ಶನಿವಾರ, ಏಪ್ರಿಲ್ 4, 2020
19 °C

ಟೆಕ್‌ನೋ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ: 48ಎಂಪಿ ಕ್ಯಾಮೆರಾ, ಆರಂಭಿಕ ಬೆಲೆ ₹9,999

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೆಕ್‌ನೋ ಕ್ಯಾಮಾನ್‌ 15 ಪ್ರೋ ಮತ್ತು ಕ್ಯಾಮಾನ್‌ 15

ಬೆಂಗಳೂರು: ಟೆಕ್‌ನೋ ಮೊಬೈಲ್‌ ಎರಡು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣಗೊಳಿಸಿದೆ. ಉತ್ತಮ ಗುಣಮಟ್ಟದ ಫೋಟೊಗ್ರಫಿಗೆ ಗಮನ ಹರಿಸಿರುವ ಕಂಪನಿ, ರಾತ್ರಿ ಸಮಯ ಹಾಗೂ ಕಡಿಮೆ ಬೆಳಕಿನಲ್ಲೂ ಒಳ್ಳೆಯ ಚಿತ್ರಗಳನ್ನು ಸೆರೆಹಿಡಿಯಲು ಸಹಕಾರಿಯಾಗುವ ತಂತ್ರಜ್ಞಾನ ಅಳವಡಿಸಿಕೊಂಡಿದೆ. ಕ್ಯಾಮಾನ್‌ 15 ಪ್ರೋ ಮತ್ತು ಕ್ಯಾಮಾನ್‌ 15 ಮಾದರಿಯ ಫೋನ್‌ಗಳಲ್ಲಿ 48ಎಂಪಿ ಕ್ಯಾಮೆರಾ ಅಳವಡಿಸಲಾಗಿದೆ. 

ಕಡಿಮೆ ದರದಲ್ಲಿ ಅತ್ಯಾಧುನಿಕ ಆಯ್ಕೆಗಳನ್ನು ಒಳಗೊಂಡ ಸ್ಮಾರ್ಟ್‌ಫೋನ್‌ ಪೂರೈಸುತ್ತಿದೆ. ಫೆಬ್ರುವರಿ 25ರಿಂದ ಹೊಸ ಟೆಕ್‌ನೊ ಫೋನ್‌ಗಳು ಖರೀದಿಗೆ ಸಿಗಲಿವೆ. 6.55 ಇಂಚು ಡಾಟ್‌ ಇನ್‌ ಡಿಸ್‌ಪ್ಲೇ, ಪಾಪ್‌ ಅಪ್‌ ಸೆಲ್ಫಿ ಕ್ಯಾಮೆರಾ, ಡಿಎಸ್‌ಪಿ ಎಐ ಚಿಪ್‌, ಅಲ್ಟ್ರಾ ನೈಟ್‌ ಲೆನ್ಸ್‌, 3ಇನ್‌1 ಮಲ್ಟಿ ಕಾರ್ಡ್‌ ಸ್ಲಾಟ್‌, ಹಿಂಬದಿಯಲ್ಲಿ 48ಎಂಪಿ ಲೆನ್ಸ್‌ ಜೊತೆಗೆ 2ಎಂಪಿ, 5ಎಂಪಿ ಅಲ್ಟ್ರಾ ವೈಡ್‌ ಆ್ಯಂಗಲ್‌ ಲೆನ್ಸ್‌ ಹಾಗೂ ಕ್ಯುವಿಜಿಎ ಕ್ಯಾಮೆರಾ ಹೊಂದಿದೆ. 

ಆರಂಭಿಕ ಕೊಡುಗೆಯಾಗಿ ಕ್ಯಾಮಾನ್‌ 15 ಪ್ರೋ ಖರೀದಿಯೊಂದಿಗೆ ₹3,499 ಮೌಲ್ಯದ ವೈರ್‌ಲೆಸ್‌ ಸ್ಪೀಕರ್‌ ಸಿಗಲಿದೆ. 


ಕ್ಯಾಮಾನ್‌ 15 ಪ್ರೋ

ಟೆಕ್‌ನೋ ಫೋನ್‌ ಗುಣಲಕ್ಷಣಗಳು

ಕ್ಯಾಮಾನ್‌ 15 ಪ್ರೋ

* ಕ್ಯಾಮೆರಾ: 48ಎಂಪಿ ಎಐ ಕ್ವಾಡ್‌ + ಸೆಲ್ಫಿಗಾಗಿ 32ಎಂಪಿ ಪಾಪ್‌–ಅಪ್‌ ಕ್ಯಾಮೆರಾ (ಅಲ್ಟ್ರಾ ನೈಟ್‌ ಲೆನ್ಸ್‌ ಹೊಂದಿದೆ)

* ಬೆಲೆ: ₹14,999

* ಸಾಮರ್ಥ್ಯ: 6ಜಿಬಿ ರ್‍ಯಾಮ್‌ + 128ಜಿಬಿ ಸಂಗ್ರಹ ಸಾಮರ್ಥ್ಯ

*  6.55 ಇಂಚು ಡಾಟ್‌ ಇನ್‌ ಫುಲ್ಎಚ್‌ಡಿ ಡಿಸ್‌ಪ್ಲೇ

* ಪ್ರೊಸೆಸರ್‌: 2.35 ಗಿಗಾ ಹರ್ಟ್ಸ್‌ ಆಕ್ಟಾ ಕೋರ್‌ ಪಿ35

* ಬ್ಯಾಟರಿ: 4000 ಎಂಎಎಚ್‌

* ಬಣ್ಣ: ಐಸ್‌ ಜೇಡೈಟ್‌ ಜೇಡ್‌, ಓಪಲ್‌ ವೈಟ್‌

ಕ್ಯಾಮಾನ್‌ 15

* ಕ್ಯಾಮೆರಾ: 48ಎಂಪಿ ಎಐ ಕ್ವಾಡ್‌ + 16ಎಂಪಿ ಡಾಟ್‌ ಇನ್‌ ಸೆಲ್ಫಿ ಕ್ಯಾಮೆರಾ

* ಬೆಲೆ: ₹9,999

* ಸಾಮರ್ಥ್ಯ: 4ಜಿಬಿ ರ್‍ಯಾಮ್‌ + 64ಜಿಬಿ ಸಂಗ್ರಹ ಸಾಮರ್ಥ್ಯ

* 6.55 ಇಂಚು ಡಾಟ್‌ ಇನ್‌ ಡಿಸ್‌ಪ್ಲೇ

* ಬ್ಯಾಟರಿ: 5000 ಎಂಎಎಚ್‌

* ಬಣ್ಣ: ಪ್ಯಾಸಿನೇಟಿಂಗ್‌ ಪರ್ಪಲ್‌, ಡಾರ್ಕ್‌ ಜೇಡ್‌, ಗೋಲ್ಡ್‌

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು