ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಕ್ರೋಸಾಫ್ಟ್ ಸರ್ಫೇಸ್ ಲ್ಯಾಪ್‌ಟಾಪ್ ಸ್ಟುಡಿಯೊ; ಇದರಲ್ಲಿ ಏನೆಲ್ಲ ಇದೆ?

Last Updated 15 ಫೆಬ್ರುವರಿ 2022, 12:31 IST
ಅಕ್ಷರ ಗಾತ್ರ

ಬೆಂಗಳೂರು: ಮೈಕ್ರೋಸಾಫ್ಟ್ ಇಂಡಿಯಾ ಹೊಸ ಸರ್ಫೇಸ್ ಲ್ಯಾಪ್‌ಟಾಪ್ ಸ್ಟುಡಿಯೊ (Surface Laptop Studio) ಪರಿಚಯಿಸಿದೆ. ಮಾರ್ಚ್ 8ರಿಂದ ಈ ಹೊಸ ಸರ್ಫೇಸ್‌ ಖರೀದಿಗೆ ಸಿಗಲಿದ್ದು, ಇವತ್ತಿನಿಂದಲೇ ಆರ್ಡರ್‌ ಮಾಡಲು ಅವಕಾಶವಿದೆ.

ಸರ್ಫೇಸ್ ಲ್ಯಾಪ್‌ಟಾಪ್ ಸ್ಟುಡಿಯೊದ ಆರಂಭಿಕ ಬೆಲೆ ₹1,56,999 ಆಗಿದ್ದು, ಇದುವರೆಗಿನ ಅತ್ಯಂತ ಶಕ್ತಿಶಾಲಿ ಸರ್ಫೇಸ್ ಆಗಿದೆ. ಡೆವಲಪರ್‌ಗಳು, ಸೃಜನಾತ್ಮಕ ಕಾರ್ಯಗಳಲ್ಲಿರುವವರು, ವಿನ್ಯಾಸಕರು ಮತ್ತು ಗೇಮರ್‌ಗಳ ಬಳಕೆಗಾಗಿಯೇ ಇದನ್ನು ರೂಪಿಸಲಾಗಿದೆ. ಈ ಲ್ಯಾಪ್‌ಟಾಪ್‌ 14.4 ಇಂಚು Pixelsense Flow ಟಚ್‌ಸ್ಕ್ರೀನ್, Quad Omnisonic ಸ್ಪೀಕರ್‌ಗಳು, Dolby Atmos ವ್ಯವಸ್ಥೆಯನ್ನು ಒಳಗೊಂಡಿದೆ.

'Windows 11ನ ಅತ್ಯುತ್ತಮ ಸೌಲಭ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ತಲುಪಿಸಲು ಈ ಸಾಧನವನ್ನು ವಿನ್ಯಾಸಗೊಳಿಸಲಾಗಿದೆ' ಎಂದು ಮೈಕ್ರೋಸಾಫ್ಟ್ ಇಂಡಿಯಾದ ಸಾಧನಗಳು (ಸರ್ಫೇಸ್) ವಿಭಾಗದ ರಾಷ್ಟ್ರೀಯ ಮುಖ್ಯಸ್ಥ ಭಾಸ್ಕರ್ ಬಸು ಹೇಳಿದ್ದಾರೆ.

ಲ್ಯಾಪ್‌ಟಾಪ್ ಮೋಡ್‌ನಲ್ಲಿ ಪೂರ್ಣ ಕೀಬೋರ್ಡ್ ಮತ್ತು ನಿಖರವಾದ ಹೆಪ್ಟಿಕ್ ಟಚ್‌ಪ್ಯಾಡ್‌ನೊಂದಿಗೆ ಅತ್ಯುತ್ತಮ ಟೈಪಿಂಗ್ ಅನುಭವ ನೀಡುತ್ತದೆ. ಸ್ಟೇಜ್ ಮೋಡ್‌ನಲ್ಲಿ 14.4 ಇಂಚು ಟಚ್‌ಸ್ಕ್ರೀನ್ ಡಿಸ್‌ಪ್ಲೇಯನ್ನು ಗೇಮಿಂಗ್, ಸ್ಟ್ರೀಮಿಂಗ್, ಡಾಕಿಂಗ್ ಮಾಡಲು ಅಥವಾ ಪ್ರೆಸೆಂಟೇಷನ್‌ ನೀಡಲು ಬಳಸಬಹುದಾಗಿದೆ. ಇಲ್ಲವೇ ಕೀಬೋರ್ಡ್‌ ಅನ್ನು ಕವರ್ ಮಾಡಿ, ಸರ್ಫೇಸ್ ಸ್ಲಿಮ್ ಪೆನ್ 2, ಟಚ್ ಅಥವಾ ಟಚ್‌ಪ್ಯಾಡ್‌ನೊಂದಿಗೆ ಕೆಲಸ ಮುಂದುವರಿಸಬಹುದು.

ಸ್ಟುಡಿಯೊ ಮೋಡ್‌ನಲ್ಲಿ ಅಡೆತಡೆಯಿಲ್ಲದ ಬರವಣಿಗೆ, ಸ್ಕೆಚಿಂಗ್ ಮತ್ತು ಇತರ ಸೃಜನಾತ್ಮಕ ಅನ್ವೇಷಣೆಗಳಿಗಾಗಿ ಅತ್ಯುತ್ತಮ ಕ್ಯಾನ್ವಾಸ್ ಒಳಗೊಂಡಿದೆ. ಸರ್ಫೇಸ್ ಸ್ಲಿಮ್ ಪೆನ್ 2 ಅನ್ನು ಕೀಬೋರ್ಡ್‌ನ ಕೆಳಗೆ ಇಡಬಹುದು ಹಾಗೂ ಅದು ಎಲ್ಲಿಯೇ ಚಾರ್ಜ್‌ ಆಗುತ್ತದೆ.

11ನೇ Gen Intel Core H35 ಪ್ರೊಸೆಸರ್‌, DirectX 12 Ultimate ಮತ್ತು NVIDIA GeForce RTX ಜಿಪಿಯು ಅಳವಡಿಸಲಾಗಿದ್ದು, ಯಾವುದೇ ಕೆಲಸವನ್ನು ತೊಡಕಿಲ್ಲದೆ ಮಾಡಲು ಸಹಕಾರಿಯಾಗಿದೆ. ಮಿಂಚಿನ ವೇಗದಲ್ಲಿ ಡೇಟಾವನ್ನು ವರ್ಗಾಯಿಸಲು Thunderbolt 4 ತಂತ್ರಜ್ಞಾನವನ್ನು ಬಳಸಿಕೊಂಡು ಡೆಸ್ಕ್‌ಟಾಪ್ ಸೆಟ್‌ಅಪ್ ಮಾಡಿಕೊಳ್ಳಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT