ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಫೋನ್ 15 ಮಾರುಕಟ್ಟೆಗೆ: ಆ್ಯಪಲ್ ಸ್ಟೋರ್ ಎದುರು ಸರತಿ ಸಾಲಿನಲ್ಲಿ ನಿಂತ ಗ್ರಾಹಕರು

Published 22 ಸೆಪ್ಟೆಂಬರ್ 2023, 3:40 IST
Last Updated 22 ಸೆಪ್ಟೆಂಬರ್ 2023, 3:40 IST
ಅಕ್ಷರ ಗಾತ್ರ

ಮುಂಬೈ: ಆ್ಯಪಲ್‌ ಇಂಕ್‌ನ ಐಫೋನ್ 15 ಭಾರತದ ಮಾರುಕಟ್ಟೆಗೆ ಶುಕ್ರವಾರದಿಂದ ಲಭ್ಯವಾಗಲಿದೆ. ಇದಕ್ಕಾಗಿ ಮುಂಬೈನಲ್ಲಿರುವ ಆ್ಯಪಲ್ ಸ್ಟೋರ್‌ ಎದುರು ಬೆಳಿಗ್ಗೆಯಿಂದಲೇ ಗ್ರಾಹಕರು ಹೊಸ ಫೋನ್ ಖರೀದಿಗಾಗಿ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.

ಕ್ಯಾಲಿಫೋರ್ನಿಯಾದಲ್ಲಿರುವ ಸ್ಟೀವ್ ಜಾಬ್ಸ್ ಸಭಾಂಗಣದಲ್ಲಿ ಸೆ. 12ರಂದು ಐಫೋನ್‌ನ ವಿವಿಧ ಸರಣಿಯನ್ನು ಕಂಪನಿ ಮುಖ್ಯಸ್ಥ ಟಿಮ್ ಕುಕ್ ಬಿಡುಗಡೆ ಮಾಡಿದ್ದರು.

ಐಫೋನ್–15 ಸರಣಿಯ (ಐಫೋನ್–15, ಐಫೋನ್–15 ಪ್ಲಸ್, ಐಫೋನ್–15 ಪ್ರೊ, ಐಫೋನ್–15 ಪ್ರೊ ಮ್ಯಾಕ್ಸ್) ಫೋನ್‌ಗಳು, ಆ್ಯಪಲ್ ವಾಚ್ ಅಲ್ಟ್ರಾ–2 ಮತ್ತು ಆ್ಯಪಲ್ ವಾಚ್ ಸೀರಿಸ್ 9 ಅನ್ನು ಈ ಬಾರಿ ಬಿಡುಗಡೆಗೊಂಡಿವೆ.

iPhone 15, 15 Plus, 15 Pro and 15 Pro Max - ಇವೆಲ್ಲವೂ ಅತ್ಯಾಧುನಿಕ ವೈಶಿಷ್ಟ್ಯಗಳನ್ನೊಳಗೊಂಡಿದ್ದು, ಇದೇ ಮೊದಲ ಬಾರಿಗೆ 'ಮೇಕ್ ಇನ್ ಇಂಡಿಯಾ' ಐಫೋನ್ 15, ಜಾಗತಿಕ ಮಾರಾಟ ದಿನವಾದ ಸೆಪ್ಟೆಂಬರ್ 22ರಂದೇ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

6.1 ಇಂಚು ಮತ್ತು 6.7 ಇಂಚು ಡಿಸ್‌ಪ್ಲೇ ಗಾತ್ರದಲ್ಲಿ ಲಭ್ಯವಾಗುವ ಐಫೋನ್ 15 ಹಾಗೂ ಐಫೋನ್ 15 ಪ್ಲಸ್, ಗುಲಾಬಿ, ಹಳದಿ, ಹಸಿರು, ನೀಲಿ ಮತ್ತು ಕಪ್ಪು ಬಣ್ಣಗಳಲ್ಲಿ 128GB, 256GB, ಹಾಗೂ 512GB ಸ್ಟೋರೇಜ್ ಸಾಮರ್ಥ್ಯದ ಮಾದರಿಗಳಲ್ಲಿ ದೊರೆಯಲಿದೆ. ಬೆಲೆ ಅನುಕ್ರಮವಾಗಿ ₹79,900 ಮತ್ತು ₹89,900ರಿಂದ ಆರಂಭವಾಗಲಿದೆ.

iPhone 15 Pro ಮತ್ತು iPhone 15 Pro Max ಕೂಡ 6.1 ಇಂಚು ಮತ್ತು 6.7 ಇಂಚಿನ ಡಿಸ್‌ಪ್ಲೇ ಗಾತ್ರದಲ್ಲಿ ದೊರೆಯಲಿದ್ದು, ಕಪ್ಪು, ಬಿಳಿ, ನೀಲಿ ಮತ್ತು ನ್ಯಾಚುರಲ್ ಟೈಟಾನಿಯಂ ಫಿನಿಶ್ ಬಣ್ಣದಲ್ಲಿ ದೊರೆಯಲಿದೆ. iPhone 15 ಪ್ರೊ ಬೆಲೆ ₹1,34,900 ರಿಂದ ಆರಂಭವಾಗಲಿದ್ದು, 128GB, 256GB, 512GB, ಮತ್ತು 1TB ಸ್ಟೋರೇಜ್ ಸಾಮರ್ಥ್ಯದೊಂದಿಗೆ ಲಭ್ಯವಾಗಲಿದೆ.

iPhone 15 ಪ್ರೊ ಮ್ಯಾಕ್ಸ್ ₹1,59,900 ರಿಂದ ಆರಂಭವಾಗಲಿದ್ದು, 256GB, 512GB, ಮತ್ತು 1TB ಸ್ಟೋರೇಜ್ ಸಾಮರ್ಥ್ಯದೊಂದಿಗೆ ದೊರೆಯಲಿದೆ. ಭಾರತವೂ ಸೇರಿದಂತೆ 40ಕ್ಕೂ ಹೆಚ್ಚು ದೇಶಗಳ ಗ್ರಾಹಕರು ಸೆ.15ರಿಂದ ಮುಂಗಡವಾಗಿ ಕಾಯ್ದಿರಿಸಲು ಅವಕಾಶ ನೀಡಲಾಗಿತ್ತು. ಸೆ.22ರಿಂದ 15 ಸರಣಿಯ ಎಲ್ಲ ಐಫೋನ್‌ಗಳೂ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

‘ಗುಜರಾತ್‌ನ ಅಹಮದಾಬಾದ್‌ನಿಂದ ಬಂದಿರುವ ನಾನು ಗುರುವಾರ ಮಧ್ಯಾಹ್ನ 3 ಗಂಟೆಯಿಂದ ಸರತಿ ಸಾಲಿನಲ್ಲಿ ನಿಂತಿದ್ದೇನೆ. ಐಫೋನ್ 15 ಖರೀದಿಸಲು ಉತ್ಸುಕನಾಗಿದ್ದೇನೆ’ ಎಂದು ಗ್ರಾಹಕರೊಬ್ಬರು ಹೇಳಿದ್ದಾರೆ.

ಬೆಂಗಳೂರಿನ ವಿವೇಕ್ ಎಂಬುವವರು ಪ್ರತಿಕ್ರಿಯಿಸಿ, ‘ಐಫೋನ್‌ 15 ಪ್ರೊ ಖರೀದಿಸಲು ಬಂದಿದ್ದೇನೆ. ನಿಜಕ್ಕೂ ಖುಷಿಯಾಗುತ್ತಿದೆ’ ಎಂದಿದ್ದಾರೆ.

ಮತ್ತೊಬ್ಬ ಗ್ರಾಹಕ ಆನ್ ಪ್ರತಿಕ್ರಿಯಿಸಿ, ‘ನಿನ್ನೆಯೇ ಬಂದಿದ್ಧೇನೆ. ಸಂಜೆ 6ರಿಂದ ಸಾಲಿನಲ್ಲಿ ನಿಂತಿದ್ದೇನೆ. ಈ ಮಳಿಗೆಯ ಪ್ರಾರಂಭೋತ್ಸವದಲ್ಲಿ ಪಾಲ್ಗೊಂಡಿದ್ದೆ. ಟಿಮ್ ಕುಕ್ ಅವರನ್ನು ಭೇಟಿ ಮಾಡಿದ್ದೆ’ ಎಂದು ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT