ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸ ತಲೆಮಾರಿನ ಛಾಯಾಗ್ರಾಹಕರಿಗೆ ನಿಕಾನ್‌ನಿಂದ ‘ವಾಗ್ಲರ್ಸ್‌ ಕಿಟ್‌‘

ಅಕ್ಷರ ಗಾತ್ರ

ಕ್ಯಾಮೆರಾ ಜತೆಗೆ, ಮೌಂಟ್‌, ಬ್ಯಾಟರಿ, ಝೂಮ್‌ ಲೆನ್ಸ್‌, ಎಲ್‌ಇಡಿ ಬಲ್ಬ್‌.. ಎಲ್ಲ ಒಂದೇ ಕಿಟ್‌ನಲ್ಲಿ ಸಿಗುವುಂತಾದರೆ ವ್ಲಾಗರ್ಸ್‌ (Vloggers- ವಿಡಿಯೊ ಸಹಿತ ಸ್ಟೋರಿ ಮಾಡುವವರು)ಗೆಎಷ್ಟು ಅನುಕೂಲವಾಗುತ್ತದೆ ಅಲ್ಲವಾ ?

ಹೌದು, ಹೊಸ ತಲೆಮಾರಿನ ಛಾಯಾಗ್ರಾಹಕರ ಮನದ ಮಾತನ್ನು ಅರಿತುಕೊಂಡಿರುವ ಖ್ಯಾತ ಕ್ಯಾಮೆರಾ ತಯಾರಕ ಕಂಪೆನಿ ನಿಕಾನ್‌, ‘ನಿಕಾನ್‌ ವಾಗ್ಲರ್ಸ್‌ ಕಿಟ್‌‘ ಎಂಬ ಹೆಸರಿನ ಹೊಸ ಕ್ಯಾಮೆರಾ– ಪರಿಕರಗಳ ಕಿಟ್‌ವೊಂದನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ.ಇದರಲ್ಲಿ ಕ್ಯಾಮೆರಾ ಸೇರಿದಂತೆ ಬ್ಲಾಗರ್ಸ್‌ ಮತ್ತು ವ್ಲಾಗರ್ಸ್‌ಗಳ ಕೆಲಸಗಳಿಗೆ ಪೂರಕವಾಗುವಂತಹ ಹಲವು ಪರಿಕರಗಳಿರುತ್ತವೆ. ಇತ್ತೀಚೆಗೆ ಯೂಟ್ಯೂಬ್‌, ಫೇಸ್‌ಬುಕ್‌ ಸೇರಿದಂತೆ ಅನೇಕ ಜಾಲತಾಣಗಳಲ್ಲಿ ಇಂಥ ವ್ಲಾಗರ್ಸ್‌ಗಳ ಸಂಖ್ಯೆ ಹೆಚ್ಚಾಗಿದ್ದು, ಅಂಥವರಿಗೆ ಈ ಕಿಟ್‌ ಅನುಕೂಲವಾಗಲಿದೆ

ನಿಕಾನ್ ಝೆಡ್ ಸರಣಿಯ ಈ ಕ್ಯಾಮೆರಾದಲ್ಲಿ ಬ್ಲೂಟೂತ್ ಮತ್ತು ಸ್ನಾಪ್ ಬ್ರಿಡ್ಜ್‌ 2.6 ಗೆ ವೈಫೈ ಸಂಪರ್ಕ ಕಲ್ಪಿಸಲಾಗಿದೆ. ಈ ಮೂಲಕ ಸ್ನಾಪ್‌ ಶಾಟ್‌ಗಳನ್ನು ಸ್ಮಾರ್ಟ್‌ಫೋನ್‌ಗೆ ವರ್ಗಾಯಿಸಲು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು ಸಹಕಾರಿಯಾತ್ತದೆ.

ಕಿಟ್‌ನಲ್ಲಿರುವ ಪರಿಕರಗಳ ವಿವರ

* ನಿಕಾನ್‌ ಝಡ್ ಡಿಎಕ್ಸ್ 16-50 ಎಂಎಂ ಎಫ್/3.5-6.3 ವಿಆರ್, ಡಿಜಿಟಲ್ ಕ್ಯಾಮೆರಾ ಝಡ್50.

* ಚಿಕ್ಕದಾದ ವ್ಲಾಗರ್ಸ್ ಮೌಂಟಿಂಗ್ ಪ್ಲೇಟ್

*ಸಾರಾಮೋನಿಕ್ ವಿಮೈಕ್-ಮಿನಿ (ರೆಕಾರ್ಡಿಂಗ್‌ಗಾಗಿ)

* ಜಾಬಿ ಗೋರಿಲ್ಲಾಪಾಡ್ ಎಸ್ಎಲ್ಆರ್ ಝೂಂ ಮತ್ತು ಬಾಲ್ ಹೆಡ್ ಬಂಡಲ್ (3ಕೆಜಿ)

* ಪಾಕೆಟ್ ಗಾತ್ರದ ಡೇಲೈಟ್ ಬ್ಯಾಲೆನ್ಸ್‌ ಎಲ್ಇಡಿ ಲೈಟ್ (ಅಪ್ಯುಟರ್ ಅಮರಾನ್ ಎಎಲ್-ಎಂ9)

* ನಿಕಾನ್ ಇಎನ್-ಇಎಲ್25 (ಹೆಚ್ಚುವರಿ ಬ್ಯಾಟರಿ)

* 64ಜಿಬಿ ಎಸ್ ಡಿ ಕಾರ್ಡ್

* ಜಿಯಾಲಿಯಟ್ ಹೀರೋ0665ಬ್ಯಾಗ್

ಈ ಕಿಟ್‌ ಮೂಲ ಬೆಲೆ ₹1,12,170. ಆದರೆ, ವಿಶೇಷ ಕೊಡುಗೆಯಾಗಿ ₹89,990 ಬೆಲೆಗೆ ನೀಡಲಾಗುತ್ತಿದೆ. ಇದು ಎಲ್ಲಾ ನಿಕಾನ್ ಅಧಿಕೃತ ಸ್ಟೋರ್ ಗಳಲ್ಲಿ ಲಭ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT