ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಮ್‌ಸಂಗ್‌ನಿಂದ ದಿ ಸೆರಿಫ್, ಕ್ಯೂಎಲ್‌ಇಡಿ 8ಕೆ ಟಿವಿ: ಆರಂಭಿಕ ಬೆಲೆ ₹83,900

ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಎಲೆಕ್ಟ್ರಾನಿಕ್‌ ಮತ್ತು ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ ಸ್ಯಾಮ್‌ಸಂಗ್‌ ಭಾರತದಲ್ಲಿ 2020ರ ಎರಡು ಹೊಸ ಟಿವಿಗಳನ್ನು ಅನಾವರಣಗೊಳಿಸಿದೆ. ಲೈಫ್‌ಸ್ಟೈಲ್‌ ಟಿವಿ ದಿ ಸೆರಿಫ್‌ ಹಾಗೂ 8ಕೆ ಕ್ಯೂಎಲ್‌ಇಡಿ ಟಿವಿ ಮನೆಯ ಒಳಾಂಗಣ ಸೌಂದರ್ಯ ಹೆಚ್ಚಿಸಲಿವೆ ಎಂದು ಕಂಪನಿ ಹೇಳಿದೆ.

ಗೃಹಾಲಂಕಾರ ಪರಿಕಲ್ಪನೆಯೊಂದಿಗೆ ಸೆರಿಫ್‌ ವಿನ್ಯಾಸಗೊಳಿಸಿದ್ದು, ಇದು ಟಿವಿ ಜೊತೆಗೆ ಮನೆಯ ಪ್ರಮುಖ ಆಕರ್ಷಣೆಯೂ ಆಗಲಿದೆ. ಕ್ಯೂಎಲ್‌ಇಡಿ ಪರದೆ ಹಾಗೂ ಎನ್‌ಎಫ್‌ಸಿ (ನಿಯರ್ ಫೀಲ್ಡ್ ಕಮ್ಯುನಿಕೇಷನ್) ತಂತ್ರಜ್ಞಾನವನ್ನು ಸೆರಿಫ್‌ ಒಳಗೊಂಡಿದೆ.

ಸ್ಯಾಮ್‌ಸಂಗ್‌ನ ಫ್ಲಾಗ್‌ಶಿಪ್ ಕ್ಯೂಎಲ್‌ಇಡಿ 8ಕೆ ಟಿ.ವಿ ಉದ್ಯಮದ ಪ್ರಥಮ 8ಕೆ ಟಿ.ವಿ.ಯಾಗಿದ್ದು ಅತ್ಯಂತ ತೆಳು ಮಾದರಿ, ಪ್ರೀಮಿಯಂ 8ಕೆ ಚಿತ್ರದ ಗುಣಮಟ್ಟ ಹಾಗೂ ಪರಿಣಾಮಕಾರಿ ಸರೌಂಡ್-ಸೌಂಡ್‌ ಆಡಿಯೊ ಅನುಭವ ನೀಡುತ್ತದೆ. ಇದರ ಇನ್ಫಿನಿಟಿ ಸ್ಕ್ರೀನ್‌ ಶೇ.99ರಷ್ಟು ಸ್ಕ್ರೀನ್‌-ಟು-ಬಾಡಿ ಅನುಪಾತ ಹೊಂದಿದೆ. ಯುಟ್ಯೂಬ್‌, ಅಮೆಜಾನ್‌ ಪ್ರೈಮ್‌ ಸೇರಿದಂತೆ ಎಲ್ಲ ಒಟಿಟಿ ವೇದಿಕೆಗಳ ಮೂಲಕ ಕಾರ್ಯಕ್ರಮ ವೀಕ್ಷಿಸಬಹುದಾಗಿದೆ.

ಜುಲೈ 1-10ರವರೆಗೆ ಕ್ಯೂಎಲ್‌ಇಡಿ 8ಕೆ ಟಿ.ವಿ.ಗಳ ಪ್ರೀ–ಬುಕಿಂಗ್‌ಗೆ ಎರಡು ಗ್ಯಾಲಕ್ಸಿ ಎಸ್20 ಪ್ಲಸ್ ಸ್ಮಾರ್ಟ್‌ಫೋನ್‌ಗಳು ಕೊಡುಗೆ ರೂಪದಲ್ಲಿ ಸಿಗಲಿವೆ. ದಿ ಸೆರಿಫ್ ಜುಲೈ 8-17ರವರೆಗೆ ವಿಶೇಷ ದರದಲ್ಲಿ ಲಭ್ಯವಿರಲಿದೆ.

ದಿ ಸೆರಿಫ್‌ ಟಿವಿ

ಟಿವಿ ಅಳತೆ ಮತ್ತು ಬೆಲೆ:

* ದಿ ಸೆರಿಫ್ : 43 ಇಂಚು (1 ಮೀ 08 ಸೆಂ.ಮೀ), 49 ಇಂಚು (1ಮೀ 23 ಸೆಂ.ಮೀ) ಮತ್ತು 55-ಇಂಚು (1 ಮೀ 38 ಸೆಂ.ಮೀ) ಕ್ರಮವಾಗಿ ₹83,900, ₹1,16,900 ಮತ್ತು ₹1,48,900 ಗಳಿಗೆ ಲಭ್ಯ.

* ಕ್ಯೂಎಲ್‌ಇಡಿ 8ಕೆ ಟಿ.ವಿ: 65 ಇಂಚುಗಳ ಮಾದರಿಗೆ(1ಮೀ 63 ಸೆಂ.ಮೀ) ₹4.99 ಲಕ್ಷ, 75 ಇಂಚು(1ಮೀ 89 ಸೆಂ.ಮೀ) ಮಾದರಿಗೆ ₹9.99 ಲಕ್ಷ, 82-ಇಂಚು (2 ಮೀ 07 ಸೆಂ.ಮೀ) ಮಾದರಿಗೆ ₹14.29 ಲಕ್ಷ ಮತ್ತು 85 ಇಂಚು (2 ಮೀ 16 ಸೆಂ.ಮೀ) ಮಾದರಿಗೆ 15.79 ಲಕ್ಷ ರೂ. ಬೆಲೆ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT