ಬಿಡುಗಡೆಗೂ ಮುನ್ನ ಸಾಮಾಜಿಕ ಮಾಧ್ಯಮಗಳಲ್ಲಿ ನಿರೀಕ್ಷೆಯ ಕಿಚ್ಚು ಹೊತ್ತಿಸಿದ್ದ ಒನ್‌ಪ್ಲಸ್ 'ನಾರ್ಡ್' ಇದೀಗ ಭಾರತದಲ್ಲಿ ಬಿಡುಗಡೆಯಾಗಿದೆ. ಬೆಲೆ ಹಾಗೂ ಕಾರ್ಯಕ್ಷಮತೆಯ ಕಾರಣಗಳಿಂದ ಚರ್ಚೆಗೆ ಒಳಗಾಗಿದ್ದ ಫೋನ್‌ನ ಪೂರ್ಣ ವಿವರ ಈಗ ಲಭ್ಯವಿದೆ.

ಚೀನಾ ಮೂಲದ ಪ್ರೀಮಿಯಂ ಫೋನ್ ತಯಾರಿಕಾ ಕಂಪನಿ ಒನ್‌ಪ್ಲಾಸ್ ಹೊರ ತಂದಿರುವ 'ನಾರ್ಡ್' ಸ್ಮಾರ್ಟ್‌ಫೋನ್‌ನ ಆರಂಭಿಕ ಬೆಲೆ ₹24,999.

ಭೌತಿಕ ಪ್ರಪಂಚದ ಪರೋಕ್ಷ ವೀಕ್ಷಣೆ ಅನುಭವ ನೀಡುವ ಆಗ್ಮೆಂಟೆಡ್ ರಿಯಾಲಿಟಿ (ಎಆರ್) ತಂತ್ರಜ್ಞಾನ ಬಳಸಿಕೊಂಡು ಹೊಸ ಫೋನ್ ಬಿಡುಗಡೆ ಮಾಡಲಾಗಿದೆ. ಮುಂಬರಲಿರುವ 5ಜಿ ತಂತ್ರಜ್ಞಾನ ವ್ಯವಸ್ಥೆಗೂ ಒಗ್ಗಿಕೊಳ್ಳುವ ಸಾಮರ್ಥ್ಯವನ್ನು ನಾರ್ಡ್ ಹೊಂದಿದೆ. ₹24,999 ಬೆಲೆಯ ನಾರ್ಡ್ ಖರೀದಿಸಲು ಸೆಪ್ಟೆಂಬರ್ ವರೆಗೂ ಕಾಯಬೇಕು. ಆದರೆ, ₹27,999 ಹಾಗೂ ₹29,999 ಬೆಲೆಯಲ್ಲಿ ಇದೇ ಮಾದರಿಯ ಹೆಚ್ಚಿನ ಸಾಮರ್ಥ್ಯದ ಫೋನ್‌ಗಳನ್ನು ಆಗಸ್ಟ್‌ನಿಂದಲೇ ಪಡೆದುಕೊಳ್ಳಬಹುದು.

ನಾರ್ಡ್‌ನ ಆರಂಭಿಕ ಮಾದರಿಯೇ 6ಜಿಬಿ ರ್‍ಯಾಮ್ ಹೊಂದಿರುವುದರಿಂದ ಕಾರ್ಯನಿರ್ವಹಣೆ ವೇಗ ಅಧಿಕವಾಗಿರಲಿದೆ. ಅದರೊಂದಿಗೆ ಫ್ಲೂಯಿಡ್ ಡಿಸ್‌ಪ್ಲೇ ರಿಫ್ರೆಷ್ ರೇಟ್ 90 ಹರ್ಟ್ಸ್ ಇರುವುದರಿಂದ ಪುಟದಿಂದ ಪುಟಕ್ಕೆ ಅಥವಾ ಒಂದು ಅಪ್ಲಿಕೇಷನ್‌ನಿಂದ ಮತ್ತೊಂದಕ್ಕೆ ಯಾವುದೇ ಅಡಚಣೆ ಇಲ್ಲದೆ ಕ್ಷಿಪ್ರವಾಗಿ ಬದಲಿಸಿಕೊಂಡು ಕಾರ್ಯಾಚರಿಸಬಹುದು. ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 765 ಪ್ರೊಸೆಸರ್ ಅಳವಡಿಸಿರುವುದರಿಂದ ಈ ಫೋನ್ 5ಜಿ ವ್ಯವಸ್ಥೆಗೆ ತೆರೆದುಕೊಂಡಿರುತ್ತದೆ. ಕಾರ್ಯಾಚರಣೆ ವೇಗದಲ್ಲಿ ಶೇ 10ರಷ್ಟು ಹೆಚ್ಚಳ, ಗ್ರಾಫಿಕ್ಸ್ ಶೇ 30 ಹಾಗೂ ಬ್ಯಾಟರಿ ಬಳಕೆಯಲ್ಲಿ ಶೇ 35ರಷ್ಟು ಪರಿಣಾಮಕಾರಿಯಾಗಿರುವುದಾಗಿ ಕಂಪನಿ ಹೇಳಿಕೊಂಡಿದೆ.

6ಜಿಬಿ ರ್‍ಯಾಮ್+ 64ಜಿಬಿ ಸಂಗ್ರಹ, 8ಜಿಬಿ ರ್‍ಯಾಮ್+ 128ಜಿಬಿ ಸಂಗ್ರಹ, 12ಜಿಬಿ ರ್‍ಯಾಮ್+ 256ಜಿಬಿ ಸಂಗ್ರಹ ಸಾಮರ್ಥ್ಯ ಒಳಗೊಂಡಿರುವ ಫೋನ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಆಗಸ್ಟ್ 4ರಿಂದ ಒನ್‌ಪ್ಲಸ್ ಅಧಿಕೃತ ವೆಬ್‌ಸೈಟ್ ಹಾಗೂ ಅಮೆಜಾನ್ ಇಂಡಿಯಾದಲ್ಲಿ ಖರೀದಿಗೆ ಸಿಗಲಿದೆ. ಭಾರತದ ಗ್ರಾಹಕರಿಗಾಗಿಯೇ ಬಿಡುಗಡೆ ಮಾಡಲಾಗಿರುವ 6ಜಿಬಿ ರ್‍ಯಾಮ್+ 64ಜಿಬಿ ಸಂಗ್ರಹ ಸಾಮರ್ಥ್ಯದ ಫೋನ್ ಸೆಪ್ಟೆಂಬರ್‌ನಿಂದ ಸಿಗಲಿದೆ.

ಬ್ಲೂ ಮಾರ್ಬಲ್ ಮತ್ತು ಗ್ರೇ ಓನಿಕ್ಸ್ ಎರಡು ಬಣ್ಣಗಳಲ್ಲಿ ಫೋನ್ ಲಭ್ಯವಿದೆ. ಭಾರತದಲ್ಲಿ ಒಪ್ಪೊ ಮೊಬೈಲ್ಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಈ ಹೊಸ ಫೋನ್ ತಯಾರಿಸುತ್ತಿದೆ.

6.44 ಇಂಚು ಅಮೊಲೆಡ್ ಡಿಸ್‌ಪ್ಲೇ ಹಾಗೂ ಪ್ಯಾನೆಲ್ ರಕ್ಷಣೆಗಾಗಿ ಗೊರಿಲ್ಲ ಗ್ಲಾಸ್ 5 ಇರುತ್ತದೆ. ಆ್ಯಂಡ್ರಾಯ್ಡ್ 10 ಆಧಾರಿತ ಆಕ್ಸಿಜನ್ ಒಎಸ್ ಕಾರ್ಯಾಚರಣೆ ವ್ಯವಸ್ಥೆ ಇದೆ. ಫೋನ್ ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಾ ಅಳವಡಿಸಲಾಗಿದ್ದು, 48ಎಂಪಿ ಸೋನಿ IMX 586 ಸೆನ್ಸರ್ ಮುಖ್ಯ ಕ್ಯಾಮೆರಾ ಆಗಿದೆ. ಇಮೇಜ್ ಸ್ಟೆಬಿಲೈಜರ್‌ಗೆ ಕ್ಯಾಮೆರಾದಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ಇದರೊಂದಿಗೆ 8ಎಂಪಿ ಅಲ್ಟ್ರಾ ವೈಡ್ ಲೆನ್ಸ್, 5ಎಂಪಿ ಮ್ಯಾಕ್ರೊ ಲೆನ್ಸ್, 2ಎಂಪಿ ಡೆಪ್ತ್ ಸೆನ್ಸರ್ ನೀಡಲಾಗಿದೆ. ಇನ್ನೂ ಸೆಲ್ಫಿ ಪ್ರಿಯರಿಗಾಗಿ ಮುಂದೆ ಎರಡು ಕ್ಯಾಮೆರಾಗಳಿವೆ. 32ಎಂಪಿ ಸೋನಿ ಸೆನ್ಸರ್ ಹಾಗೂ 8ಎಂಪಿ ಅಲ್ಟ್ರಾ ವೈಡ್ ಲೆನ್ಸ್ ಇದೆ.

ಒನ್‌ಪ್ಲಸ್ ನಾರ್ಡ್ 4,115ಎಂಎಎಚ್ ಬ್ಯಾಟರಿ ಅಳವಡಿಸಿಕೊಂಡಿದ್ದು, 30ವ್ಯಾಟ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವಿದೆ. ಅರ್ಧ ಗಂಟೆಯಲ್ಲಿ ಫೋನ್ ಶೇ 70ರಷ್ಟು ಚಾರ್ಜ್ ಆಗುತ್ತದೆ. ಡಿಸ್‌ಪ್ಲೇಯಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇದೆ.

ಫೋನ್ ಜೊತೆಗೆ ವೈರ್‌ಲೆಸ್ ಒನ್‌ಪ್ಲಸ್ ಬಡ್ಸ್ ಸಹ ಬಿಡುಗಡೆ ಮಾಡಲಾಗಿದೆ. ಅದರ ಬೆಲೆ ₹4,999 ನಿಗದಿಯಾಗಿದೆ.

ಒನ್‌ಪ್ಲಸ್ ನಾರ್ಡ್ ಗುಣಲಕ್ಷಣಗಳು:

ಡಿಸ್‌ಪ್ಲೇ: 6.44 ಇಂಚು ಫ್ಲ್ಯೂಯಿಡ್ ಅಮೊಲೆಡ್ (90 ಹರ್ಟ್ಸ್ ರಿಫ್ರೆಷ್ ರೇಟ್)
ಪ್ರೊಸೆಸರ್: ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 765ಜಿ (3.38 ಜಿಬಿಪಿಎಸ್ ಡೌನ್‌ಲೋಡ್ ವೇಗ)
ಸಾಮರ್ಥ್ಯ: 6ಜಿಬಿ/ 8ಜಿಬಿ / 12ಜಿಬಿ ರ್‍ಯಾಮ್; 64ಜಿಬಿ/ 128ಜಿಬಿ/ 256ಜಿಬಿ ಸಂಗ್ರಹ
ಕ್ಯಾಮೆರಾ: ಹಿಂಬದಿಯಲ್ಲಿ 48ಎಂಪಿ+8ಎಂಪಿ+ಮ್ಯಾಕ್ರೊ ಲೆನ್ಸ್ 2ಎಂಪಿ+ಡೆಪ್ತ್ ಸೆನ್ಸರ್ 5ಎಂಪಿ; ಸೆಲ್ಫಿಗಾಗಿ 32ಎಂಪಿ+8ಎಂಪಿ ಅಲ್ಟ್ರಾ ವೈಡ್ ಆ್ಯಂಗಲ್ ಲೆನ್ಸ್
ತೂಕ: 184 ಗ್ರಾಂ
ಒಎಸ್: ಆ್ಯಂಡ್ರಾಯ್ಡ್ 10 ಆಧಾರಿತ ಆಕ್ಸಿಜನ್
ಬ್ಯಾಟರಿ: 4,115 ಎಂಎಎಚ್; 30ಟಿ ಫಾಸ್ಟ್ ಜಾರ್ಜಿಂಗ್
ಸಂಪರ್ಕ: 5ಜಿ ಸಪೋರ್ಟ್; ಇಸ್ರೊದ ನಾವಿಕ್ (NavIC) ಮಾರ್ಗಸೂಚಿ ಬಳಸಲು ಸಿದ್ಧ
ಪೋರ್ಟ್ಸ್: ಟೈಪ್–ಸಿ; ಎರಡು ನ್ಯಾನೊ ಸಿಮ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.