ಭಾನುವಾರ, ಸೆಪ್ಟೆಂಬರ್ 19, 2021
28 °C

ದೀಪಾವಳಿಗೆ ಅತಿ ಕಡಿಮೆ ಬೆಲೆಯ ‘ಜಿಯೊಫೋನ್‌ ನೆಕ್ಸ್ಟ್‌’

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಗೂಗಲ್‌ ಜೊತೆಗೂಡಿ ತಯಾರಿಸಿರುವ ಅತಿ ಕಡಿಮೆ ಬೆಲೆಯ ‘ಜಿಯೊಫೋನ್‌ ನೆಕ್ಸ್ಟ್‌’ ಸ್ಮಾರ್ಟ್‌ಫೋನ್‌ ಅನ್ನು ದೀಪಾವಳಿಗೆ  ಬಿಡುಗಡೆ ಮಾಡುವುದಾಗಿ ಜಿಯೊ ಕಂಪನಿಯು ತಿಳಿಸಿದೆ.

ಕಂಪನಿ ಈ ಹಿಂದೆ ಘೋಷಿಸಿದ್ದ ಪ್ರಕಾರ, ಸ್ಮಾರ್ಟ್‌ಫೋನ್‌ಅನ್ನು ಶುಕ್ರವಾರ ಬಿಡುಗಡೆ ಮಾಡಬೇಕಿತ್ತು. ಆದರೆ,  ಬಿಡುಗಡೆ ದಿನಾಂಕ ಮುಂದೂಡಿರುವುದಾಗಿ ಕಂಪನಿಯು ತಿಳಿಸಿದೆ.

2ಜಿ ಯಿಂದ 4ಜಿ ಸಂಪರ್ಕಕ್ಕೆ ಅಪ್‌ಗ್ರೇಡ್‌ ಆಗಲು ಬಯಸುವವರಿಗೆ ಈ ಸ್ಮಾರ್ಟ್‌ಫೋನ್‌ ಸೂಕ್ತವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಆದರೆ, ಇದರ ಬೆಲೆ ಎಷ್ಟಿರಲಿದೆ ಎನ್ನುವ ಮಾಹಿತಿಯನ್ನು ಕಂಪನಿ ನೀಡಿಲ್ಲ.

ಈ ಹೆಚ್ಚುವರಿ ಕಾಲಾವಕಾಶ ದೊರೆತಿರುವುದರಿಂದ ಸೆಮಿಕಂಡಕ್ಟರ್‌ ಕೊರತೆಯಿಂದ ಆಗುವ ಸಮಸ್ಯೆಯನ್ನು ನಿವಾರಿಸಲು ಅನುಕೂಲ ಆಗಲಿದೆ ಎಂದು ಜಿಯೊ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು