ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರವೇ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M14 ಸ್ಮಾರ್ಟ್‌ಫೋನ್‌ ಬಿಡುಗಡೆ: ದರ ಎಷ್ಟು?

Last Updated 20 ಏಪ್ರಿಲ್ 2023, 13:48 IST
ಅಕ್ಷರ ಗಾತ್ರ

ಗುರುಗ್ರಾಮ: ದೇಶದ ಪ್ರಮುಖ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳಲ್ಲಿ ಒಂದಾದ ಸ್ಯಾಮ್‌ಸಂಗ್‌ ತನ್ನ ಗ್ಯಾಲಕ್ಸಿ ಎಂ ಸರಣಿಯ ಮತ್ತೊಂದು ಮೊಬೈಲ್‌ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದೆ. ಶೀಘ್ರವೇ ಗ್ಯಾಲಕ್ಸಿ M14 5G ಸ್ಮಾರ್ಟ್‌ಫೋನನ್ನು ಪರಿಚಯಿಸುವುದಾಗಿ ಹೇಳಿದೆ.

ಈಗಾಗಲೇ ಈ ಹಿಂದಿನ ಗ್ಯಾಲಕ್ಸಿ ಸರಣಿಯ ಮೊಬೈಲ್‌ಗಳಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಹೊಸ ಮೊಬೈಲ್‌ಗೂ ಒಳ್ಳೆಯ ಪ್ರತಿಕ್ರಿಯೆ ಸಿಗುವ ವಿಶ್ವಾಸದಲ್ಲಿ ಕಂಪನಿ ಇದೆ.

ಈ ಸ್ಮಾರ್ಟ್‌ಫೋನ್‌ನ ವೈಶಿಷ್ಟ್ಯಗಳು

ಕ್ಯಾಮೆರಾ: 50 ಎಂಪಿ ತ್ರಿಪಲ್‌ ಕ್ಯಾಮೆರಾ ಇದೆ. F1.8 ಲೆನ್ಸ್‌, ಮಂದ ಬೆಳಕಿನಲ್ಲೂ ಉತ್ತಮ ಫೋಟೊ ಅನುಭವ ನೀಡಲಿದೆ. ಆಕರ್ಷಕ ಸೆಲ್ಫಿ ತೆಗೆಯಲು 13 ಎಂಪಿಯ ಮುಂಬದಿ ಕ್ಯಾಮೆರಾ ಇದೆ.

ಬ್ಯಾಟರಿ: 6000 mAh ಸಾಮರ್ಥ್ಯದ ಬ್ಯಾಟರಿ ಇದ್ದು, ಎರಡು ದಿನಗಳ ಕಾಲ ಚಾರ್ಜಿಂಗ್ ನಿಲ್ಲಲಿದೆ ಎನ್ನುವುದು ಕಂಪನಿ ಕೊಟ್ಟಿರುವ ಭರವಸೆ. 25W ಫಾಸ್ಟ್‌ ಚಾರ್ಜಿಂಗ್‌ ಇದೆ.

ಪ್ರೊಸೆಸರ್‌ ಹಾಗೂ ರ‍್ಯಾಮ್: ಈ ಸ್ಮಾರ್ಟ್‌ಫೋನ್‌ನಲ್ಲಿ 5nm Exynos 1330 ಪ್ರೊಸೆಸರ್‌ ಇದ್ದು, ಉತ್ತಮ ಬಳಕೆ ಅನುಭವ ನೀಡಲಿದೆ ಎಂದು ಕಂಪನಿ ಹೇಳಿದೆ. ಅಳವಡಿಸಲಾಗಿರುವ 3ಡಿ ಗ್ರಾಫಿಕ್ಸ್‌ನಿಂದ ಉತ್ತಮ ಗೇಮಿಂಗ್‌ ಅನುಭವ ಪಡೆಯಬಹುದು. 4+128GB ಹಾಗೂ 6+128GBನಲ್ಲಿ ಮೊಬೈಲ್‌ ಲಭ್ಯವಿರಲಿದೆ.

ಡಿಸ್ಪ್ಲೆ: 6.6 ಇಂಚಿನ ಫುಲ್‌ ಎಚ್‌ಡಿ + 90Hz ಡಿಸ್‌ಪ್ಲೇ ಉತ್ತಮ ವೀಕ್ಷಣೆ ಅನುಭವ ನೀಡಲಿದೆ. ಸ್ಕ್ರೀನ್‌ ದೊಡ್ಡದಾಗಿ ಇರುವುದರಿಂದ ಸಾಮಾಜಿಕ ಜಾಲತಾಣ ಬಳಕೆ, ಬ್ರೌಸಿಂಗ್‌ ಅನುಭವ ಉತ್ತಮವಾಗಿರಲಿದೆ. ಗೊರಿಲ್ಲಾ ಗ್ಲಾಸ್‌ 5 ಇರುವುದರಿಂದ ನಿರಾತಂಕವಾಗಿ ಸ್ಮಾರ್ಟ್‌ಫೋನ್‌ ಬಳಕೆ ಮಾಡಬಹುದು.

ಲಭ್ಯತೆ: ಐಸಿ ಸಿಲ್ವರ್, ಬೆರಿ ಬ್ಲೂ ಹಾಗೂ ಸ್ಮೋಕಿ ಟೀಲ್‌ ಎನ್ನುವ ಮೂರು ಬಣ್ಣಗಳಲ್ಲಿ ಈ ಫೋನ್‌ ಬರಲಿದೆ. ಏಪ್ರಿಲ್‌ 21ರ ಮಧ್ಯಾಹ್ನ 12 ಗಂಟೆಗೆ ಮಾರಾಟ ಆರಂಭವಾಗಿದ್ದು, ಅಮೆಜಾನ್‌, samsung.com ಹಾಗೂ ಆಯ್ದ ರಿಟೇಲ್‌ ಸ್ಟೋರ್‌ಗಳಲ್ಲಿ ಲಭ್ಯವಿರಲಿದೆ.

ದರ ಹಾಗೂ ಆಫರ್‌ಗಳು: ಗ್ಯಾಲಕ್ಸಿ M14 5Gಯ 4+128GB ಸ್ಮಾರ್ಟ್‌ಫೋನ್‌ಗೆ ₹ 13,490 ಹಾಗೂ 6+128GB ಮೊಬೈಲ್‌ಗಳಿಗೆ ₹ 14,990 ದರ ನಿಗದಿಪಡಿಸಲಾಗಿದೆ. ಆಯ್ದ ಬ್ಯಾಂಕ್‌ ಕಾರ್ಡ್‌ಗಳಲ್ಲಿ ವಿವಿಧ ಆಫರ್‌ಗಳು ಕೂಡ ಇದೆ ಎಂದು ಸ್ಯಾಮ್‌ಸಂಗ್‌ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT