ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಲಿಪ್‌ಕಾರ್ಟ್‌ನಲ್ಲಿ ಕನ್ನಡ

Last Updated 26 ಜೂನ್ 2020, 8:23 IST
ಅಕ್ಷರ ಗಾತ್ರ

ದೇಶದ ಮುಂಚೂಣಿ ಇ–ಕಾಮರ್ಸ್‌ ಕಂಪನಿ ಫ್ಲಿಪ್‌ಕಾರ್ಟ್‌ನ ಗ್ರಾಹಕರು ಇನ್ನು ಮುಂದೆ ಕನ್ನಡದಲ್ಲೂ ವ್ಯವಹರಿಸಬಹುದು!

ಹೌದು, ಹಿಂದಿಯ ನಂತರಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳು ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್ ಸೇರಿವೆ.

ಹೆಚ್ಚು ಗ್ರಾಹಕರನ್ನು ತಲುಪುವ ಪ್ರಯತ್ನವಾಗಿ ಒಂಬತ್ತು ತಿಂಗಳ ಹಿಂದೆ ಫ್ಲಿಪ್‌ಕಾರ್ಟ್, ತನ್ನ ಬಳಗಕ್ಕೆ ಹಿಂದಿ ಭಾಷೆಯನ್ನು ಸೇರಿಸಿಕೊಂಡಿತ್ತು. ಇದರಿಂದ ಉತ್ತರ ಭಾರತದ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದರಿಂದ ಉತ್ತೇಜನಗೊಂಡಿರುವ ಕಂಪನಿ ಈಗ ದಕ್ಷಿಣ ಭಾರತದ ಮೂರು ಭಾಷೆಗಳನ್ನು ಸೇರ್ಪಡೆಗೊಳಿಸಿದೆ. ಈ ಪ್ರಾದೇಶಿಕ ಭಾಷೆಗಳು ಫ್ಲಿಪ್‌ಕಾರ್ಟ್‌ನ ‘ಲೋಕಲೈಜೇಶನ್‌ ಆ್ಯಂಡ್‌ ಟ್ರಾನ್ಸ್‌ಲೇಶನ್ ಪ್ಲಾಟ್‌ಫಾರ್ಮ್‌’ನಲ್ಲಿ ಸಂಪರ್ಕ ಭಾಷೆಗಳಾಗಿ ಸ್ಥಾನಪಡೆದಿವೆ.

ಹಿಂದಿ ಭಾಷೆಯನ್ನು ಪರಿಚಯಿಸುವ ಮೊದಲು ಗ್ರಾಹಕರು ಇಂಗ್ಲಿಷ್‌ ಭಾಷೆಯಲ್ಲಿ ಮಾತ್ರ ವ್ಯವಹರಿಸಬೇಕಿತ್ತು. ಈಗ ಹಾಗಿಲ್ಲ, ಇಂಗ್ಲಿಷ್‌ ಮತ್ತು ಹಿಂದಿ ಜತೆಗೆ, ದಕ್ಷಿಣಭಾರತದ ಮೂರು ರಾಜ್ಯಗಳ ಗ್ರಾಹಕರು, ತಮ್ಮ ತಮ್ಮ ಮಾತೃಭಾಷೆಯಲ್ಲೂ ವ್ಯವಹರಿಸಬಹುದು.

‘ಭಾರತ ಅತ್ಯಂತ ವೈವಿಧ್ಯಮಯ ಮಾರುಕಟ್ಟೆ. ಹಾಗಾಗಿ ಪ್ರಾದೇಶಿಕ ಸಂಪರ್ಕ ಭಾಷೆಗಳನ್ನು ಪರಿಚಯಿಸಿರುವುದು ಗ್ರಾಹಕರಿಗೆ ಹೊಸ ಶಾಪಿಂಗ್ ಅನುಭವ ನೀಡಲಿದೆ. ಸಣ್ಣ ನಗರ, ಪಟ್ಟಣಗಳ ಗ್ರಾಹಕರಿಗೆ ಇದರಿಂದ ಹೆಚ್ಚು ಅನುಕೂಲವಾಗಲಿದೆ’ ಎಂದು ಸಂಸ್ಥೆ ಹೇಳಿದೆ.

‘ಹಿಂದಿ ಭಾಷೆಯನ್ನು ಪರಿಚಯಿಸಿದ ನಂತರ ಉತ್ತರ ಭಾರತದ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಇದೀಗ ದಕ್ಷಿಣ ಭಾರತೀಯರ ಶಾಪಿಂಗ್ ಅನುಭವ ಮತ್ತು ಪ್ರತಿಕ್ರಿಯೆಗಾಗಿ ಕುತೂಹಲದಿಂದ ಎದುರು ನೋಡುತ್ತಿದ್ದೇವೆ’ ಎಂದುಫ್ಲಿಪ್‌ಕಾರ್ಟ್‌ ಗ್ರೂಪ್ ಸಿಇಒ ಕಲ್ಯಾಣ್‌ ಕೃಷ್ಣಮೂರ್ತಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT