ಕೊಳ್ಳೇಗಾಲ ಶರ್ಮ

ಮಿಂಚಿನ ವೇಗದಲ್ಲಿ ಹಾರುವ ದುಂಬಿಗಳ ವಿಡಿಯೊ ಹಿಡಿಯುವ ಉಪಕರಣ ಬಂದಿದೆ.

ಭೃಂಗದ ಬೆನ್ನೇರಿ ಬರುವುದು ಕೇವಲ ಕಲ್ಪನಾ ವಿಲಾಸವಷ್ಟೆ ಅಲ್ಲ. ಕ್ಯಾಮೆರಾ ಕೂಡ ಆಗಬಹುದು ಎನ್ನುತ್ತದೆ ಇತ್ತೀಚೆಗೆ ಸೈನ್ಸ್ ರೋಬೋಟಿಕ್ಸ್ ಪತ್ರಿಕೆಯಲ್ಲಿ ಜರ್ಮನಿಯ ಫ್ರೈಬರ್ಗ್ ವಿಶ್ವವಿದ್ಯಾನಿಲಯದ ಥಾಂಗ್ ವೋಡಾನ್ ಮತ್ತು ಸಂಗಡಿಗರು ಪ್ರಕಟಿಸಿರುವ ವರದಿ. ಸ್ಟ್ರಾ ಮತ್ತು ಸಂಗಡಿಗರು ಹಲವು ಕಿಲೋಮೀಟರುಗಳ ದೂರದಲ್ಲಿ ಹಾರುತ್ತಿರುವ ಜೇನ್ನೊಣಗಳ ವಿಡಿಯೊವನ್ನು ಸುಸ್ಪಷ್ಟವಾಗಿ ಸೆರೆ ಹಿಡಿಯಬಲ್ಲ ತಂತ್ರೋಪಕರಣವನ್ನು ರೂಪಿಸಿದ್ದಾರಂತೆ.

ಜೇನ್ನೊಣಗಳ ಚಿತ್ರ ತೆಗೆಯುವುದು ಹೊಸತೇನಲ್ಲ. ಸೂರ್ಯಕಾಂತಿ ಹೂವಿನ ಮೇಲೆ ಹಾರುತ್ತಿರುವ ಚಿಟ್ಟೆ, ಜೇನ್ನೊಣಗಳ ಚಿತ್ರಗಳನ್ನು ತೆಗೆಯುವುದೇ ಒಂದು ಕಲೆ. ಇಂತಹ ಚಿತ್ರಗಳು ಸಾಕಷ್ಟು ದೊರೆಯುತ್ತವೆ. ಹಾಗೆಯೇ ಅವುಗಳ ಹಾರಾಟದ ವಿಡಿಯೊಗಳು ಬೇಕಾದಷ್ಟಿವೆ. ಆದರೆ ಇವುಗಳಲ್ಲೆಲ್ಲದರಲ್ಲೂ ಒಂದು ದೋಷವಿದೆ. ಜೇನ್ನೊಣಗಳ ರೆಕ್ಕೆಗಳು ಸ್ಪಷ್ಟವಾಗಿ ಸಿಗುವುದಿಲ್ಲ. ಮಸುಕಾಗಿ ಅಥವಾ ಬ್ಲರ್ ಆಗಿ ಕಾಣುತ್ತವೆ. ರೆಕ್ಕೆಗಳು ಬ್ಲರ್ ಆದರೂ ದುಂಬಿಗಳು ಸುಸ್ಪಷ್ಟವಾಗಿರುವ ಚಿತ್ರಗಳನ್ನು ಕಲಾತ್ಮಕ ಎಂದರೂ, ಕೀಟಗಳನ್ನು ಅಧ್ಯಯನ ಮಾಡುವ ವಿಜ್ಞಾನಿಗಳಿಗೆ ಅವು ಸಮಾಧಾನ ತರುವುದಿಲ್ಲ. ಏಕೆಂದರೆ ಕೀಟಗಳು ಅದು ಹೇಗೆ ತಟಕ್ಕನೆ ದಿಕ್ಕು ಬದಲಿಸುತ್ತವೆ, ತಲೆಕೆಳಗೆ ಹಾರುತ್ತವೆ, ಸರ್ರನೆ ಮೇಲೇರುತ್ತವೆ ಎನ್ನುವುದನ್ನು ತಿಳಿಯಬೇಕಾದರೆ, ಹಾರುವಾಗ ಅವುಗಳ ರೆಕ್ಕೆಗಳು ಹೇಗೆಲ್ಲ ಚಲಿಸುತ್ತಿರುತ್ತವೆ ಎನ್ನುವುದನ್ನು ಸ್ಪಷ್ಟವಾಗಿ ನೋಡಬೇಕಾಗುತ್ತದೆ.

ಸ್ಪಷ್ಟವಾಗಿ ಸಿಗಬೇಕೆಂದರೆ ಹೈಸ್ಪೀಡ್ ಕ್ಯಾಮೆರಾಗಳನ್ನು ಬಳಸಬೇಕು. ಏಕೆಂದರೆ ಅವುಗಳು ರೆಕ್ಕೆಗಳನ್ನು ಕನಿಷ್ಠ ಎಂದರೆ ಸೆಕೆಂಡಿಗೆ ಇನ್ನೂರು ಬಾರಿ ಬಡಿಯುತ್ತವೆ. ಸೊಳ್ಳೆಯಂತೂ ಸೆಕೆಂಡಿಗೆ ಆರುನೂರು ಬಾರಿ ರೆಕ್ಕೆಗಳನ್ನು ಬಡಿಯಬಲ್ಲುದು. ನಮ್ಮ ಕಣ್ಣುಗಳು ಮೂರರಿಂದ ನಾಲ್ಕು ಸೆಕೆಂಡಿಗೆ ಒಮ್ಮೆ ಮಾತ್ರ ಮಿಟುಕಬಲ್ಲವು. ಹೀಗಾಗಿಯೇ ನಮಗೆ ಕೀಟಗಳ ಚಲನೆ ಮಾಟದಂತೆ ಕಾಣುತ್ತದೆ. ಹೈ ಸ್ಪೀಡ್ ಕ್ಯಾಮೆರಾಗಳನ್ನು ಬಳಸಿ, ಹಾರುವ ಕೀಟದ ರೆಕ್ಕೆಗಳನ್ನು ಚಿತ್ರಿಸಬಹುದಾದರೂ, ರೆಕ್ಕೆಗಳ ಅಥವಾ ಕೀಟಗಳ ಚಲನೆಗಳನ್ನಲ್ಲ. ಶರವೇಗದಿಂದ ಹಾರುತ್ತ, ಕಣ್ಣೆವೆ ಮುಚ್ಚುವುದರೊಳಗೆ ದಿಕ್ಕು ಬದಲಿಸಿಕೊಳ್ಳುವ ಜೇನ್ನೊಣಗಳಂತಹ ಕೀಟಗಳ ವಿಡಿಯೊ ತೆಗೆಯಲು, ಎವೆ ಇಕ್ಕದೆ ಗಮನಿಸುತ್ತಾ, ಸುಸ್ಪಷ್ಟವಾದ ಚಿತ್ರ ಮತ್ತು ವಿಡಿಯೊ ನೀಡುವ ಉಪಕರಣ ಬೇಕು. ಇಂತಹ ಸಾಧನವೊಂದನ್ನು ವೋಡಾನ್ ತಂಡ ರೂಪಿಸಿದೆ. ಇದು ಹಾರುವ ಕೀಟಗಳು ಎಲ್ಲೇ ಇದ್ದರೂ ಎವೆ ಇಕ್ಕದೆ ಅವುಗಳತ್ತಲೇ ತಿರುಗುವ ಟ್ರ್ಯಾಕಿಂಗ್ ವ್ಯವಸ್ಥೆ. ವೋಡಾನ್ ತಂಡ ಇದನ್ನು ಫಾಸ್ಟ್ ಲಾಕ್ ಆನ್ ಅಥವಾ ಫ್ಲೋ ಎಂದು ಕರೆದಿದೆ. ಈ ಉಪಕರಣವನ್ನು ಸಾಧಾರಣ ಕ್ಯಾಮೆರಾ, ಹೈಸ್ಪೀಡ್ ಕ್ಯಾಮೆರಾ ಹಾಗೂ ಸ್ಮಾರ್ಟ್ ಫೋನುಗಳಲ್ಲಿಯೂ ಬಳಸಬಹುದಂತೆ.

ಕ್ಯಾಮೆರಾ ಟ್ರಾಕಿಂಗ್ ವ್ಯವಸ್ಥೆಗಳನ್ನು ಈಗಾಗಲೇ ಹಲವು ಕಡೆಯಲ್ಲಿ ಬಳಸುತ್ತಿದ್ದೇವೆ. ಕ್ರಿಕೆಟ್ ಆಟದಲ್ಲಿ ಚೆಂಡು ಎತ್ತ ಹಾರಿತು ಎನ್ನುವುದನ್ನು ಥರ್ಡ್ ಅಂಪೈರಿಗೆ ತೋರಿಸುವುದು ಇಂತಹ ವ್ಯವಸ್ಥೆ. ಸದಾ ಚೆಂಡಿನತ್ತಲೇ ಕ್ಯಾಮೆರಾ ಮುಖ ಮಾಡಿಕೊಂಡಿರುವಂತೆ ಇದನ್ನು ರೂಪಿಸಿರುತ್ತಾರೆ. ವೋಡಾನ್ ಉಪಕರಣದಲ್ಲಿಯೂ ಕನ್ನಡಿಯೊಂದು ಇದೇ ರೀತಿ ಸದಾ ಕೀಟದತ್ತ ಮುಖ ಮಾಡಿಕೊಂಡಿರುವಂತೆ ವ್ಯವಸ್ಥೆ ಇದೆ. ಇದಕ್ಕಾಗಿ ಕೀಟದ ಬೆನ್ನಿಗೊಂದು ಪುಟ್ಟ ಕನ್ನಡಿಯನ್ನು ಅಳವಡಿಸಿರುತ್ತಾರೆ. ಈ ಕನ್ನಡಿ ಕ್ಯಾಮೆರಾದ ಪಕ್ಕದಲ್ಲಿರುವ ದೀಪವೊಂದು ಚೆಲ್ಲಿದ ಇನ್ಫ್ರಾರೆಡ್ ಕಿರಣಗಳನ್ನು ಪ್ರತಿಫಲಿಸುತ್ತದೆ. ಕೀಟ ಇರುವ ಜಾಗವನ್ನು ಕ್ಯಾಮೆರಾಗೆ ತಿಳಿಸುತ್ತದೆ. ಫ್ಲೋದಲ್ಲಿರುವ ಒಂದು ಸೆನ್ಸಾರು ಬೆಳಕು ಯಾವ ದಿಕ್ಕಿನಿಂದ ಬರುತ್ತಿದೆ ಎಂದು ಗುರುತಿಸಿ, ಮೈಕ್ರೊಸೆಕೆಂಡಿನೊಳಗೆ ಆ ದಿಕ್ಕಿನತ್ತ ತಿರುಗುವಂತೆ ಗಿಯರು ವ್ಯವಸ್ಥೆ ಇದೆ. ಈ ಗಿಯರುಗಳು ಕ್ಯಾಮೆರಾವನ್ನೂ ಆ ದಿಕ್ಕಿಗೇ ತಿರುಗಿಸುತ್ತವೆ. ಹೀಗೆ ಕೀಟ ಎತ್ತ ಸಾಗುತ್ತದೆಯೋ ಅತ್ತಲೇ ಈ ಫ್ಲೋ ಕಣ್ಣು ನೆಟ್ಟುಕೊಂಡಿರುತ್ತದೆ.

ಫ್ಲೋ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಬಳಸಿ ಬಯಲಿನಲ್ಲಿ ಸ್ವೇಚ್ಛೆಯಾಗಿ ಹಾರಾಡುತ್ತಿರುವ ಯಾವುದೇ ಕೀಟದ ಚಲನೆಯನ್ನೂ ಚಿತ್ರೀಕರಿಸಬಹುದು. ಇದಕ್ಕೂ ಮೊದಲು ಹೀಗೆ ಕೀಟಗಳ ಹಾರಾಟವನ್ನು ಅಧ್ಯಯನ ಮಾಡಬೇಕೆಂದರೆ, ಅವನ್ನು ಒಂದು ದಾರದ ತುದಿಗೆ ಬಂಧಿಸಿ, ಹೈಸ್ಪೀಡ್ ಕ್ಯಾಮೆರಾಗಳನ್ನು ಬಳಸಿ ಅಧ್ಯಯನ ಮಾಡುತ್ತಿದ್ದರು. ಇದರಿಂದಾಗಿ, ಹೊರಗೆ ಬಯಲಿನಲ್ಲಿ ಹಾರಾಡುವ ಕೀಟಗಳ ರೆಕ್ಕೆಗಳು ಹೇಗೆ ಚಲಿಸುತ್ತವೆ ಎಂಬುದನ್ನು ತಿಳಿಯುವುದು ಕಷ್ಟವಾಗಿತ್ತು. ಅಲ್ಲದೆ ಬಯಲಿನಲ್ಲಿ ಕೀಟಗಳ ಹಾರಾಡುವಂತೆ ಸೂತ್ರಕ್ಕೆ ಸಿಕ್ಕಿದ ಕೀಟಗಳು ಚಲಿಸಲಾರವಷ್ಟೆ! ಫ್ಲೋ ಈ ಎಲ್ಲ ತೊಂದರೆಗಳನ್ನೂ ದೂರ ಮಾಡಿದೆ ಎನ್ನುತ್ತಾರೆ ವೋಡಾನ್.

ಈ ಹಿಂದೆಯೂ ಕೀಟಗಳನ್ನು ಟ್ರ್ಯಾಕ್ ಮಾಡಲು ಸೆನ್ಸಾರುಗಳನ್ನು ಬಳಸಲಾಗಿತ್ತು. ಆದರೆ ಅದು ಕೀಟಗಳು ಎಲ್ಲಿವೆ ಎಂಬುದನ್ನು ತಿಳಿಯಲಷ್ಟೆ ನೆರವಾಗಿದ್ದುವು. ಅವು ಕೀಟಗಳು ಯಾವ ಕಡೆಯಿಂದ ಇನ್ಯಾವ ಕಡೆಗೆ ಸಾಗಿದುವು ಎಂದಷ್ಟೆ ತಿಳಿಸುತ್ತಿದ್ದುವು. ಕೀಟಗಳ ಹಾರಾಟದ ರೀತಿಯನ್ನು ಚಿತ್ರಿಸಲಾಗಲಿ, ಅಧ್ಯಯನ ಮಾಡಲಾಗಲಿ ಅವು ನೆರವಾಗುತ್ತಿರಲಿಲ್ಲ. ವೋಡಾನ್ ತಂಡದ ಫ್ಲೋ ಉಪಕರಣ ಇದನ್ನು ಸುಲಭವಾಗಿಸಿದೆ. ಅಷ್ಟೇ ಅಲ್ಲ. ಎಲ್ಲರ ಕೈಗೂ ಇಂತಹ ಅಧ್ಯಯನಗಳು ಎಟುಕುವಂತೆ ಮಾಡಲಿವೆ ಎನ್ನುತ್ತಾರೆ ವೋಡಾನ್.

ಫ್ಲೋ ಉಪಕರಣವನ್ನು ಡ್ರೋನುಗಳಲ್ಲಿರುವ ಕ್ಯಾಮೆರಾಗೂ ಇವರು ಜೋಡಿಸಿದ್ದಾರೆ. ದುಂಬಿಗಳನ್ನು ಹಾರಬಿಟ್ಟು, ಡ್ರೋನು ಅವುಗಳ ಬೆಂಬತ್ತುವಂತೆ ಮಾಡಿದ್ದಾರೆ. ಡ್ರೋನುಗಳಲ್ಲಿರುವ ಕ್ಯಾಮೆರಾ ತಪ್ಪದೆ ಹೀಗೆ ಗುರುತು ಮಾಡಿದ ನೊಣಗಳ ಜೊತೆಗೇ ಹಾರಿ, ಅವುಗಳ ವಿಡಿಯೋವನ್ನು ಚಿತ್ರಿಸಿದೆ. ಸುಸ್ಪಷ್ಟವಾಗಿ. ಫ್ಲೋ ಆಗಮಾಡಿಕೊಡುವ ಕೀಟಗಳ ಇಂತಹ ಅಧ್ಯಯನಗಳು, ಕೀಟದಂತೆಯೇ ಸರಾಗವಾಗಿ ಹಾರುವ ಪುಟಾಣಿ ಡ್ರೋನುಗಳನ್ನು ವಿನ್ಯಾಸ ಮಾಡಲೂ ನೆರವಾಗಬಲ್ಲುವು ಎನ್ನುವುದು ಆಶಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.