ಶುಕ್ರವಾರ, ಸೆಪ್ಟೆಂಬರ್ 24, 2021
21 °C

ದೇಶದ ಮಾರುಕಟ್ಟೆಗೆ ನೂತನ ಸ್ಮಾರ್ಟ್‌ವಾಚ್ ಪರಿಚಯಿಸಿದ ನಾಯ್ಸ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

NOISE India

ಬೆಂಗಳೂರು: ಫಿಟ್ನೆಸ್ ಕ್ರೇಜ್ ಮತ್ತು ಸ್ಮಾರ್ಟ್ ಫೀಚರ್ ಬಯಸುವ ಯುವಜನತೆಯನ್ನು ಗಮನದಲ್ಲಿರಿಸಿಕೊಂಡು ನಾಯ್ಸ್, ದೇಶದಲ್ಲಿ ಆಕರ್ಷಕ ಮಾದರಿಯ ಸ್ಮಾರ್ಟ್‌ವಾಚ್ ಬಿಡುಗಡೆ ಮಾಡಿದೆ.

ನಾಯ್ಸ್‌ಫಿಟ್ ಕೋರ್ ಸ್ಮಾರ್ಟ್‌ವಾಚ್, ಏಳು ದಿನಗಳ ಬ್ಯಾಟರಿ ಬಾಳಿಕೆ ಹೊಂದಿರುತ್ತದೆ ಎಂದು ಕಂಪನಿ ಹೇಳಿದೆ.

ಆಂಡ್ರಾಯ್ಡ್ ಮತ್ತು ಐಫೋನ್ ಜತೆಗೆ ನೂತನ ನಾಯ್ಸ್‌ಫಿಟ್ ಸ್ಮಾರ್ಟ್‌ವಾಚ್ ಬಳಸಬಹುದಾಗಿದೆ.

ಬೆಲೆ ಮತ್ತು ಲಭ್ಯತೆ

ಹೊಸ ನಾಯ್ಸ್‌ಫಿಟ್ ಕೋರ್ ಸ್ಮಾರ್ಟ್‌ವಾಚ್, ಭಾರತೀಯ ಮಾರುಕಟ್ಟೆಯಲ್ಲಿ ₹2,999 ದರ ಹೊಂದಿದೆ. ಕಂಪನಿ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ನೂತನ ಸ್ಮಾರ್ಟ್‌ವಾಚ್ ದೊರೆಯಲಿದೆ.

ನಾಯ್ಸ್‌ಫಿಟ್ ಕೋರ್ ಸ್ಮಾರ್ಟ್‌ವಾಚ್, 1.28 ಇಂಚಿನ ಟಿಎಫ್‌ಟಿ ಡಿಸ್‌ಪ್ಲೇ ಹೊಂದಿದೆ. ಎರಡು ಆಕರ್ಷಕ ಬಣ್ಣಗಳು, 13 ವಿವಿಧ ಸ್ಪೋರ್ಟ್ಸ್ ಮೋಡ್ ಆಯ್ಕೆ ಕೂಡ ದೊರೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು