ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Apple iPhone 15, iPhone 15 Pro ಘೋಷಣೆ: ವಿಶೇಷತೆ, ಭಾರತದಲ್ಲಿ ಲಭ್ಯತೆ ಯಾವಾಗ?

Published 13 ಸೆಪ್ಟೆಂಬರ್ 2023, 6:20 IST
Last Updated 13 ಸೆಪ್ಟೆಂಬರ್ 2023, 6:20 IST
ಅಕ್ಷರ ಗಾತ್ರ

ಕ್ಯಾಲಿಫೋರ್ನಿಯಾ: ಐಫೋನ್–15 ಸರಣಿಯ (ಐಫೋನ್–15, ಐಫೋನ್–15 ಪ್ಲಸ್, ಐಫೋನ್–15 ಪ್ರೊ, ಐಫೋನ್–15 ಪ್ರೊ ಮ್ಯಾಕ್ಸ್) ಫೋನ್‌ಗಳು, ಆ್ಯಪಲ್ ವಾಚ್ ಅಲ್ಟ್ರಾ–2 ಮತ್ತು ಆ್ಯಪಲ್ ವಾಚ್ ಸೀರಿಸ್ 9 ಅನ್ನು ಆ್ಯಪಲ್ ಕೇಂದ್ರ ಕಚೇರಿಯಲ್ಲಿ ಬುಧವಾರ ನಡೆದ ವಾರ್ಷಿಕ ಕಾರ್ಯಕ್ರಮದಲ್ಲಿ ಆ್ಯಪಲ್ ಕಂಪನಿಯು ಘೋಷಿಸಿದೆ.

ಸೂಪರ್ ರೆಟಿನಾ ಎಕ್ಸ್‌ಡಿಆರ್‌ ಡಿಸ್‌ಪ್ಲೇ ಮತ್ತು ಎ16 ಬಯೋನಿಕ್ ಚಿಪ್ ಅನ್ನು ಒಳಗೊಂಡಿರುವ iPhone 15 ಸರಣಿಯನ್ನು ಅನಾವರಣಗೊಳಿಸಲಾಗಿದ್ದು, ವಿನೂತನ ವಿನ್ಯಾಸ ಮತ್ತು ರೋಮಾಂಚಕ ಬಣ್ಣದ ಆಯ್ಕೆಗಳೊಂದಿಗೆ ಎರಡು ಗಾತ್ರಗಳಲ್ಲಿ ಲಭ್ಯವಿದೆ. ಸುಧಾರಿತ ಕ್ಯಾಮೆರಾ ವ್ಯವಸ್ಥೆಯು 48-ಮೆಗಾಪಿಕ್ಸೆಲ್ ಸಾಮರ್ಥ್ಯ ಹೊಂದಿದ್ದು, ಆಟೊ ಪೋರ್ಟ್ರೇಟ್ ಮೋಡ್ ಮತ್ತು 4K ರೆಕಾರ್ಡಿಂಗ್ ವ್ಯವಸ್ಥೆ ಇದರಲ್ಲಿದೆ.

iPhone 15 ಮತ್ತು iPhone 15 Plus ಗುಲಾಬಿ, ಹಳದಿ, ಹಸಿರು, ನೀಲಿ ಮತ್ತು ಕಪ್ಪು- ಹೀಗೆ ಐದು ಹೊಸ ಬಣ್ಣಗಳಲ್ಲಿ ಲಭ್ಯವಿದೆ. ಮುಂಗಡ-ಆರ್ಡರ್ ಅನ್ನು ಸೆಪ್ಟೆಂಬರ್ 15ರಿಂದ ಪಡೆಯಲಾಗುತ್ತಿದ್ದು, ಸೆ.22ರಂದು ಮಾರುಕಟ್ಟೆಗೆ ದೊರೆಯಲಿದೆ.

ಐಫೋನ್ 15 ಪ್ರೊನಲ್ಲಿ ಗೇಮಿಂಗ್-ಕೇಂದ್ರಿತ ಸಾಫ್ಟ್‌ವೇರ್ ವೈಶಿಷ್ಟ್ಯಗಳಿವೆ. ಇದು A17 ಪ್ರೊ ಚಿಪ್ ಮತ್ತು ಮಲ್ಟಿಪಲ್ ಲೆನ್ಸ್‌ಗಳೊಂದಿಗೆ ಪ್ರೊ-ಲೆವೆಲ್ ಕ್ಯಾಮೆರಾ ವ್ಯವಸ್ಥೆಯನ್ನು ಸಹ ಒಳಗೊಂಡಿದೆ ಎಂದು ಆ್ಯಪಲ್ ಘೋಷಿಸಿದೆ.

ಸೆ.22ರಂದು ಲಭ್ಯ, ಬೆಲೆಯ ವಿವರ ಇಲ್ಲಿದೆ:

iPhone 15, 15 Plus, 15 Pro and 15 Pro Max - ಇವೆಲ್ಲವೂ ಅತ್ಯಾಧುನಿಕ ವೈಶಿಷ್ಟ್ಯಗಳನ್ನೊಳಗೊಂಡಿದ್ದು, ಇದೇ ಮೊದಲ ಬಾರಿಗೆ 'ಮೇಕ್ ಇನ್ ಇಂಡಿಯಾ' ಐಫೋನ್ 15, ಜಾಗತಿಕ ಮಾರಾಟ ದಿನವಾದ ಸೆಪ್ಟೆಂಬರ್ 22ರಂದೇ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

6.1 ಇಂಚು ಮತ್ತು 6.7 ಇಂಚು ಡಿಸ್‌ಪ್ಲೇ ಗಾತ್ರದಲ್ಲಿ ಲಭ್ಯವಾಗುವ ಐಫೋನ್ 15 ಹಾಗೂ ಐಫೋನ್ 15 ಪ್ಲಸ್, ಗುಲಾಬಿ, ಹಳದಿ, ಹಸಿರು, ನೀಲಿ ಮತ್ತು ಕಪ್ಪು ಬಣ್ಣಗಳಲ್ಲಿ 128GB, 256GB, ಹಾಗೂ 512GB ಸ್ಟೋರೇಜ್ ಸಾಮರ್ಥ್ಯದ ಮಾದರಿಗಳಲ್ಲಿ ದೊರೆಯಲಿದೆ. ಬೆಲೆ ಅನುಕ್ರಮವಾಗಿ ₹79,900 ಮತ್ತು ₹89,900ರಿಂದ ಆರಂಭವಾಗಲಿದೆ.

iPhone 15 Pro ಮತ್ತು iPhone 15 Pro Max ಕೂಡ 6.1 ಇಂಚು ಮತ್ತು 6.7 ಇಂಚಿನ ಡಿಸ್‌ಪ್ಲೇ ಗಾತ್ರದಲ್ಲಿ ದೊರೆಯಲಿದ್ದು, ಕಪ್ಪು, ಬಿಳಿ, ನೀಲಿ ಮತ್ತು ನ್ಯಾಚುರಲ್ ಟೈಟಾನಿಯಂ ಫಿನಿಶ್ ಬಣ್ಣದಲ್ಲಿ ದೊರೆಯಲಿದೆ. iPhone 15 ಪ್ರೊ ಬೆಲೆ ₹1,34,900 ರಿಂದ ಆರಂಭವಾಗಲಿದ್ದು, 128GB, 256GB, 512GB, ಮತ್ತು 1TB ಸ್ಟೋರೇಜ್ ಸಾಮರ್ಥ್ಯದೊಂದಿಗೆ ಲಭ್ಯವಾಗಲಿದೆ.

iPhone 15 ಪ್ರೊ ಮ್ಯಾಕ್ಸ್ ₹1,59,900 ರಿಂದ ಆರಂಭವಾಗಲಿದ್ದು, 256GB, 512GB, ಮತ್ತು 1TB ಸ್ಟೋರೇಜ್ ಸಾಮರ್ಥ್ಯದೊಂದಿಗೆ ದೊರೆಯಲಿದೆ.

ಭಾರತವೂ ಸೇರಿದಂತೆ 40ಕ್ಕೂ ಹೆಚ್ಚು ದೇಶಗಳ ಗ್ರಾಹಕರು ಸೆ.15ರಿಂದ ಮುಂಗಡ ಆರ್ಡರ್ ಮಾಡಬಹುದಾಗಿದ್ದು, ಸೆ.22ರಿಂದ 15 ಸರಣಿಯ ಎಲ್ಲ ಐಫೋನ್‌ಗಳೂ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

ಐಫೋನ್ 15 ಪ್ರೊ ಮತ್ತು ಐಫೋನ್ ಪ್ರೊ ಮ್ಯಾಕ್ಸ್ ವಿಶೇಷತೆಗಳು

ಶಕ್ತಿಶಾಲಿ ಮತ್ತು ಹಗುರವಾದ ಟೈಟಾನಿಯಂ ವಿನ್ಯಾಸ, ಹೊಸ ಆ್ಯಕ್ಷನ್ ಬಟನ್, ಶಕ್ತಿಶಾಲಿ ಕ್ಯಾಮೆರಾ ನೂತನ ವೈಶಿಷ್ಟ್ಯಗಳು, ಎ17 ಚಿಪ್ ಸೆಟ್ - ಇವು ಕಾರ್ಯಕ್ಷಮತೆ ಹೆಚ್ಚಿಸಲಿದ್ದು ಎ17 ಪ್ರೊ ಬಯೋನಿಕ್ ಚಿಪ್ ಮೂಲಕ ಮೊಬೈಲ್ ಗೇಮಿಂಗ್‌ಗೆ ಉತ್ತಮ ಬೆಂಬಲ ನೀಡಲಿವೆ.

ಹೊಸ ಯುಎಸ್‌ಬಿ ಸಿ ಕನೆಕ್ಟರ್ ನೀಡಿರುವುದು ಎಲ್ಲ ಗ್ರಾಹಕರಿಗೆ ಸಂತೋಷದ ಸುದ್ದಿ. ಹಿಂದಿನ ಲೈಟ್ನಿಂಗ್ ಕೇಬಲ್ ಬದಲು ಟೈಪ್ ಸಿ ಕನೆಕ್ಟರ್, 20x ವೇಗದ ಚಾರ್ಜಿಂಗನ್ನು ಬೆಂಬಲಿಸುತ್ತದೆ. ಜೊತೆಗೆ ಹೊಸ ವಿಡಿಯೊ ಫಾರ್ಮ್ಯಾಟ್‌ಗಳನ್ನೂ ಫೋನ್ ಬೆಂಬಲಿಸುತ್ತದೆ. ಐಫೋನ್ 15 ಪ್ರೊ ಮತ್ತು ಪ್ರೊ ಮ್ಯಾಕ್ಸ್ ಎರಡರಲ್ಲಿಯೂ ಬಳಸಿರುವ ಪ್ರೀಮಿಯಂ ಟೈಟಾನಿಯಂ, ಹೊಸ ಸಾಧನವನ್ನು ತೀರಾ ಹಗುರವಾಗಿಸಿದೆ.

ಐಫೋನ್ 15 ಮತ್ತು ಐಫೋನ್ 15 ಪ್ಲಸ್ ವಿಶೇಷತೆಗಳು

ಐಫೋನ್ 15 ಮತ್ತು ಐಫೋನ್ 15 ಪ್ಲಸ್ ಹಿಂಭಾಗದ ಗಾಜಿನ ಕವಚವನ್ನು ಹೊಂದಿದ್ದು, ಕಲಾತ್ಮಕ ಮ್ಯಾಟ್ ಫಿನಿಶ್ ಹೊಂದಿದೆ. ಸುಂದರವಾದ ಬಾಹ್ಯರೇಖೆಯ ಅಲ್ಯುಮೀನಿಯಂ ಚೌಕಟ್ಟು ವಿಶೇಷವಾಗಿ ಗಮನ ಸೆಳೆಯುತ್ತದೆ. ಎರಡರಲ್ಲೂ ಡೈನಮಿಕ್ ಐಲೆಂಡ್ ಮಾದರಿ ವಿನ್ಯಾಸದಲ್ಲಿ ಸೆಲ್ಫೀ ಕ್ಯಾಮೆರಾ ಸ್ಥಿತವಾಗಿದ್ದು, ಮಂದ ಬೆಳಕಿನಲ್ಲೂ ಪೋರ್ಟ್ರೇಟ್ ಚಿತ್ರಗಳನ್ನು ಚೆನ್ನಾಗಿ ಸೆರೆಹಿಡಿಯುವಂತೆ ರೂಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT