ಬೆಂಗಳೂರು: ಸ್ಮಾರ್ಟ್ಫೋನ್ ತಯಾರಿಕಾ ಕಂಪನಿ ರಿಯಲ್ಮಿ ತನ್ನ ನೂತನ 'Realme GT 7' ಸರಣಿಯ ಉತ್ಪನ್ನವನ್ನು ದೇಶದಾದ್ಯಂತ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ನೂತನ ತಂತ್ರಜ್ಞಾನದ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರುವ ಈ ಸ್ಮಾರ್ಟ್ಫೋನ್, ಇಂದಿನ ಯುವಕರಿಗೆ ಹೊಂದುವ ಪರಿಪೂರ್ಣ ಆವೃತ್ತಿಯಾಗಿದೆ ಎಂದು ರಿಯಲ್ಮಿ ಇಂಡಿಯಾ ತಿಳಿಸಿದೆ.

ಗ್ರಾಹಕರಿಗೆ ಪ್ರೀಮಿಯಂ ಅನುಭವ ನೀಡುವ ಈ ಉತ್ಪನ್ನವು, ಅತ್ಯುತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ. 120W ಅಲ್ಟ್ರಾ ಚಾರ್ಜ್ ವೇಗದ ಚಾರ್ಜಿಂಗ್ ಸಾಮರ್ಥ್ಯದೊಂದಿಗೆ 7000mAh ಟೈಟಾನ್ ಬ್ಯಾಟರಿ ಇದರಲ್ಲಿದ್ದು, ಕೇವಲ 14 ನಿಮಿಷಗಳಲ್ಲಿ ಶೇ 50 ರಷ್ಟು, 40 ನಿಮಿಷಗಳಲ್ಲಿ ಶೇ 100 ಚಾರ್ಜ್ ಆಗಲಿದೆ.

MediaTek Dimensity 9400 ಇ ಚಿಪ್ಸೆಟ್ ಮೂಲಕ ಕಾರ್ಯನಿರ್ವಹಿಸುವ ದೇಶದ ಮೊದಲ ಸ್ಮಾರ್ಟ್ಫೋನ್ ಇದಾಗಿದ್ದು, ಮಲ್ಟಿಟಾಸ್ಕಿಂಗ್ ಮತ್ತು ಗೇಮಿಂಗ್-ದರ್ಜೆಯ ಕಾರ್ಯಕ್ಷಮತೆ ಹೊಂದಿದೆ. ದೈನಂದಿನ ಕಾರ್ಯಗಳನ್ನು ನಿಗದಿಪಡಿಸಲು ಮತ್ತು ನಿರ್ವಹಿಸಲು ಅನುವಾಗುವಂತೆ ಸ್ಮಾರ್ಟ್ ಶೆಡ್ಯೂಲ್ ರೂಪಿಸುವ ಎಐ ಪ್ಲಾನರ್ ಹೊಂದಿರುವುದು ಮತ್ತೊಂದು ವಿಶೇಷವಾಗಿದೆ.

ಸೋನಿ IMX 906 ಚಾಲಿತ ಎಐ ಟ್ರಾವೆಲ್ ಸ್ನ್ಯಾಪ್ ಕ್ಯಾಮೆರಾ, ವಿಶ್ವದ ಮೊದಲ 4K ಅಂಡರ್ ವಾಟರ್ ವಿಡಿಯೊ ಮೋಡ್ ಇದರಲ್ಲಿದೆ. ಡಾಲ್ಬಿ ಮಿಷನ್ ಜೊತೆಗೆ 30fps ಮೋಡ್ನಲ್ಲಿ 8K ಮತ್ತು 120fps ಮೋಡ್ನಲ್ಲಿ 4K ವಿಡಿಯೊ ರೆಕಾರ್ಡ್ ಮಾಡುವ ಕಾರ್ಯಕ್ಷಮತೆ ಹೊಂದಿದೆ.

8GB+256GB, 12GB+256GB ಮತ್ತು 12GB+512GB – ಮೂರು ಆವೃತ್ತಿಗಳಲ್ಲಿ ಲಭ್ಯವಿರುವ ಈ ಸ್ಮಾರ್ಟ್ಫೋನ್ನ ಆರಂಭಿಕ ಬೆಲೆ ₹ 28,999. 2025ರ ಮೇ 30ರಂದು ಮಾರಾಟ ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.