ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್10 ಬಿಡುಗಡೆ

ಗುರುವಾರ , ಮಾರ್ಚ್ 21, 2019
33 °C

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್10 ಬಿಡುಗಡೆ

Published:
Updated:
Prajavani

ನಗರದ ಕತ್ರಿಗುಪ್ಪೆಯ ಸಂಗೀತಾ ಮಳಿಗೆಯಲ್ಲಿ ಕನ್ನಡ ನಟಿ ರಚಿತಾ ರಾಮ್ ಅವರು ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಗ್ಯಾಲಕ್ಸಿ ಎಸ್10 ಬಿಡುಗಡೆ ಮಾಡಿದರು. ಸ್ಯಾಮ್‌ಸಂಗ್ ಇಂಡಿಯಾ, ಸಂಗೀತಾ ಮೊಬೈಲ್ಸ್ ಸಹಯೋಗದಲ್ಲಿ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಆಯೋಜನೆಗೊಂಡಿತ್ತು.

ಸ್ಯಾಮ್‌ಸಂಗ್ ಮಾಡರ್ನ್‌ ರೀಟೇಲ್‌ನ ಸೇಲ್ಸ್ ಹೆಡ್ ಸಸಿ ಕಿರಣ್ ಮತ್ತು ಸಂಗೀತಾ ಮೊಬೈಲ್ಸ್ ವ್ಯವಸ್ಥಾಪಕ ನಿರ್ದೇಶಕ ಸುಭಾಷ್ ಚಂದ್ರ ಉಪಸ್ಥಿತರಿದ್ದರು.

‘ಸಂಗೀತಾ ಮೊಬೈಲ್ ರೀಟೇಲ್ ವಲಯದಲ್ಲಿ ಜನಪ್ರಿಯ ಬ್ರ್ಯಾಂಡ್‌. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್10 ಗ್ರಾಹಕರಿಗೆ ಅತ್ಯಾಧುನಿಕ ಸ್ಮಾರ್ಟ್‌ಫೋನ್‌ ಅನುಭವ ನೀಡುವಲ್ಲಿ ಮತ್ತೊಂದು ಹೆಜ್ಜೆ ಇರಿಸಿದೆ’ ಎಂದು ಸಂಗೀತಾ ಮೊಬೈಲ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಸುಭಾಷ್ ಚಂದ್ರ ಹೇಳಿದರು.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್‌10 ವಿಶೇಷ ಆಕರ್ಷಣೆಗಳು:
* ಇನ್‌ಫಿನಿಟಿ- ಒ ಡಿಸ್‌ಪ್ಲೇ:
ಸಿನಿಮೀಯ, ಮಿನಿಮೈಸ್ಡ್-ಬೆಝೆಲ್ ಡೈನಮಿಕ್ ಅಮೋಲ್ಡ್ ಡಿಸ್‌ಪ್ಲೇ 

* ಪ್ರೊ-ಗ್ರೇಡ್ ಕ್ಯಾಮೆರಾ: ಸೂಪರ್ ಸ್ಟೆಡೀ ವಿಡಿಯೋ ಕ್ಯಾಪ್ಚರ್‌ನೊಂದಿಗೆ ಇಂಟೆಲಿಜೆಂಟ್ ಡ್ಯುಯಲ್ ಕ್ಯಾಮರಾ

* ವೈರ್‌ಲೆಸ್ ಪವರ್‌ಶೇರ್: ವೈರ್‌ಲೆಸ್ ಪವರ್‌ಶೇರ್‌ನೊಂದಿಗೆ ಡಿವೈಸ್-ಟು-ಡಿವೈಸ್ ಚಾರ್ಜಿಂಗ್

* 1.9 ಗಿಗಾಹರ್ಟ್ಸ್ ಆಕ್ಟಾ: ಕೋರ್ ಸ್ಯಾಮ್‌ಸಂಗ್ ಎಕ್ಸಿನೊಸ್ 9820 ಎಸ್‌ಒಸಿ ಪ್ರೊಸೆಸರ್ ಹೊಂದಿದೆ. ಇದು 8ಜಿಬಿ ರ‍್ಯಾಮ್‌ನೊಂದಿಗೆ ಬಂದಿದೆ. ಗ್ಯಾಲಕ್ಸಿ ಎಸ್10 ಆಂಡ್ರಾಯಿಡ್ 9.0ರಲ್ಲಿ ಕಾರ್ಯ ನಿರ್ವಹಿಸುತ್ತಿದ್ದು 3400ಎಂಎಎಚ್ ನಾನ್ ರಿಮೂವೇಬಲ್ ಬ್ಯಾಟರಿ ಹೊಂದಿದೆ.

* ಗ್ಯಾಲಕ್ಸಿ ಎಸ್10, ಪ್ರಿಸಂ ವೈಟ್‌, ಪ್ರಿಸಂ ಬ್ಲಾಕ್ ಮತ್ತು ಪ್ರಿಸಂ ಬ್ಲೂ ಎಂಬ ವಿಶೇಷ ಬಣ್ಣದ ಮಾದರಿಗಳಲ್ಲಿ ದೊರೆಯುತ್ತದೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !