ಮಂಗಳವಾರ, ಅಕ್ಟೋಬರ್ 4, 2022
25 °C
ಸೆಪ್ಟೆಂಬರ್‌ನಲ್ಲಿ ಹಲವು ನೂತನ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ

September 2022: ಈ ತಿಂಗಳಲ್ಲಿ ಬಿಡುಗಡೆಯಾಗಲಿರುವ ಪ್ರಮುಖ ಸ್ಮಾರ್ಟ್‌ಫೋನ್‌ಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ಸಾಲು ಸಾಲು ಹಬ್ಬಗಳು ಬರುತ್ತಿದ್ದು, ಮಾರುಕಟ್ಟೆಯಲ್ಲಿ ಕೂಡ ಅದಕ್ಕೆ ಪೂರಕವಾಗಿ ನೂತನ ಗ್ಯಾಜೆಟ್‌ಗಳು, ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುತ್ತಿವೆ.

ಪ್ರಮುಖವಾಗಿ, ಆ್ಯಪಲ್, ಏಸಸ್, ಮೊಟೊರೊಲಾ, ಶಓಮಿ ಕಂಪನಿಗಳ ಸ್ಮಾರ್ಟ್‌ಫೋನ್ ಬಿಡುಗಡೆಯಾಗಲಿದೆ. ಟೆಕ್ ಲೋಕದಲ್ಲಿ ಸೆಪ್ಟೆಂಬರ್ 2022ರಲ್ಲಿ ಬಿಡುಗಡೆಯಾಗುತ್ತಿರುವ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಇಲ್ಲಿದೆ.

ಪೋಕೊ M5 ಸರಣಿ
ಸೆಪ್ಟೆಂಬರ್ 5ರಂದು ಪೋಕೊ ನೂತನ ಸ್ಮಾರ್ಟ್‌ಫೋನ್ ದೇಶದಲ್ಲಿ ಬಿಡುಗಡೆಯಾಗುತ್ತಿದೆ.

ಶಓಮಿ ರೆಡ್ಮಿ 11 ಪ್ರೈಮ್ 5G
ಶಓಮಿ ರೆಡ್ಮಿ ಸರಣಿಯಲ್ಲಿ ಹೊಸದಾಗಿ 11 ಪ್ರೈಮ್ ಸ್ಮಾರ್ಟ್‌ಫೋನ್ ಸೆ. 6ರಂದು  ಬಿಡುಗಡೆಯಾಗಲಿದ್ದು, 5G ಸಂಪರ್ಕ ಹೊಂದಿರುತ್ತದೆ ಎಂದು ಕಂಪನಿ ಹೇಳಿದೆ.

ಆ್ಯಪಲ್ ಐಫೋನ್ 14
ಐಪೋನ್ ನೂತನ ಸರಣಿ 14 ಅನ್ನು ಆ್ಯಪಲ್ ಈ ತಿಂಗಳು ಬಿಡುಗಡೆ ಮಾಡಲಿದೆ. ಸೆ. 7ರಂದು ಆ್ಯಪಲ್ ಈವೆಂಟ್ ನಡೆಯಲಿದ್ದು, ನಾಲ್ಕು ನೂತನ ಐಫೋನ್ 14 ಸರಣಿ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ.

ಮೋಟೊರೊಲಾ ಮೋಟೊ ಎಡ್ಜ್ 30
ಮೋಟೊರೊಲಾ ನೂತನ ಮೋಟೊ ಎಡ್ಜ್ 30 ಸರಣಿ ಸೆ. 8ರಂದು ಅನಾವರಣಗೊಳ್ಳಲಿದೆ.

ಏಸಸ್ ರಾಗ್ ಫೋನ್ 6D
ಹೊಸ ರಾಗ್ ಪೋನ್ 6D ಸರಣಿಯನ್ನು ಏಸಸ್ ಸೆ. 19ರಂದು ಪರಿಚಯಿಸುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು