ಭಾರತ ಸರ್ಕಾರ ಫೆ. 20ರಿಂದ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ವಿಡಿಯೊಗಳು ಮತ್ತು ಸುಳ್ಳು ಮಾಹಿತಿಗಳ ಹಂಚಿಕೆಯ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ಸಿದ್ಧತೆ ನಡೆಸುತ್ತಿದೆ. ಹೀಗೆಂದರೆ ಏನು? ಈಗ ಯಾರಾದರೂ ಕಂಪ್ಯೂಟರ್ ಬಳಸಿಕೊಂಡು, ನಕಲಿ ವಿಡಿಯೊಗಳನ್ನು ಸೃಷ್ಟಿಸಿ, ನೋಡುಗರನ್ನು ಅದು ನಿಜವೆಂದು ಭ್ರಮಿಸುವಂತೆ ಮಾಡಿ ಮೋಸಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದುಕೊಳ್ಳಿ. ಆದರೆ, ಸರ್ಕಾರ ಇಂತಹ ಪ್ರಯತ್ನಗಳನ್ನು ನಿಲ್ಲಿಸಲು ಬಯಸುತ್ತಿದೆ. ಸರ್ಕಾರದ ನೂತನ ನಿಯಮಗಳು ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ನಂತಹ ಕಂಪನಿಗಳು ಕಟ್ಟುನಿಟ್ಟಿನ ಆದೇಶಗಳನ್ನು ಪಾಲಿಸುವಂತೆ ಮಾಡಲಿವೆ. ಅವುಗಳು ಇದನ್ನು ಅನುಸರಿಸದೆ ಹೋದರೆ, ಕಠಿಣ ಕ್ರಮಗಳನ್ನು ಎದುರಿಸಬೇಕಾಗುತ್ತದೆ.

ನಿಜಕ್ಕೂ ಇಲ್ಲಿ ಏನಾಗುತ್ತಿದೆ?

ನೀವು ಒಂದು ವಿಡಿಯೊ ನೋಡುವಾಗ, ಅದರಲ್ಲಿ ಓರ್ವ ಪ್ರಸಿದ್ಧ ವ್ಯಕ್ತಿ ಆಡದ ಮಾತುಗಳನ್ನು ಆಡುತ್ತಿರುವಂತೆ, ಮಾಡದ ಕೆಲಸವನ್ನು ಮಾಡುತ್ತಿರುವಂತೆ ಕಂಡುಬರುತ್ತದೆ. ಇಂತಹ ವಿಡಿಯೊಗಳನ್ನು 'ಡೀಪ್ಫೇಕ್' ಎಂದು ಕರೆಯಲಾಗುತ್ತದೆ. ಇವುಗಳು ಕಂಪ್ಯೂಟರ್ ಮೂಲಕ ಸೃಷ್ಟಿಸುವ ವಿಡಿಯೊಗಳಾಗಿದ್ದು, ಮೇಲ್ನೋಟಕ್ಕೆ ಸಂಪೂರ್ಣ ನಿಜ ಎಂಬಂತೆ ಕಂಡರೂ, ಅವು ನಕಲಿ ವಿಡಿಯೊಗಳಾಗಿರುತ್ತವೆ. ಇಂತಹ ವಿಡಿಯೊಗಳು ಕಾಳ್ಗಿಚ್ಚಿನಂತೆ ಹಬ್ಬಿ, ಜನರ ಜೀವನಕ್ಕೆ ಮತ್ತು ಸಮಾಜಕ್ಕೆ ಹಾನಿ ಮಾಡುತ್ತಿರುವುದನ್ನು ಸರ್ಕಾರ ಗಮನಿಸಿದೆ. ಆದ್ದರಿಂದಲೇ ಇಂತಹ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ.

ಹೇಗೆ ದಿನಸಿ ಅಂಗಡಿಗಳಲ್ಲಿ ನಾವು ಖರೀದಿಸುವ ವಸ್ತುಗಳಲ್ಲಿ ನಿಖರವಾದ ಎಕ್ಸ್ಪೈರಿ ದಿನಾಂಕವನ್ನು ಸ್ಪಷ್ಟವಾಗಿ ನಮೂದಿಸಲಾಗಿರುತ್ತದೆಯೋ, ಹಾಗೇ ಸಾಮಾಜಿಕ ಜಾಲತಾಣ ಸಂಸ್ಥೆಗಳೂ ಸಹ ಎಲ್ಲ ಎಐ ನಿರ್ಮಿತ ಚಿತ್ರಣಗಳನ್ನು ಸ್ಪಷ್ಟವಾಗಿ ನಮೂದಿಸಲೇಬೇಕಾಗುತ್ತದೆ. ಯಾರಾದರೂ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಚಿತ್ರ ಅಥವಾ ವಿಡಿಯೊಗಳನ್ನು ನಿರ್ಮಿಸಿದರೆ, ಅದನ್ನು ಎಲ್ಲರಿಗೂ ಕಾಣುವ ರೀತಿಯಲ್ಲೇ ಎಐ ನಿರ್ಮಿತ ಎಂದು ದಾಖಲಿಸಬೇಕು. ಇದರ ಪರಿಣಾಮವಾಗಿ, ಇನ್ನು ಮುಂದೆ ನಿಮ್ಮ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಚಿತ್ರಗಳು, ದೃಶ್ಯಗಳು ನೈಜ ಎನ್ನುವಂತೆ ಬಚ್ಚಿಟ್ಟು ಕೂರಲು ಸಾಧ್ಯವಿಲ್ಲ.

ಸಿಂಥೆಟಿಕ್ ಕಂಟೆಂಟ್ ಎಂದರೇನು?

ಕಂಪ್ಯೂಟರ್ ಬಳಸಿಕೊಂಡು, ಸಂಪೂರ್ಣವಾಗಿ ನಿಜ ಎನ್ನುವ ರೀತಿಯಲ್ಲಿ ಭಾಸವಾಗುವಂತೆ ನಿರ್ಮಿಸಿರುವ ಯಾವುದೇ ಚಿತ್ರ ಅಥವಾ ದೃಶ್ಯವನ್ನು ಸಿಂಥೆಟಿಕ್ ಕಂಟೆಂಟ್ ಎಂದು ಕರೆಯಲಾಗುತ್ತದೆ. ಇದು ನೈಜ ಎಂಬಂತೆ ಭಾಸವಾದರೂ, ಇದು ನಕಲಿಯಾಗಿರುತ್ತದೆ. ಇದೊಂದು ರೀತಿ ಮ್ಯಾಜಿಕ್ ಟ್ರಿಕ್ನಂತಿದ್ದು, ನೀವು ನೋಡುವುದು ನೈಜ ಎಂಬಂತೆ ಕಾಣುತ್ತದಾದರೂ, ಹಿನ್ನೆಲೆಯಲ್ಲಿ ಇದು ಕಂಪ್ಯೂಟರ್ ಕೈಚಳಕವಾಗಿರುತ್ತದೆ.

ಡೀಪ್ಫೇಕ್ ಹಾವಳಿಗೆ ಹಲವು ಉದಾಹರಣೆಗಳಿದ್ದು, ಓರ್ವ ಚಲನಚಿತ್ರ ನಟ / ನಟಿ ಹೇಳಿಯೇ ಇರದ ಆಘಾತಕಾರಿ ಹೇಳಿಕೆಗಳನ್ನು ಅವರು ಹೇಳಿರುವಂತೆ ತೋರಿಸುವುದು, ನೀವು ಎಂದಿಗೂ ಭೇಟಿ ನೀಡಿರದ ಸ್ಥಳದಲ್ಲಿ ನೀವು ನಿಂತಿರುವಂತಹ ಚಿತ್ರಗಳನ್ನು ನಿರ್ಮಿಸುವುದು, ನಿಮ್ಮ ಬಾಸ್ ಧ್ವನಿಯಲ್ಲಿ ಅವರು ಎಂದೂ ಹೇಳಿರದ ಧ್ವನಿ ಮುದ್ರಣವನ್ನು ಹಂಚುವುದು, ನಿಮ್ಮ ಪ್ರದೇಶದಲ್ಲೇ ಇರದ ಜೀವಿಯೊಂದು ನಿಮ್ಮ ಬೀದಿಯಲ್ಲಿ ನಡೆದು ಬರುವಂತೆ ಚಿತ್ರಿಸುವುದು ಇತ್ಯಾದಿಗಳು ಇದಕ್ಕೆ ನಾವು ಕಂಡಿರುವ ಉದಾಹರಣೆಗಳಾಗಿವೆ.

ಸರ್ಕಾರ ಈಗ 'ಫೋಟೊರಿಯಲಿಸ್ಟಿಕ್' ಆಗಿರುವ ಸಿಂಥೆಟಿಕ್ ಕಂಟೆಂಟ್ಗಳ ಕುರಿತು ಹೆಚ್ಚಿನ ಗಮನ ಹರಿಸುತ್ತಿದೆ. ಫೋಟೋರಿಯಲಿಸ್ಟಿಕ್ ಎಂದರೆ ಮೇಲ್ನೋಟಕ್ಕೆ ಎಷ್ಟರಮಟ್ಟಿಗೆ ನೈಜವಾಗಿ ಕಾಣುತ್ತದೆಂದರೆ, ಅದನ್ನು ನಕಲಿ ಎಂದು ಗುರುತಿಸಲು ಸಾಧ್ಯವಾಗುವುದಿಲ್ಲ. ನೀವು ಬಳಸುವ ಸ್ಮಾರ್ಟ್ ಫೋನ್ ಕ್ಯಾಮರಾವೇ ಸಾಕಷ್ಟು ಅದ್ಭುತ ಕೆಲಸಗಳನ್ನು ನಡೆಸುತ್ತದೆ. ಅದು ಸ್ವತಃ ಫೋಟೋಗಳನ್ನು ಹೆಚ್ಚು ಪ್ರಕಾಶಗೊಳಿಸುತ್ತದೆ, ಬಣ್ಣಗಳನ್ನು ಸರಿ ಹೊಂದಿಸುತ್ತದೆ, ಚರ್ಮವನ್ನು ಸುಗಮಗೊಳಿಸುತ್ತದೆ, ಮತ್ತು ಫಿಲ್ಟರ್ಗಳನ್ನು ಸೇರಿಸುತ್ತದೆ. ಆದರೆ ಇಂತಹ ದೈನಂದಿನ ಬಳಕೆಯ ಕಾರ್ಯಗಳನ್ನು ಅಕ್ರಮ ಸಿಂಥೆಟಿಕ್ ಕಂಟೆಂಟ್ ಎಂದು ಪರಿಗಣಿಸಲಾಗುವುದಿಲ್ಲ. ಯಾಕೆಂದರೆ, ಅವುಗಳನ್ನು ಯಾರನ್ನೋ ಮೋಸಗೊಳಿಸುವ ಸಲುವಾಗಿ ನಿರ್ಮಿಸಿಯೂ ಇರುವುದಿಲ್ಲ.

ಸಿಂಥೆಟಿಕ್ ಕಂಟೆಂಟ್ಗಳು ಸಂಪೂರ್ಣವಾಗಿ ನಿಷೇಧಿಸಲ್ಪಟ್ಟಿವೆಯೇ? ಇಲ್ಲ, ಕಾನೂನು ಬಾಹಿರ ಮಾದರಿಗಳು ಮಾತ್ರ ನಿಷೇಧಿಸಲ್ಪಟ್ಟಿವೆ

ಇದನ್ನು ನಾವು ಮುಖ್ಯವಾಗಿ ಅರ್ಥ ಮಾಡಿಕೊಳ್ಳಬೇಕು. ಸಿಂಥೆಟಿಕ್ ಕಂಟೆಂಟ್ ಅನ್ನು ಭಾರತದಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿಲ್ಲ. ಕೆಲವು ಕಾನೂನು ಬಾಹಿರ ಮಾದರಿಯವು ಮಾತ್ರ ನಿಷೇಧಗೊಂಡಿವೆ. ಇವೆರಡರಲ್ಲಿ ಭಾರಿ ವ್ಯತ್ಯಾಸವಿದೆ.

ಅನುಮತಿ ಇರುವುದೇನು? (ಲೀಗಲ್ ಸಿಂಥೆಟಿಕ್ ಕಂಟೆಂಟ್): ವಿಶೇಷ ದೃಶ್ಯ ಪರಿಣಾಮಗಳನ್ನು ಹೊಂದಿರುವ ಚಲನಚಿತ್ರಗಳು, ವಿಡಿಯೊಗಳು, ಹಾಸ್ಯ ಪ್ರದರ್ಶನಗಳು, ವಿಡಿಯೊ ಗೇಮ್ಗಳು, ಸರಿಯಾದ ಮಾಹಿತಿ ಹೊಂದಿರುವ ಎಐ ಟೂಲ್ಗಳು, ಕಾರ್ಟೂನ್ಗಳು, ಆ್ಯನಿಮೇಶನ್ಗಳು, ಮತ್ತು ಲೇಬಲ್ ಅಳವಡಿತ ಎಐ ನಿರ್ಮಿತ ಎಲಿಮೆಂಟ್ಗಳು.

ಯಾವುದಕ್ಕೆ ನಿರ್ಬಂಧವಿದೆ? (ಕಾನೂನು ಬಾಹಿರ ಸಿಂಥೆಟಿಕ್ ಕಂಟೆಂಟ್):

ಮಹಿಳೆಯರನ್ನು ಲೈಂಗಿಕ ರೀತಿಯಲ್ಲಿ ಬಿಂಬಿಸುವ ಅನುಮತಿ ರಹಿತ ಡೀಪ್ಫೇಕ್ ದೃಶ್ಯಗಳು, ತಪ್ಪು ರಾಜಕೀಯ ಮಾಹಿತಿಗಳನ್ನು ಹಂಚಲು ನಿರ್ಮಿಸಿರುವ ನಕಲಿ ವಿಡಿಯೊಗಳು, ವಂಚನೆ ಮಾಡಲು ಸೃಷ್ಟಿಸಿರುವ ಯಾರದ್ದೋ ಧ್ವನಿಯನ್ನು ಯಥಾವತ್ ಹೋಲುವ ಧ್ವನಿ, ಮತ್ತು ಯಾರದಾದರೂ ಗೌರವಕ್ಕೆ ಹಾನಿ ಉಂಟುಮಾಡುವ ಉದ್ದೇಶದ ಡೀಪ್ಫೇಕ್ಗಳು.

ಯಾರಾದರೂ ಚಲನಚಿತ್ರ ನಿರ್ದೇಶಕ ಭೂಮಿಯ ಮೇಲೆ ಅನ್ಯಗ್ರಹ ಜೀವಿಗಳು ದಾಳಿ ನಡೆಸುವಂತೆ ಚಿತ್ರೀಕರಿಸಿದರೆ, ಅದು ಚಲನಚಿತ್ರ ಎನ್ನುವುದು ಎಲ್ಲರಿಗೂ ತಿಳಿದಿರುವುದರಿಂದ ಅದಕ್ಕೆ ಅನುಮತಿ ಇರುತ್ತದೆ. ಆದರೆ, ಯಾರಾದರೂ ಒಬ್ಬ ವ್ಯಕ್ತಿಯ ಅನುಮತಿ ಇಲ್ಲದೆ, ಅವರು ಯಾವುದೋ ಅವಮಾನಕರ ಕಾರ್ಯದಲ್ಲಿ ನಿರತರಾಗಿರುವಂತೆ ವಿಡಿಯೊ ನಿರ್ಮಿಸಿದರೆ ಅದು ಕಾನೂನು ಬಾಹಿರ ಸಿಂಥೆಟಿಕ್ ಕಂಟೆಂಟ್ ಎನಿಸುತ್ತದೆ.

ಕಟ್ಟುನಿಟ್ಟಿನ ಸಮಯಾವಧಿ ವ್ಯವಸ್ಥೆ: ಎಲ್ಲವನ್ನೂ ಬದಲಿಸುವ ನಿಯಮ

ಸರ್ಕಾರ ಅತ್ಯಂತ ಗಂಭೀರವಾದ ಹೆಜ್ಜೆ ಇಡುವುದು ಇಲ್ಲಿಂದ. ಸಾಮಾಜಿಕ ಜಾಲತಾಣ ಕಂಪನಿಗಳಿಗೆ ಈಗ ದೃಶ್ಯಗಳನ್ನು ಕಟ್ಟುನಿಟ್ಟಿನ ಸಮಯಾವಧಿಯೊಳಗೆ ತೆಗೆದುಹಾಕುವ ಮಾರ್ಗಸೂಚಿ ಎದುರಾಗಲಿದೆ. ಇದು ಹಿಂದೆಂದಿಗಿಂತಲೂ ಹೆಚ್ಚು ವೇಗವಾಗಿ ಕ್ರಮ ಕೈಗೊಳ್ಳಲಿದೆ.

2 ಗಂಟೆಗಳ ಗಡುವು: ಅನುಮತಿ ರಹಿತವಾದ ಲೈಂಗಿಕ ಅಥವಾ ಪ್ರಣಯದಂತಹ ಅತ್ಯಂತ ಗಂಭೀರ ಪ್ರಕರಣಗಳಿಗೆ 2 ಗಂಟೆಗಳ ಗಡುವು ನೀಡಲಾಗಿದೆ. ಯಾರಾದರೂ ಓರ್ವ ಮಹಿಳೆಯ ನಕಲಿ ಪ್ರಣಯದ ವಿಡಿಯೊಗಳನ್ನು ಆಕೆಯ ಅನುಮತಿ ಇಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಹಾಕಿದರೆ, ಸಾಮಾಜಿಕ ಜಾಲತಾಣಗಳು ಅವುಗಳನ್ನು 2 ಗಂಟೆಗಳ ಒಳಗಾಗಿಯೇ ತೆಗೆದುಹಾಕಬೇಕು. ಇದು ನಿಜಕ್ಕೂ ಅತ್ಯಂತ ಕಟ್ಟುನಿಟ್ಟಿನ ಗಡುವಾಗಿದ್ದು, ಒಂದು ಸಿನೆಮಾ ನೋಡುವ ಸಮಯಕ್ಕಿಂತಲೂ ಕಡಿಮೆ ಅವಧಿಯಾಗಿದೆ!

3 ಗಂಟೆಗಳ ಗಡುವು: ಬೇರೆ ಯಾವುದಾದರೂ ಸರ್ಕಾರ ಅಥವಾ ನ್ಯಾಯಾಲಯಗಳು ಗುರುತಿಸಿರುವ ಕಾನೂನು ಬಾಹಿರವಾದ ಕಂಟೆಂಟ್ಗಳನ್ನು ತೆಗೆದು ಹಾಕಲು ಮೂರು ಗಂಟೆಗಳ ಗಡುವು ನೀಡಲಾಗಿದೆ. ಇದರಲ್ಲಿ ನಕಲಿ ರಾಜಕೀಯ ದೃಶ್ಯಗಳು, ಮಾನಹಾನಿಕರ ದೃಶ್ಯಗಳು, ಮತ್ತು ಇತರ ಕಾನೂನು ಬಾಹಿರ ಸಿಂಥೆಟಿಕ್ ಮೆಟೀರಿಯಲ್ಗಳಿಗೆ ಇದು ಅನ್ವಯವಾಗುತ್ತದೆ. ಈ ಮೊದಲು, ಸಾಮಾಜಿಕ ಜಾಲತಾಣ ಕಂಪನಿಗಳಿಗೆ ಇಂತಹ ದೃಶ್ಯಗಳನ್ನು ತೆಗೆದುಹಾಕಲು 36 ಗಂಟೆಗಳ ಸಮಯವಿತ್ತು. ಆದರೆ, ಈಗ ಅದನ್ನು ಕೇವಲ 3 ಗಂಟೆಗಳಿಗೆ ಇಳಿಸಲಾಗಿದೆ!

ಇದನ್ನು ಹಿಂದಿನ ವ್ಯವಸ್ಥೆಗೆ ಹೋಲಿಸಿ ನೋಡಿದರೆ, ಹಿಂದೆಲ್ಲ ಕಂಪನಿಗಳಿಗೆ ಒಂದು ಪೂರ್ಣ ದಿನ ಅಥವಾ ಅದಕ್ಕೂ ಹೆಚ್ಚಿನ ಸಮಯವಿತ್ತು. ಆದರೆ, ಸಾಮಾಜಿಕ ಜಾಲತಾಣಗಳು ಇಷ್ಟು ವೇಗವಾಗಿ ಕ್ರಮ ಕೈಗೊಳ್ಳಬೇಕಾಗಿದ್ದು, ಇಲ್ಲವಾದರೆ ಕಾನೂನು ರಕ್ಷಣೆ ಕಳೆದುಕೊಳ್ಳುವ, ಅಥವಾ ಕಾನೂನು ಕ್ರಮ ಎದುರಿಸು ಅಪಾಯ ಎದುರಾಗಲಿದೆ.

ನಿಮ್ಮ ಪಾತ್ರವೂ ಮುಖ್ಯವಾಗುತ್ತದೆ

ಒಂದು ವೇಳೆ ನೀವು ಎಐ ನಿರ್ಮಿತ ಕಂಟೆಂಟ್ ಅನ್ನು ಹಾಕುತ್ತೀರಿ ಎಂದಾದರೆ, ಅದನ್ನು ಸಾಮಾಜಿಕ ಜಾಲತಾಣಗಳಿಗೆ ತಿಳಿಸಲೇಬೇಕು. ನೀವು ಅವುಗಳಿಗೆ ಇದು ಎಐ ನಿರ್ಮಿತ ಎಂದು ತಿಳಿಸದಿದ್ದರೆ, ಅವುಗಳೇ ಅದು ಸಹಜವೇ, ಎಐ ನಿರ್ಮಿತವೇ ಎಂದು ಗುರುತಿಸಿ, ಅದಕ್ಕೆ ಅನುಗುಣವಾಗಿ ಹೆಸರಿಸಲಿವೆ. ಅನುಮತಿ ರಹಿತ ಡೀಪ್ಫೇಕ್ ಗಳಂತಹ ಕಾನೂನು ಬಾಹಿರ ಕಂಟೆಂಟ್ಗಳನ್ನು ಕಟ್ಟುನಿಟ್ಟಿನ ನಿಯಮಗಳಡಿ ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಲಾಗುತ್ತದೆ. ಆದ್ದರಿಂದ, ಯಾವುದು ನೈಜ, ಯಾವುದು ನಕಲಿ ಎನ್ನುವುದರ ಕುರಿತು ಪ್ರಾಮಾಣಿಕವಾಗಿರಬೇಕಾಗುತ್ತದೆ.

ನಾವು ನೀವೇಕೆ ಇದರ ಕುರಿತು ಆಲೋಚಿಸಬೇಕು?

ಈ ನಿಯಮಗಳು ನಿಮ್ಮನ್ನು ಡೀಪ್ಫೇಕ್ ಗಳಿಂದ ಉಂಟಾಗಬಲ್ಲ ಮಾನ ಹಾನಿಯಿಂದ, ತಪ್ಪು ಮಾಹಿತಿಗಳ ಹಂಚಿಕೆಯಿಂದ, ಮತ್ತು ಸಂಭಾವ್ಯ ಹಗರಣಗಳಿಂದ ರಕ್ಷಿಸಲು ನೆರವಾಗಲಿವೆ. ಇದರ ಪರಿಣಾಮವಾಗಿ, ಅಂತರ್ಜಾಲ ಹೆಚ್ಚು ಹೆಚ್ಚು ಸುರಕ್ಷಿತವಾಗುತ್ತಿದೆ. ಫೆ. 20ರಿಂದ ಹೊಸ ನಿಯಮಗಳು ಬರಲಿದ್ದು, ಕೆಲವು ವಿಚಾರಗಳನ್ನು ಸ್ಪಷ್ಟವಾಗಿಸಿಕೊಳ್ಳಬೇಕು. ಸಿಂಥೆಟಿಕ್ ಕಂಟೆಂಟ್ಗಳು ಸಂಪೂರ್ಣವಾಗಿ ನಿಷೇಧಿತವಾಗಿಲ್ಲ. ಆದರೆ, ಕಾನೂನು ಬಾಹಿರವಾದ ಡೀಪ್ಫೇಕ್ ಗಳನ್ನು ತೆಗೆದುಹಾಕಲು ಕಟ್ಟುನಿಟ್ಟಿನ 2-3 ಗಂಟೆಗಳ ಗಡುವು ವಿಧಿಸಲಾಗುತ್ತದೆ. ಆದ್ದರಿಂದ ಸಾಮಾಜಿಕ ಜಾಲತಾಣಗಳ ಬಳಕೆದಾರರು ಜಾಗರೂಕರಾಗಿದ್ದು, ಎಐ ನಿರ್ಮಿತ ಲೇಬಲ್ಗಳನ್ನು ಗುರುತಿಸಬೇಕು. ಏನಾದರೂ ಅತ್ಯಂತ ಪರಿಪೂರ್ಣ ಅಥವಾ ಆಘಾತಕಾರಿ ಎಂಬಂತೆ ಕಂಡರೆ, ಅದು ನಕಲಿಯೂ ಆಗಿರಬಹುದು.

ಇದೆಲ್ಲದರ ಪರಿಣಾಮವಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುವಂತಹ ಅಪಾಯಕಾರಿ ವಿಚಾರಗಳಿಗೆ ಈಗ ಭಾರತವು ಸಾಮಾಜಿಕ ಜಾಲತಾಣಗಳನ್ನೇ ಜವಾಬ್ದಾರಿಯಾಗಿಸಿದೆ. ಜನರನ್ನು ವಂಚಿಸಲು ಅಥವಾ ಅಪಾಯಕ್ಕೆ ಸಿಲುಕಿಸಲು ನಿರ್ಮಿಸುವ ಡೀಪ್ಫೇಕ್ಗಳನ್ನು ಇನ್ನು ಮುಂದೆ ಗರಿಷ್ಠ ಎರಡರಿಂದ ಮೂರು ಗಂಟೆಗಳ ಒಳಗೆ ಕ್ಷಿಪ್ರವಾಗಿ ತೆಗೆದುಹಾಕಬೇಕಾಗುತ್ತದೆ. ಇದು ಡಿಜಿಟಲ್ ಸುರಕ್ಷತೆಯ ನಿಟ್ಟಿನಲ್ಲಿ ನಿಜಕ್ಕೂ ಗೇಮ್ ಚೇಂಜರ್ ಆಗಿದೆ.

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.