ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pixel 7 Pro: ಗೂಗಲ್ ಹೊಸ ಸ್ಮಾರ್ಟ್‌ಫೋನ್ ದೇಶದಲ್ಲಿ ಬಿಡುಗಡೆ

ಪಿಕ್ಸೆಲ್ ಸರಣಿಯಲ್ಲಿ ಹೊಸ ಸ್ಮಾರ್ಟ್‌ಫೋನ್ ಪರಿಚಯಿಸಿದ ಗೂಗಲ್
Last Updated 13 ಅಕ್ಟೋಬರ್ 2022, 10:38 IST
ಅಕ್ಷರ ಗಾತ್ರ

ಬೆಂಗಳೂರು: ಟೆಕ್ ಲೋಕದ ಪ್ರಮುಖ ಸಂಸ್ಥೆ ಗೂಗಲ್, ಪಿಕ್ಸೆಲ್ ಸರಣಿಯಲ್ಲಿ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಗ್ಯಾಜೆಟ್ ಮಾರುಕಟ್ಟೆಗೆ ಪರಿಚಯಿಸಿದೆ.

ಈ ಬಾರಿ ಗೂಗಲ್ ಬಿಡುಗಡೆ ಮಾಡಿರುವ ಪಿಕ್ಸೆಲ್ 7 ಮತ್ತು ಪಿಕ್ಸೆಲ್ 7 ಪ್ರೊ ಸ್ಮಾರ್ಟ್‌ಫೋನ್‌ಗಳು, ದೇಶದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದೆ.

ಗೂಗಲ್ ಪಿಕ್ಸೆಲ್ 7
ಗೂಗಲ್‌ನ ನೂತನ ಪಿಕ್ಸೆಲ್ 7 ಸ್ಮಾರ್ಟ್‌ಫೋನ್ 8GB RAM + 128GB ಮಾದರಿಗೆ ದೇಶದಲ್ಲಿ ₹59,999 ದರವಿದೆ. ಅಲ್ಲದೆ, ಸ್ನೋ, ಒಬ್ಸಿಡಿಯನ್ ಮತ್ತು ಲೆಮನ್‌ಗ್ರಾಸ್ ಎಂಬ ಮೂರು ಬಣ್ಣಗಳಲ್ಲಿ ದೊರೆಯುತ್ತದೆ ಎಂದು ಗೂಗಲ್ ಹೇಳಿದೆ.

ಪಿಕ್ಸೆಲ್ 7 ಸ್ಮಾರ್ಟ್‌ಫೋನ್‌ನಲ್ಲಿ 50 ಮೆಗಾಪಿಕ್ಸೆಲ್ ಸಹಿತ ಎರಡು ಕ್ಯಾಮೆರಾ ಹೊಂದಿದೆ. ಅಲ್ಲದೆ, 10.8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಕೂಡ ಇದರಲ್ಲಿದೆ.

ಗೂಗಲ್ ಪಿಕ್ಸೆಲ್ 7 ಪ್ರೊ ಸ್ಮಾರ್ಟ್‌ಫೋನ್ 12GB RAM + 128GB ಮಾದರಿಗೆ ₹84,999 ದರವಿದೆ. ಹ್ಯಾಜೆಲ್, ಒಬ್ಸಿಡಿಯನ್ ಮತ್ತು ಸ್ನೋ ಎಂಬ ಮೂರು ಬಣ್ಣಗಳಲ್ಲಿ 7 ಪ್ರೊ ದೊರೆಯಲಿದೆ.
ಆರಂಭಿಕ ಕೊಡುಗೆಯಾಗಿ ಕ್ಯಾಶ್‌ಬ್ಯಾಕ್, ನೋ ಕಾಸ್ಟ್ ಇಎಂಐ ಆಯ್ಕೆಗಳು ಫ್ಲಿಪ್‌ಕಾರ್ಟ್‌ನಲ್ಲಿ ದೊರೆಯಲಿದೆ.

ಗೂಗಲ್ ಪಿಕ್ಸೆಲ್ 7 ಪ್ರೊ ಸ್ಮಾರ್ಟ್‌ಫೋನ್‌ನಲ್ಲಿ 50 ಮೆಗಾಪಿಕ್ಸೆಲ್ ಮತ್ತು 48 ಮೆಗಾಪಿಕ್ಸೆಲ್ ಟೆಲಿಫೋಟೊ ಲೆನ್ಸ್ ಸಹಿತ ಹಿಂಬದಿ ಕ್ಯಾಮೆರಾ ಹಾಗೂ 10.8 ಮೆಗಾಪಿಕ್ಸೆಲ್ ಸೆಲ್ಫಿ ಜತೆಗೆ ಲಭ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT