Nokia T10: ದೇಶದ ಗ್ಯಾಜೆಟ್ ಮಾರುಕಟ್ಟೆಗೆ ನೋಕಿಯಾ ಹೊಸ ಟ್ಯಾಬ್ಲೆಟ್ ಎಂಟ್ರಿ

ಬೆಂಗಳೂರು: ಎಚ್‌ಎಂಡಿ ಗ್ಲೋಬಲ್ ಒಡೆತನದ ನೋಕಿಯಾ, ದೇಶದ ಗ್ಯಾಜೆಟ್ ಮಾರುಕಟ್ಟೆಗೆ ನೂತನ ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಿದೆ.
ಐಕಾನಿಕ್ ಫೋನ್‌ಗಳ ಮೂಲಕ ಪ್ರಸಿದ್ಧಿ ಪಡೆದಿದ್ದ ನೋಕಿಯಾ ಸಂಸ್ಥೆ, T10 ಹೆಸರಿನ ಟ್ಯಾಬ್ಲೆಟ್ ಅನ್ನು ಪರಿಚಯಿಸಿದೆ.
ನೋಕಿಯಾ T10
ನೂತನ ನೋಕಿಯಾ ಟ್ಯಾಬ್ಲೆಟ್, 8 ಇಂಚಿನ ಎಚ್‌ಡಿ ಡಿಸ್‌ಪ್ಲೇ ಹೊಂದಿದೆ. ಹೀಗಾಗಿ, ವಿಡಿಯೊ ಕರೆ ಮತ್ತು ಮನರಂಜನೆಗಾಗಿ ಉತ್ತಮ ಆಯ್ಕೆ ಎಂದು ಕಂಪನಿ ಹೇಳಿದೆ.
ಆ್ಯಂಡ್ರಾಯ್ಡ್ 12 ಓಎಸ್ ಬೆಂಬಲ, ವಿಸ್ತರಿಸಬಹುದಾದ ಮೆಮೊರಿ, ಹಿಂಭಾಗದಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ಹಾಗೂ 2 ಮೆಗಾಪಿಕ್ಸೆಲ್ ಸೆಲ್ಫಿ ಇದರಲ್ಲಿದೆ. 5250mAh ಬ್ಯಾಟರಿ, 10W ಚಾರ್ಜಿಂಗ್ ಬೆಂಬಲ ಹೊಂದಿದೆ.
ಬೆಲೆ ಮತ್ತು ಲಭ್ಯತೆ
ಹೊಸ ನೋಕಿಯಾ T10 ಟ್ಯಾಬ್ಲೆಟ್ ಅಮೆಜಾನ್ ಮತ್ತು ನೋಕಿಯಾ.ಕಾಂ ಮೂಲಕ ಲಭ್ಯವಾಗಲಿದೆ. ಪ್ರಸ್ತುತ ವೈ–ಫೈ ಮಾದರಿ ಮಾತ್ರ ಲಭ್ಯವಿದ್ದು, ಎಲ್‌ಟಿಇ ಆವೃತ್ತಿ ಶೀಘ್ರದಲ್ಲೇ ದೊರೆಯಲಿದೆ.
Apple iPhone: ದೇಶದಲ್ಲಿ ಹೊಸ ಐಪೋನ್ 14 ಸರಣಿ ಮಾರಾಟ ಆರಂಭ: ಇಲ್ಲಿದೆ ಆಫರ್ ವಿವರ
3/32 GB Wi-Fi ಮಾದರಿಗೆ ₹11799 ಮತ್ತು 4/64 GB Wi-Fi ಮಾದರಿಗೆ ₹12799 ದರ ಹೊಂದಿದೆ.
Nokia 5710 XpressAudio: ಮಾರುಕಟ್ಟೆಗೆ ಬಂತು ನೋಕಿಯಾ ವೈರ್ಲೆಸ್ ಇಯರ್ಬಡ್ಸ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.