ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಗತ್ತಿಗೆ ಭಾರತದ ನಾಯಕತ್ವ ಅವಶ್ಯಕತೆಯಿದೆ: ಜಪಾನ್ ಟೆಕಿ ಶ್ಲಾಘನೆ

ಟೆಕ್ ಜಪಾನ್ ಎಂಬ ಕಂಪನಿ ಸ್ಥಾಪಕ ಹಾಗೂ ಸಿಇಒ ಆಗಿರುವ ಜಪಾನ್‌ ಮೂಲದ ನಾವೊಟಾಕಾ ನಿಶಿಯಾಮಾ
Published 11 ಮೇ 2024, 11:50 IST
Last Updated 11 ಮೇ 2024, 11:50 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದ ಸಂಸ್ಕೃತಿ ಮತ್ತು ವೈವಿದ್ಯತೆಯನ್ನು ಅರ್ಥ ಮಾಡಿಕೊಳ್ಳುವ ಸಲುವಾಗಿಯೇ ಬೆಂಗಳೂರಿಗೆ ತಮ್ಮ ಕಂ‍ಪನಿಯನ್ನು ಸ್ಥಳಾಂತರಿಸಿರುವ ಜಪಾನ್‌ ಟೆಕ್ ಕಂಪನಿ ಸಿಇಒ ಒಬ್ಬರು ‘ಜಗತ್ತಿಗೆ ಭಾರತದ ನಾಯತ್ವ ಅವಶ್ಯಕತೆಯಿದೆ’ ಎಂದು ಹೇಳಿದ್ದಾರೆ.

ಟೆಕ್ ಜಪಾನ್ ಎಂಬ ಕಂಪನಿ ಸ್ಥಾಪಕ ಹಾಗೂ ಸಿಇಒ ಆಗಿರುವ ಜಪಾನ್‌ ಮೂಲದ ನಾವೊಟಾಕಾ ನಿಶಿಯಾಮಾ ಎನ್ನುವರು ತಮ್ಮ ವಿವಿಧ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಭಾರತದ ಬೆಳವಣಿಗೆ ಬಗ್ಗೆ ಮೆಚ್ಚಿಕೊಂಡಿದ್ದಾರೆ.

ನಿಶಿಯಾಮಾ ಅವರು ಕಳೆದ ಏಪ್ರಿಲ್‌ನಲ್ಲಿ ಟೊಕಿಯೊದಲ್ಲಿದ್ದ ಅವರ ಕಚೇರಿಯನ್ನು ಬೆಂಗಳೂರಿಗೆ ಸ್ಥಳಾಂತರಿಸಿದ್ದಾರೆ ಎಂದು ಮನಿ ಕಂಟ್ರೋಲ್ ವೆವ್‌ಸೈಟ್ ವರದಿ ಮಾಡಿದೆ.

ಜಗತ್ತು ಇಂದು ವಾಸಿಸಲು ಯೋಗ್ಯವಾಗಿಲ್ಲ. ಆದರೆ, ಅದೆಲ್ಲ ಸಮಸ್ಯೆಗಳನ್ನು ತೊಡೆದು ಭಾರತ ಜಗತ್ತನ್ನು ಮುನ್ನಡೆಸಲಿದೆ. ಇದಕ್ಕಾಗಿ ಜಗತ್ತಿಗೆ ಭಾರತದ ನಾಯಕತ್ವದ ಅವಶ್ಯಕತೆಯಿದೆ ಎಂದಿದ್ದಾರೆ. ಇದಕ್ಕಾಗಿ ಅವರು ಮೈಕ್ರೊಸಾಫ್ಟ್ ಸಿಇಒ ಸತ್ಯಾ ನಾದೆಲ್ಲಾ, ಗೂಗಲ್ ಸಿಇಒ ಸುಂದರ್ ಪಿಚೈ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ.

ಭಾರತವು ವಿವಿಧ ಧರ್ಮ, ಭಾಷೆ ಮತ್ತು ವಿವಿಧ ಮೌಲ್ಯಗಳನ್ನು ಹೊಂದಿದ್ದರೂ ಒಂದು ಸಮಗ್ರ ದೇಶವಾಗಿ ಬೆರಗು ಮೂಡಿಸುತ್ತದೆ ಎಂದಿದ್ದಾರೆ.

ಭಾರತದಲ್ಲಿ ಸ್ಪರ್ಧೆ ಮತ್ತು ಸಹಯೋಗ ಎರಡೂ ಇರುವುದರಿಂದ ಜಗತ್ತನ್ನು ಮುನ್ನಡೆಸಲು ಸಮರ್ಥವಾಗಿದೆ ಎಂದು ನಿಶಿಯಾಮಾ ಕೊಂಡಾಡಿದ್ದಾರೆ.

ನಿಶಿಯಾಮಾ ಅವರು ಕೆಲಸದ ಜೊತೆ ಭಾರತದ ವೈವಿದ್ಯತೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರವಾಸ ಮಾಡುತ್ತಾ ತಾವು ಕಂಡ ಸಂಗತಿಗಳನ್ನು ಫೇಸ್‌ಬುಕ್, ಲಿಂಕ್ಡಿನ್ ಅಂತಹ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT