ಬೆಂಗಳೂರು: ದೇಶದ ಗ್ಯಾಜೆಟ್ ಮಾರುಕಟ್ಟೆಗೆ ರಿಯಲ್‌ಮಿ ಒಡೆತನದ ಡಿಜೊ, ಬಜೆಟ್ ದರದ ಸ್ಮಾರ್ಟ್‌ವಾಚ್ ಪರಿಚಯಿಸಿದೆ.
ಡಿಜೊ ಡಿ ಪ್ಲಸ್ ಸರಣಿ ಬುಧವಾರ ಬಿಡುಗಡೆಯಾಗಿದ್ದು, 1.85 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ, 3ATM ವಾಟರ್ ರೆಸಿಸ್ಟಂಟ್ ರೇಟಿಂಗ್ ಹೊಂದಿದೆ.
ಅಲ್ಯೂಮಿನಿಯಂ ಫ್ರೇಮ್ ಮತ್ತು ಬದಲಾಯಿಸಬಹುದಾದ ಸಿಲಿಕಾನ್ ಸ್ಟ್ರಾಪ್, 150ಕ್ಕೂ ಅಧಿಕ ವಾಚ್ ಫೇಸ್ ಇದರ ವಿಶೇಷತೆಯಾಗಿದೆ ಎಂದು ಕಂಪನಿ ಹೇಳಿದೆ.
110ಕ್ಕೂ ಅಧಿಕ ಕ್ರೀಡೆ ಮತ್ತು ಚಟುವಟಿಕೆ ಟ್ರ್ಯಾಕರ್, ಮ್ಯೂಸಿಕ್ ಕಂಟ್ರೋಲ್, ಫೋನ್, ಕ್ಯಾಮೆರಾ, ಮೆಸೇಜ್ ಸಹಿತ ಹಲವು ವೈಶಿಷ್ಟ್ಯಗಳಿದ್ದು, ಸ್ಮಾರ್ಟ್‌ಫೋನ್ ಮೂಲಕವೇ ನಿಯಂತ್ರಿಸಬಹುದು.
300mAh ಬ್ಯಾಟರಿ ಇದ್ದು, ಸಾಮಾನ್ಯ ಬಳಕೆಯಲ್ಲಿ 14 ದಿನದವರೆಗೆ ಬಳಸಬಹುದು ಎಂದು ಡಿಜೊ ಹೇಳಿದೆ.
ಬೆಲೆ ಮತ್ತು ಲಭ್ಯತೆ
ಡಿಜೊ ವಾಚ್ ಡಿ ಪ್ಲಸ್ ಸ್ಮಾರ್ಟ್‌ವಾಚ್ ಕ್ಲಾಸಿಕ್ ಬ್ಲ್ಯಾಕ್, ಡೀಪ್ ಬ್ಲೂ ಮತ್ತು ಸಿಲ್ವರ್ ಗ್ರೇ ಎಂಬ ಮೂರು ಬಣ್ಣಗಳಲ್ಲಿ ಫ್ಲಿಪ್‌ಕಾರ್ಟ್ ಮೂಲಕ ₹1,999 ದರಕ್ಕೆ ನವೆಂಬರ್ 15ರಿಂದ ದೊರೆಯಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.