ಬೆಂಗಳೂರು : ರಿಲಯನ್ಸ್ ಜಿಯೋ ಈಗ ‘ಜಿಯೋಪಿಸಿ’ (JioPC) ಘೋಷಣೆ ಮಾಡಿದೆ. ಇದು ಕ್ಲೌಡ್ ಆಧಾರಿತವಾದ ವರ್ಚುವಲ್ ಡೆಸ್ಕ್ಟಾಪ್ ಪ್ಲಾಟ್ಫಾರ್ಮ್ ಆಗಿದ್ದು, ಇದೇ ಮೊದಲ ಬಾರಿಗೆ ಬೇಕಾದ ರೀತಿಯ ಮಾಡೆಲ್ಗೆ ಹಣ ಪಾವತಿಸಿ ಪಡೆಯಬಹುದಾಗಿದೆ.

ಯಾವುದೇ ಹೂಡಿಕೆ ಇಲ್ಲದೆ ಕನಿಷ್ಠ ₹50 ಸಾವಿರ ಮೌಲ್ಯದ ಹೈ-ಎಂಡ್ ಪಿಸಿಯಲ್ಲಿ ಇರುವಂಥ ಫೀಚರ್ಗಳು ಮತ್ತು ಪರ್ಫಾರ್ಮೆನ್ಸ್ ಅನ್ನು ಕೇವಲ ₹400ಕ್ಕೆ ಪಡೆಯಬಹುದು. ದುಬಾರಿ ಹಾರ್ಡ್ವೇರ್ ಅಥವಾ ಅಪ್ಗ್ರೇಡ್ ಇಲ್ಲದೆ ಜಿಯೋಪಿಸಿ ಸ್ಕ್ರೀನ್ ಅನ್ನು ಪೂರ್ಣ ಪ್ರಮಾಣದ ಕಂಪ್ಯೂಟರ್ ಆಗಿ ಪರಿವರ್ತಿಸುತ್ತದೆ. ಕೇವಲ ಪ್ಲಗ್ ಇನ್ ಮಾಡಿ, ಸೈನ್ ಅಪ್ ಆದ ನಂತರದಲ್ಲಿ ಕಂಪ್ಯೂಟಿಂಗ್ ಆರಂಭವಾಗುತ್ತದೆ. ಇದಕ್ಕೆ ಯಾವುದೇ ಲಾಕ್- ಇನ್ ಅವಧಿ ಇರುವುದಿಲ್ಲ.

ಎಐ ಅನುಭವ ನೀಡುವ ಈ PCಗೆ, ಜಿಯೋ ಸೆಟ್ ಟಾಪ್ ಬಾಕ್ಸ್, ಕೀಬೋರ್ಡ್, ಮೌಸ್ ಮತ್ತು ಸ್ಕ್ರೀನ್ ಬಳಸಿಕೊಂಡು ಸಂಪರ್ಕ ಪಡೆಯಬಹುದು. ಬಳಕೆದಾರರಿಗೆ ಉತ್ತಮ ದರ್ಜೆಯ ಡಿಸೈನ್ ಹಾಗೂ ಎಡಿಟಿಂಗ್ ಟೂಲ್, ಅಡೋಬ್ ಎಕ್ಸ್ ಪ್ರೆಸ್ ಬಳಕೆಗೆ ಉಚಿತವಾಗಿ ಅವಕಾಶವಿದೆ.

512 ಜಿಬಿ ಕ್ಲೌಡ್ ಸಂಗ್ರಹ ದೊರೆಯುತ್ತದೆ. ಅದು ಚಂದಾದಾರಿಕೆ ಜೊತೆಗೆ ಸೇರಿಕೊಂಡಿದೆ. ಜಿಯೋಪಿಸಿ ದೇಶದಾದ್ಯಂತ ಈಗಿರುವ ಎಲ್ಲ ಮತ್ತು ಹೊಸ ಜಿಯೋಫೈಬರ್ ಮತ್ತು ಜಿಯೋ ಏರ್ ಫೈಬರ್ ಗ್ರಾಹಕರಿಗೆ ಲಭ್ಯವಿದೆ. ಹೊಸ ಬಳಕೆದಾರರಿಗೆ ಒಂದು ತಿಂಗಳು ಈ ಸೇವೆ ಉಚಿತವಾಗಿರುತ್ತದೆ.

ಜಿಯೋಪಿಸಿ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಮಾಹಿತಿ:

ಆರಂಭಿಕವಾಗಿ ತಿಂಗಳಿಗೆ 400 ರೂಪಾಯಿಯಿಂದ ಪ್ಲಾನ್ ಆರಂಭ, ಯಾವುದೇ ಲಾಕ್- ಇನ್ ಅವಧಿ ಇಲ್ಲ

ಹಾರ್ಡ್ ವೇರ್ ಅಗತ್ಯವಿಲ್ಲ- ಯಾವುದೇ ಸ್ಕ್ರೀನ್ ಅನ್ನು ಸ್ಮಾರ್ಟ್ ಪಿಸಿ ಮಾಡುತ್ತದೆ

ವೇಗವಾದ ಬೂಟ್-ಅಪ್, ಸದಾ ಅಪ್ ಡೇಟೆಡ್ ಆಗುತ್ತದೆ

ನೆಟ್ ವರ್ಕ್ ಹಂತದ ಭದ್ರತೆ- ವೈರಸ್, ಮಾಲ್ ವೇರ್ ಹಾಗೂ ಹ್ಯಾಕ್ ಪ್ರೂಫ್ ಆಗಿದೆ

ಎಐ ಸಿದ್ಧವಾದ ಟೂಲ್ ಗಳು

ಜಿಯೋಫೈಬರ್ ಮತ್ತು ಜಿಯೋ ಏರ್ ಫೈಬರ್ ಬಳಕೆದಾರರಿಗೆ ಭಾರತದಾದ್ಯಂತ ಲಭ್ಯವಿದೆ

ಒಂದು ತಿಂಗಳು ಉಚಿತ ಟ್ರಯಲ್, ಜಿಯೋ ವರ್ಕ್ ಪ್ಲೇಸ್, ಮೈಕ್ರೋಸಾಫ್ಟ್ ಆಫೀಸ್ (ಬ್ರೌಸರ್) ಒಳಗೊಂಡಿರುತ್ತದೆ, ಜೊತೆಗೆ 512 ಜಿಬಿ ಕ್ಲೌಡ್ ಸಂಗ್ರಹ

ಜಿಯೋಪಿಸಿ ಅಳವಡಿಸಿಕೊಳ್ಳುವುದು ಹೇಗೆ?

1. ಜಿಯೋ ಸೆಟ್ ಟಾಪ್ ಬಾಕ್ಸ್ ಪವರ್ ಆನ್ ಮಾಡಿ ಹಾಗೂ ಆಪ್ಸ್ ಸೆಕ್ಷನ್ ತೆರಳಿ
2. ಜಿಯೋಪಿಸಿ ಆಪ್ ಲಾಂಚ್ ಮಾಡಿ ಹಾಗೂ ‘ಗೆಟ್ ಸ್ಟಾರ್ಟೆಡ್’ ಎಂಬುದರ ಮೇಲೆ ಕ್ಲಿಕ್ ಮಾಡಿ
3. ಕೀಬೋರ್ಡ್ ಮತ್ತು ಮೌಸ್ ಪ್ಲಗ್ ಇನ್ ಮಾಡಿ
4. ಜೋಡಣೆಯಾದ ಕಾಂಟ್ಯಾಕ್ಟ್ ನಂಬರ್ ಬಳಸಿ ಸೈನ್ ಇನ್ ಮಾಡಿ, ಅಥವಾ ನೋಂದಣಿ ಮಾಡುವುದಕ್ಕೆ ಮಾಹಿತಿಯನ್ನು ನಮೂದಿಸಿ
5. ಲಾಗ್ ಇನ್ ಆಗಿ ಮತ್ತು ತಕ್ಷಣವೇ ನಿಮ್ಮ ಕ್ಲೌಡ್ ಕಂಪ್ಯೂಟರ್ ಬಳಸುವುದಕ್ಕೆ ಆರಂಭಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.