ರಿಯಲ್‌ಮಿ 3 ಬಿಡುಗಡೆ

ಮಂಗಳವಾರ, ಮಾರ್ಚ್ 26, 2019
29 °C

ರಿಯಲ್‌ಮಿ 3 ಬಿಡುಗಡೆ

Published:
Updated:
Prajavani

‘ರಿಯಲ್‌ಮಿ’ ಸ್ಮಾರ್ಟ್‌ಫೋನ್‌ ಕಂಪನಿಯು ಹೀಲಿಯೊ ಪಿ 70 ಪ್ರೊಸೆಸರ್‌ನ ಮೂರು ಮೊಬೈಲ್‌ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಇದು 4230 ಎಂಎಎಚ್‌ ಬ್ಯಾಟರಿ ಹೊಂದಿದ್ದು, ತನ್ನ ವಿಭಾಗದಲ್ಲಿ ದೀರ್ಘ ಬ್ಯಾಟರಿ ಅವಧಿ ಹೊಂದಿದೆ.

‘ರಿಯಲ್‌ಮಿ’ 3ರಲ್ಲಿ 13 ಎಂಪಿ+2 ಎಂಪಿ ಡ್ಯುಯೆಲ್‌ ರೇರ್‌ ಕ್ಯಾಮೆರಾ ಜೊತೆಗೆ ನೈಟ್‌ ಸ್ಕೇಪ್‌ ಮತ್ತು ಕ್ರೋಮಾ ಬೂಸ್ಟ್‌ ಮೋಡ್‌ ಇದೆ. ಇದು 3ಜಿಬಿ ರ‍್ಯಾಮ್‌+32 ಜಿಬಿ ರ‍್ಯಾಮ್‌ ಹಾಗೂ 4ಜಿಬಿ ರ‍್ಯಾಮ್‌+62ಜಿಬಿ ರ‍್ಯಾಮ್‌ಗಳ ಎರಡು ಮಾದರಿಗಳಲ್ಲಿ ಲಭ್ಯವಿದೆ. ಜತೆಗೆ 6.2 ಇಂಚು ಡ್ಯೂಡ್ರಾಪ್‌ ಫೂಲ್‌ಸ್ಕ್ರೀನ್‌ ಮತ್ತು ಟ್ರಿಪಲ್‌ ಸಿಮ್‌ ಸ್ಲಾಟ್‌ಗಳಿದ್ದು, 256 ಜಿಬಿಗಳಿಗೆ ವಿಸ್ತರಿಸಬಹುದು.

ಈ ಎರಡೂ ಮಾದರಿಗಳನ್ನು ಕ್ರಮವಾಗಿ ₹8,999 ಹಾಗೂ ₹10,999 ಬೆಲೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಉಪಕರಣ ರೇಡಯೆಂಟ್‌ ಬ್ಲ್ಯೂ, ಡೈನಾಮಿಕ್‌ ಬ್ಲ್ಯಾಕ್‌ ಮತ್ತು ಕ್ಲಾಸಿಕ್‌ ಬ್ಲ್ಯಾಕ್‌ ಬಣ್ಣಗಳಲ್ಲಿ ಲಭ್ಯವಿದೆ. ಈ ಮಾದರಿಗಳು ಫ್ಲಿಪ್‌ಕಾರ್ಟ್‌ ಡಾಟ್‌ಕಾಮ್‌ ಮತ್ತು ರಿಯಲ್‌ ಮಿ ಡಾಟ್‌ ಕಾಮ್‌ಗಳಲ್ಲಿ ಮಾರ್ಚ್‌ 12ರಂದು ಮಧ್ಯಾಹ್ನ 12ರಿಂದ ಮಾರಾಟ ಆಗಲಿವೆ. ಮಾಹಿತಿಗೆ www.realme.com.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !