ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

OPPO ಎಫ್‌25 ಪ್ರೋ 5ಜಿ ಮೊಬೈಲ್‌ ಬಿಡುಗಡೆ

Published 7 ಮಾರ್ಚ್ 2024, 9:33 IST
Last Updated 7 ಮಾರ್ಚ್ 2024, 9:33 IST
ಅಕ್ಷರ ಗಾತ್ರ

ಬೆಂಗಳೂರು: ಚೀನಾದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ‘ಒಪ್ಪೊ’ ಭಾರತದ ಮಾರುಕಟ್ಟೆಗೆ ಎಫ್‌25 ಪ್ರೋ 5ಜಿ ಮೊಬೈಲ್‌ ಅನ್ನು ಪರಿಚಯಿಸಿದೆ. 

ಈ ಸ್ಮಾರ್ಟ್‌ಫೋನ್‌ 128 ಜಿಬಿ ಮತ್ತು 256 ಜಿಬಿ ಮೆಮೋರಿ ವೇರಿಯೆಂಟ್‌ನಲ್ಲಿ ಲಭ್ಯವಿದೆ. ಇದರ ಬೆಲೆ ಕ್ರಮವಾಗಿ ₹23,999 ಮತ್ತು ₹25,999 ಆಗಿದ್ದು, ಲಾವಾ ರೆಡ್‌ ಮತ್ತು ಓಷನ್‌ ಬ್ಲೂ ಬಣ್ಣದಲ್ಲಿ ದೊರೆಯಲಿದೆ. ಕೇವಲ 177 ಗ್ರಾಂ ತೂಕವಿರುವ ಈ ಫೋನ್‌, 7.54 ಎಂ.ಎಂ ದಪ್ಪ, 6.7 ಇಂಚು ಇದೆ.

ಬ್ಯಾಟರಿ ಸಾಮರ್ಥ್ಯವು 5000 ಎಂಎಎಚ್‌ ಆಗಿದ್ದು, 10 ನಿಮಿಷದಲ್ಲಿ ಶೇ 30ರಷ್ಟು ಹಾಗೂ 48 ನಿಮಿಷದಲ್ಲಿ ಪೂರ್ಣ ಜಾರ್ಜಿಂಗ್‌ ಆಗುತ್ತದೆ. ಬ್ಯಾಟರಿ 4 ವರ್ಷಗಳ ವರೆಗೆ ಬಾಳಿಕೆ ಬರಲಿದೆ. ಮೊಬೈಲ್‌ ಸ್ಕ್ರೀನ್‌ ರಕ್ಷಣೆಗಾಗಿ ಪಾಂಡ ಗ್ಲಾಸ್‌ ಅಳವಡಿಸಲಾಗಿದೆ. 1 ಲಕ್ಷ ವಾಲ್ಯೂಮ್‌ ಕೀ ಪ್ರೆಸ್‌ಗಳು, 2 ಲಕ್ಷ ಪವರ್‌ ಬಟನ್‌ ಪ್ರೆಸ್‌ಗಳು ಇರಲಿದ್ದು, ಬಾಳಿಕೆ ಹೆಚ್ಚು ಕಾಲ ಬರಲಿದೆ. 

64 ಎಂಪಿ ಹಿಂಭಾಗದ ಟ್ರಿಪಲ್‌ ಕ್ಯಾಮೆರಾ ಕತ್ತಲಿನ ಸಮಯದಲ್ಲೂ ಗುಣಮಟ್ಟದ ಚಿತ್ರಗಳನ್ನು ಒದಗಿಸಲಿದೆ. 4 ಕೆ ವಿಡಿಯೊ ರೆಕಾರ್ಡಿಂಗ್‌ ಹೊಂದಿದೆ. 4 ಸೆಂ.ಮೀ ಹತ್ತಿರದಲ್ಲಿರುವ ವಸ್ತುಗಳ ಚಿತ್ರವನ್ನು ಸಹ ಉತ್ತಮವಾಗಿ ಸೆರೆ ಹಿಡಿಯುತ್ತದೆ. ಮುಂಭಾಗದ ಕ್ಯಾಮೆರಾ ಸೆಲ್ಫಿಗಳಿಗೆ ಉತ್ತಮವಾಗಿದೆ. ಸ್ಥಿರ ಸಿಗ್ನಲ್‌ ಒದಗಿಸಲು ಕೃತಕ ಬುದ್ಧಿಮತ್ತೆ ಆಧಾರಿತ (ಎ.ಐ) ನೆಟ್‌ವರ್ಕ್‌ ಆಯ್ಕೆ ಮತ್ತು 360 ಡಿಗ್ರಿ ಸುತ್ತಲಿನ ಆಂಟೆನಾ ವಿನ್ಯಾಸವನ್ನು ಸಂಯೋಜಿಸಲಾಗಿದೆ.

ಈ ಮೊಬೈಲ್‌ ಒಪ್ಪೊ ಮಳಿಗೆ, ಅಮೆಜಾನ್‌, ಫ್ಲಿಪ್‌ಕಾರ್ಟ್‌ ಮಳಿಗೆಗಳಲ್ಲಿ ದೊರೆಯಲಿದೆ. ‌ಮೊಬೈಲ್‌ ಅಪ್‌ಡೇಟ್‌ ಎಐ ತಂತ್ರಜ್ಞಾನಗಳನ್ನು ಒಳಗೊಂಡಿದ್ದು, ಬಳಕೆದಾರನಿಗೆ ಉತ್ತಮ ಅನುಭವ ನೀಡಲಿದೆ ಎಂದು ಒಪ್ಪೊ ಇಂಡಿಯಾದ ಸರಕು ನಿರ್ವಹಣೆ ವಿಭಾಗದ ಉಪ ವ್ಯವಸ್ಥಾಪಕ ಅಭಿನವ್‌ ಮಿತ್ತಲ್‌ ಹೇಳಿದರು. 

ಎಸ್‌ಬಿಐ, ಐಸಿಐಸಿಐ ಸೇರಿದಂತೆ ಪ್ರಮುಖ ಬ್ಯಾಂಕ್‌ಗಳಿಂದ ಶೇ 10ರಷ್ಟು ಕ್ಯಾಶ್‌ ಬ್ಯಾಕ್‌ ಪಡೆಯಬಹುದಾಗಿದೆ. 9 ತಿಂಗಳವರೆಗೆ ಯಾವುದೇ ಶುಲ್ಕವಿಲ್ಲದೆ ಇಎಂಐ ಪಡೆದುಕೊಳ್ಳಬಹುದು. ಶೂನ್ಯ ಡೌನ್‌ ಪೇಮೆಂಟ್‌ ಸೇರಿದಂತೆ ಹಲವು ಕೊಡುಗೆಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT