ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಟ್ರಾನ್‌ ಫೋರ್ಸ್‌ಎಕ್ಸ್‌11ಪಿ ಸ್ಮಾರ್ಟ್‌ವಾಚ್‌, ಬಾಸ್‌ಬಡ್ಸ್‌ ಪರ್ಲ್‌ ಬಿಡುಗಡೆ

Last Updated 5 ಡಿಸೆಂಬರ್ 2022, 14:12 IST
ಅಕ್ಷರ ಗಾತ್ರ

ಬೆಂಗಳೂರು: ಕಡಿಮೆ ಬೆಲೆಗೆ ಸ್ಮಾರ್ಟ್ ಸಾಧನಗಳನ್ನು ನೀಡುವ ಪಿಟ್ರಾನ್‌ ಕಂಪನಿಯು ದೇಶದ ಮಾರುಕಟ್ಟೆಗೆ ಫೋರ್ಸ್‌ ಎಕ್ಸ್‌11ಪಿ ಸ್ಮಾರ್ಟ್‌ವಾಚ್‌ ಮತ್ತು ಟಿಡಬ್ಲ್ಯುಎಸ್‌ ಬಾಸ್‌ಬಡ್ಸ್‌ ಪರ್ಲ್‌ ಬಿಡುಗಡೆ ಮಾಡಿದೆ.

ಸ್ಮಾರ್ಟ್‌ವಾಚ್‌ 1.3 ರೌಂಡ್‌ ಎಚ್‌ಡಿ ಡಿಸ್‌ಪ್ಲೇ ವಿನ್ಯಾಸ ಮತ್ತು ಬ್ಲುಟೂತ್‌ ಕಾಲಿಂಗ್‌ ಆಯ್ಕೆ ಹೊಂದಿದೆ. ಹೆಲ್ತ್‌ ಮತ್ತು ಫಿಟ್‌ನೆಸ್‌ಗಾಗಿ 7 ಆಕ್ಟಿವ್‌ ಸ್ಪೋರ್ಟ್ಸ್ ಮೋಡ್‌ ಒಳಗೊಂಡಿದೆ. 100ಕ್ಕೂ ಹೆಚ್ಚಿನ ಕ್ಲೌಡ್‌ ಆಧಾರಿತ ವಾಚ್‌ ಫೇಸ್‌ ಇದ್ದು, ಬಳಕೆದಾರರು ತಮಗೆ ಬೇಕಿರುವಂತೆ ಹೊಂದಿಸಿಕೊಳ್ಳಬಹುದು ಎಂದು ಕಂಪನಿಯು ತಿಳಿಸಿದೆ.

260ಎಂಎಎಚ್‌ ಬ್ಯಾಟರಿ ಇದ್ದು, ಒಮ್ಮೆ ಚಾರ್ಜ್‌ ಮಾಡಿದರೆ 5 ದಿನಗಳವರೆಗೆ ಬ್ಯಾಟರಿ ಬಾಳಿಕೆ ಬರುತ್ತದೆ. 2 ಗಂಟೆಯಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಪಿಟ್ರಾನ್‌ ಫೋರ್ಸ್‌ ಎಕ್ಸ್‌11ಪಿ ಸ್ಮಾರ್ಟ್‌ವಾಚ್‌ ಬೆಲೆ ₹ 1,999 ಇದ್ದು, ಸೋಮವಾರದಿಂದ ಅಮೆಜಾನ್ ಇಂಡಿಯಾದಲ್ಲಿ ಖರೀದಿಗೆ ಲಭ್ಯವಿದೆ ಎಂದು ಕಂಪನಿ ಹೇಳಿದೆ. ವಿಶೇಷ ಕೊಡುಗೆಯ ಭಾಗವಾಗಿ ₹1,499ಕ್ಕೆ ಖರೀದಿಸುವ ಅವಕಾಶವನ್ನೂ ಕಂಪನಿ ನೀಡಿದೆ. ಆದರೆ ಈ ಕೊಡುಗೆಯು ಬುಧವಾರದವರೆಗೆ ಮಾತ್ರವೇ ಇರಲಿದೆ ಎಂದು ತಿಳಿಸಿದೆ.

ಬಾಸ್‌ಬಡ್ಸ್‌ ಪರ್ಲ್‌: ಇದು ಟ್ರೂ ವಯರ್‌ಲೆಸ್‌ ಇಯರ್‌ಬಡ್ಸ್‌ ಆಗಿದ್ದು, ಡ್ಯುಯಲ್‌ ಎಚ್‌ಡಿ ಮೈಕ್‌, ಹೊರಗಿನ ಶಬ್ಧ ತಡೆಯಲು ಎನ್ವಿರಾನ್‌ಮೆಂಟಲ್‌ ನಾಯ್ಸ್‌ ಕ್ಯಾನ್ಸಲೇಷನ್‌ (ಇಎನ್‌ಸಿ) ವ್ಯವಸ್ಥೆ ಹೊಂದಿದೆ. ಇದರ ಆಡಿಯೊ ಗುಣಮಟ್ಟ ಸ್ಪಷ್ಟವಾಗಿದ್ದು, ಸಂಗೀತ ಕೇಳಲು ಮತ್ತು ಫೋನ್ ಕರೆಯನ್ನು ಸ್ವೀಕರಿಸಿ ಮಾತನಾಡಲು ಯಾವುದೇ ಸಮಸ್ಯೆ ಆಗುವುದಿಲ್ಲ. ಮ್ಯೂಸಿಕ್‌ ಮೋಡ್‌, ಮೂವಿ ಮೋಡ್‌ ಆಯ್ಕೆಗಳು ಇದರಲ್ಲಿವೆ. ತಡೆರಹಿತ ಸಂಪರ್ಕ ಸಾಧಿಸಲು ಬ್ಲುಟೂತ್‌ 5.3 ವರ್ಷನ್‌ ಇದೆ. ಅಮೆಜಾನ್‌ ಇಂಡಿಯಾದಲ್ಲಿ ಮಂಗಳವಾರದಿಂದ ಖರೀದಿಗೆ ಲಭ್ಯವಾಗಲಿದ್ದು, ಬೆಲೆ ₹799 ಇರಲಿದೆ ಎಂದು ಕಂಪನಿಯು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT