ಬೆಂಗಳೂರು: ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ವಿವಿಧ ಮಾದರಿಗಳನ್ನು ಪರಿಚಯಿಸಿರುವ ಟೆಕ್‌ನೊ ಬ್ರ್ಯಾಂಡ್, ಪೊವಾ ಸರಣಿಯಲ್ಲಿ ಹೊಸ ಪೊವಾ 4 ಪರಿಚಯಿಸಿದೆ.
13 GB RAM ಮತ್ತು 128 GB ಸ್ಟೋರೇಜ್ ಹೊಸ ಟೆಕ್‌ನೊ ಪೊವಾ 4 ವಿಶೇಷತೆಯಾಗಿದೆ ಎಂದು ಕಂಪನಿ ಹೇಳಿದೆ.
ನೂತನ ಟೆಕ್‌ನೊ ಪೊವಾ 4 ಸ್ಮಾರ್ಟ್‌ಫೋನ್‌ನಲ್ಲಿ 6.8 ಇಂಚಿನ ಡಿಸ್‌ಪ್ಲೇ, ಹಿಲಿಯೊ G99 ಪ್ರೊಸೆಸರ್, ಒಕ್ಟಾ ಕೋರ್ Arm Cortex-A76 CPU ಬೆಂಬಲ, 6000 mAh ಬ್ಯಾಟರಿ ಮತ್ತು 18W ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿದೆ.
ಟೆಕ್‌ನೊ ಪೊವಾ 4 ಸ್ಮಾರ್ಟ್‌ಫೋನ್ ಕ್ರಯೋಲೈಟ್ ಬ್ಲೂ, ಉರಾನೊಲಿತ್ ಗ್ರೇ ಮತ್ತು ಮ್ಯಾಗ್ಮಾ ಆರೆಂಜ್ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಾಗಲಿದೆ.
ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಜತೆಗೆ ನೂತನ ಸ್ಮಾರ್ಟ್‌ಫೋನ್ ಲಭ್ಯವಾಗಲಿದೆ.