ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಮ್‌ಸಂಗ್ ಕೈಗೆಟುಕುವ ದರದ ಗ್ಯಾಲಕ್ಸಿ ಎಂ01 ಕೋರ್ ಫೋನ್: ಆರಂಭಿಕ ಬೆಲೆ ₹5,499

ಅಕ್ಷರ ಗಾತ್ರ
ADVERTISEMENT
""

ಭಾರತದಲ್ಲಿ ಕೋವಿಡ್‌ನಿಂದ ಎದುರಾಗಿರುವ ಲಾಕ್‌ಡೌನ್‌, ಚೀನಾ ವಸ್ತುಗಳ ಬಳಕೆಗೆ ವಿರೋಧ, ಹೆಚ್ಚುತ್ತಿರುವ ಡಿಜಿಟಲ್‌ ಬಳಕೆ ಕಾರಣಗಳಿಂದಾಗಿ ದೇಶದಲ್ಲಿ ಸ್ಮಾರ್ಟ್‌ಫೋನ್‌ಗಳ ಖರೀದಿ ಹೆಚ್ಚಿದೆ. ಇದೇ ಸಮಯದಲ್ಲಿ ಸ್ಯಾಮ್‌ಸಂಗ್‌ ಒಂದರ ಹಿಂದೊಂದು ಕೈಗೆಟುಕುವ ದರದ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಎಂ ಸರಣಿಯಲ್ಲಿ ‌10 ಸಾವಿರ ರೂಪಾಯಿಗಿಂತಲೂ ಕಡಿಮೆ ದರದ ಮೂರನೇ ಫೋನ್‌ ಬಿಡುಗಡೆಯಾಗಿದೆ.

ಈಗಾಗಲೇ ಗ್ಯಾಲಕ್ಸಿ ಎಂ01, ಗ್ಯಾಲಕ್ಸಿ ಎಂ01ಎಸ್‌ ಬಿಡುಗಡೆಯಾಗಿದ್ದು, ಅದೇ ಸಾಲಿಗೆ ಎಂ01 ಕೋರ್‌ ಸೇರ್ಪಡೆಯಾಗಿದೆ.

5.3 ಇಂಚು ಎಚ್‌ಡಿ + ಡಿಸ್‌ಪ್ಲೇ ನೀಡಲಾಗಿದ್ದು, ಫೀಚರ್ ಫೋನ್‌ಗಳಿಂದ ಸ್ಮಾರ್ಟ್‌ಫೋನ್‌ ಬಳಕೆಗೆ ತೆರೆದುಕೊಳ್ಳುತ್ತಿರುವವರಿಗೆ ಗ್ಯಾಲಕ್ಸಿ ಎಂ01 ಕೋರ್‌ ಉತ್ತಮ ಆಯ್ಕೆಯಾಗಬಹುದಾಗಿದೆ. 3000ಎಂಎಎಚ್‌ ಬ್ಯಾಟರಿ ಅಳವಡಿಸಲಾಗಿದೆ. ಒಮ್ಮೆ ಪೂರ್ಣ ಚಾರ್ಜ್‌ ಮಾಡಿ 11 ಗಂಟೆಗಳು ಕಾರ್ಯಾಚರಿಸಬಹುದಾಗಿದೆ.

ಫೋನ್‌ ಹಿಂಬದಿಯಲ್ಲಿ 8ಎಂಪಿ ಹಾಗೂ ಸೆಲ್ಫಿಗಾಗಿ 5ಎಂಪಿ ಕ್ಯಾಮೆರಾ ಇದೆ. ಕ್ವಾಡ್‌ಕೋರ್‌ ಮೀಡಿಯಾಟೆಕ್‌ 6739 ಪ್ರೊಸೆಸರ್‌, 1ಜಿಬಿ ರ್‍ಯಾಮ್‌+16ಜಿಬಿ ಸಂಗ್ರಹ ಮತ್ತು 2ಜಿಬಿ ರ್‍ಯಾಮ್‌+32ಜಿಬಿ ರ್‍ಯಾಮ್‌ ಸಂಗ್ರಹ ಎರಡು ಆಯ್ಕೆಗಳಲ್ಲಿ ಗ್ಯಾಲಕ್ಸಿ ಎಂ01 ಕೋರ್ ಸಿಗಲಿದೆ. ಇದರ ಬೆಲೆ ಕ್ರಮವಾಗಿ ₹5,499 ಮತ್ತು ₹6,499 ನಿಗದಿಯಾಗಿದೆ. ಜುಲೈ 29ರಿಂದ ಹೊಸ ಫೋನ್‌ ಖರೀದಿಗೆ ಸಿಗಲಿದ್ದು, ಕಪ್ಪು, ನೀಲಿ ಹಾಗೂ ಕೆಂಪು ಬಣ್ಣಗಳಲ್ಲಿ ಲಭ್ಯವಿರಲಿದೆ.

ಆಂಡ್ರಾಯ್ಡ್‌ನ ಗೊ ಪ್ಲಾಟ್‌ಫಾರ್ಮ್‌ ಆಧಾರಿತ ಒಎಸ್‌ ಅಳವಡಿಸಿಕೊಂಡಿರುವುದರಿಂದ ಕಡಿಮೆ ರ್‍ಯಾಮ್ ಮತ್ತು ಸಂಗ್ರಹ ಸಾಮರ್ಥ್ಯದಲ್ಲಿಯೇ ಬಹುತೇಕ ಎಲ್ಲ ಅಪ್ಲಿಕೇಷನ್‌ಗಳನ್ನು ಅಡಚಣೆ ಇಲ್ಲದೆ ಬಳಸಬಹುದಾಗಿದೆ.

ಸ್ಯಾಮ್‌ಸಂಗ್‌ ಭಾರತದಲ್ಲಿನ ಹೊಸ ಫೋನ್‌ಗಳಿಗಾಗಿಯೇ ವಿಶೇಷ ವ್ಯವಸ್ಥೆ ಅಳವಡಿಸುತ್ತಿದೆ. ಈ ಫೋನ್‌ನಲ್ಲಿ ನೀಡಲಾಗಿರುವ 'ಇಂಟೆಲಿಜೆಂಟ್‌ ಫೋಟೊಸ್‌' ಆಯ್ಕೆಯು ಒಂದೇ ರೀತಿ ಫೋಟೊಗಳಲ್ಲಿ ಚೆಂದವಾದುದನ್ನು ಆಯ್ಕೆ ಮಾಡಿಕೊಳ್ಳಲು ಸಲಹೆ ನೀಡುತ್ತದೆ. ಫೋಟೊ ಫೈಲ್‌ ಡೂಪ್ಲಿಕೇಟ್‌ ಆಗಿದ್ದರೆ, ಫೋನ್‌ ಸಂಗ್ರಹ ಖಾಲಿ ಮಾಡುವಾಗ ಅಂತಹ ಫೈಲ್‌ ತೋರಿಸುತ್ತದೆ. ಇದರೊಂದಿಗೆ ಸ್ಮಾರ್ಟ್‌ ಪೇಸ್ಟ್‌ ಮತ್ತು ಸಜೆಸ್ಟ್‌ ನೋಟಿಫಿಕೇಷನ್‌ ಆಯ್ಕೆಗಳೂ ಇವೆ.

ಗ್ಯಾಲಕ್ಸಿ ಎಂ01 ಕೋರ್‌ ಗುಣಲಕ್ಷಣಗಳು

ಡಿಸ್‌ಪ್ಲೇ: 5.3 ಇಂಚು ಎಚ್‌ಡಿ+ಟಿಎಫ್‌ಟಿ
ಪ್ರೊಸೆಸರ್‌: ಮೀಡಿಯಾಟೆಕ್‌ ಎಂಟಿ6739
ಕ್ಯಾಮೆರಾ: 8ಎಂಪಿ; ಸೆಲ್ಫಿಗಾಗಿ 5ಎಂಪಿ
ಸಾಮರ್ಥ್ಯ: 1ಜಿಬಿ/2ಜಿಬಿ ರ್‍ಯಾಮ್‌+16ಜಿಬಿ/32ಜಿಬಿ ರ್‍ಯಾಮ್‌
ಬ್ಯಾಟರಿ: 3,000ಎಂಎಎಚ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT