಯೂ ಆಟೊ ಟಚಪ್‌ ಇಲ್ಲದೆ ನೈಜವಾದ ಚಿತ್ರ ಮೂಡಿಬರುತ್ತದೆ. ಗರಿಷ್ಠ ಗುಣಮಟ್ಟದ ವಿಡಿಯೊ ನೋಡುವಾಗ, ಗೇಮ್‌ ಆಡುವಾಗ ಇದರ ಕಾರ್ಯಾಚರಣೆಯ ವೇಗವನ್ನು ಅನುಭವಿಸಬಹುದು.

ಬ್ಯಾಟರಿ ಬಾಳಿಕೆ ಅವಧಿ ಕಮ್ಮಿ: 4,300 ಎಂಎಎಚ್‌ ಬ್ಯಾಟರಿ ಇದ್ದು, ಬಾಳಿಕೆ ಅವಧಿ ತುಸು ಕಡಿಮೆ ಇದೆ. 30 ನಿಮಿಷದಲ್ಲಿ ಶೇ 60ರಷ್ಟು ಚಾರ್ಜ್ ಮಾಡಬಹುದು. ಶೇ 100ರಷ್ಟು ಚಾರ್ಜ್‌ ಆಗಲು ಒಂದೂವರೆ ಗಂಟೆ ಬೇಕು. ಅಂತರ್ಜಾಲದಲ್ಲಿ ಹುಡುಕಾಟ, ವಿಡಿಯೊ ನೋಡುವುದು, ಆನ್‌ಲೈನ್‌ನಲ್ಲಿ ಸಂಗೀತ ಕೇಳುವುದು, ಗೇಮ್‌ ಆಡಿದರೆ ಬ್ಯಾಟರಿ ಒಂದು ದಿನವೂ ಬರುವುದಿಲ್ಲ.

ಫೋನ್‌ನಲ್ಲಿ ಬೇರೆಯವರೊಂದಿಗೆ ಮಾತನಾಡುತ್ತಿರುವಾಗ, ನಮ್ಮ ಕಿವಿಗಷ್ಟೇ ಕೇಳಬೇಕಾದ ಅವರ ಮಾತು ನಮ್ಮಿಂದ ಐದಾರು ಅಡಿ ದೂರದಲ್ಲಿ ಕೂತಿರುವವರಿಗೂ ಸ್ಪಷ್ಟವಾಗಿ ಕೇಳಿಸುತ್ತದೆ. ಇದನ್ನು ಬಗೆಹರಿಸಲು ಕಂಪನಿ ಗಮನ ಹರಿಸಬೇಕಿದೆ.

ವೈಶಿಷ್ಟ್ಯ
ಡಿಸ್‌ಪ್ಲೇ; 6.55 ಇಂಚು ಫ್ಲ್ಯೂಯೆಡ್‌ ಅಮೊ ಎಲ್‌ಇಡಿ
ಒಎಸ್‌;  ಆಂಡ್ರಾಯ್ಡ್‌ 10 ಆಧಾರಿತ ಆಕ್ಸಿಜನ್‌ ಒಎಸ್‌
ಸಿಪಿಯು; ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್‌ 865
ಕ್ಯಾಮೆರಾ; 48ಎಂಪಿ, ಡ್ಯುಯಲ್‌ ಫ್ಲ್ಯಾಷ್
ಸೆಲ್ಫಿ ಕ್ಯಾಮೆರಾ; 16 ಎಂಪಿ
ಬ್ಯಾಟರಿ; 4,300 ಎಂಎಎಚ್‌

ಬೆಲೆ

8 ಜಿಬಿ + 128 ಜಿಬಿಗೆ-  ₹44,999
12 ಜಿಬಿ + 256 ಜಿಬಿಗೆ-  ₹49,999

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು