ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಕ್‌ನೊ ಹೊಸ ಫೋನ್‌ ಸ್ಪಾರ್ಕ್ 5 ಪ್ರೊ

Last Updated 20 ಜುಲೈ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು: ಕೈಗೆಟುಕುವ ಬೆಲೆಯಲ್ಲಿ ಪ್ರೀಮಿಯಂ ಫೋನ್‌ ಆಯ್ಕೆಗಳನ್ನು ನೀಡುವುದಾಗಿ ಹೇಳಿಕೊಳ್ಳುವ ಟೆಕ್‌ನೊ ಸ್ಮಾರ್ಟ್‌ಫೋನ್‌ ಕಂಪನಿ 'ಸ್ಪಾರ್ಕ್ 5 ಪ್ರೊ' ಬಿಡುಗಡೆ ಮಾಡಿದೆ. ಹೊಸ ಫೋನ್‌ನಲ್ಲಿ 6.6 ಇಂಚು ಎಚ್‌ಡಿ ಡಾಟ್‌–ಇನ್‌ ಡಿಸ್‌ಪ್ಲೇ ಇದೆ.

ಫೋನ್ ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಾ ನೀಡಲಾಗಿದೆ. 16ಎಂಪಿ ಮುಖ್ಯ ಕ್ಯಾಮೆರಾದೊಂದಿಗೆ 120 ಡಿಗ್ರಿ ಅಲ್ಟ್ರಾ ವೈಡ್‌ ಮತ್ತು ಮ್ಯಾಕ್ರೊ ಲೆನ್ಸ್‌ (2ಎಂಪಿ), ಇದರಿಂದ 4 ಸೆಂ.ಮೀ. ಎಕ್ಸ್‌ಟ್ರೀಮ್‌ ಕ್ಲೋಸ್‌ ಅಪ್‌ ಶಾಟ್‌ ತೆಗೆಯಬಹುದಾಗಿದೆ. ಪೋಟ್ರೇಟ್‌ ಫೋಟೊಗಳಿಗಾಗಿ 2ಎಂಪಿ ಡೆಪ್ತ್‌ ಲೆನ್ಸ್‌ ಸಹಕಾರಿಯಾಗಿದೆ. ಮುಂದಿನ 8ಎಂಪಿ ಎಐ ಡಾಟ್‌–ಇನ್‌ ಕ್ಯಾಮೆರಾ ಸೆಲ್ಫಿ ಪ್ರಿಯರನ್ನು ಸೆಳೆಯಬಹುದಾಗಿದೆ. ಸೆಲ್ಫಿ ಕ್ಯಾಮೆರಾ ಜೊತೆಗೆ ಎರಡು ಫ್ಲ್ಯಾಷ್‌ ಅಳವಡಿಸಲಾಗಿದ್ದು, ಹಿಂದೆ ನಾಲ್ಕು ಫ್ಲ್ಯಾಷ್‌ಗಳಿವೆ. ಎಐ ಆಧಾರಿತ ಬ್ಯೂಟಿ ಮೋಡ್‌ ನೀಡಿರುವುದರಿಂದ ಗುಣಮಟ್ಟದ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅನುಕೂಲವಾಗಿದೆ.

ಟೆಕ್‌ನೊ ಸ್ಪಾರ್ಕ್ 5 ಪ್ರೊ ಫೋನ್‌ಗೆ ₹10,499 ನಿಗದಿಯಾಗಿದೆ. ಸೀಬೆಡ್‌ ಬ್ಲೂ, ಸ್ಪಾರ್ಕ್‌ ಆರೆಂಜ್‌ ಹಾಗೂ ಐಸ್‌ ಜೇಡೈಟ್‌ ಬಣ್ಣಗಳಲ್ಲಿ ಫೋನ್‌ ಲಭ್ಯವಿದೆ.

5000ಎಂಎಎಚ್‌ ಸಾಮರ್ಥ್ಯದ ಬ್ಯಾಟರಿ ಇದ್ದು, ಒಮ್ಮೆ ಪೂರ್ಣ ಚಾರ್ಜ್‌ ಮಾಡಿದರೆ ಇಡೀ ದಿನ ಕಾರ್ಯನಿರ್ವಹಿಸಬಹುದು. ಅಂದರೆ, 17 ಗಂಟೆಗಳ ವಿಡಿಯೊ ಅಥವಾ 115 ಗಂಟೆಗಳ ಸಂಗೀತ, ಇಲ್ಲವೇ 13 ಗಂಟೆಗಳು ವಿಡಿಯೊ ಗೇಮ್‌ ಆಡಬಹುದು.

ಎ25 ಆಕ್ಟಾಕೋರ್ ಪ್ರೊಸೆಸರ್‌, 4ಜಿಬಿ ರ್‍ಯಾಮ್‌ ಹಾಗೂ 64ಜಿಬಿ ಸಂಗ್ರಹ ಸಾಮರ್ಥ್ಯವಿದೆ. ಫೋನ್‌ ಅನ್‌ಲಾಕ್‌ ಮಾಡಿಕೊಳ್ಳಲು ಫೇಸ್‌ ಅನ್‌ಲಾಕ್, ಸ್ಮಾರ್ಟ್‌ಪ್ರಿಂಟ್‌ ಸ್ಕ್ಯಾನರ್‌ ಆಯ್ಕೆಗಳಿವೆ. ಪ್ರಸ್ತುತ ಸ್ಪಾರ್ಕ್‌ 5 ಪ್ರೊ ಖರೀದಿಯೊಂದಿಗೆ ಟೆಕ್‌ನೊ ಕ್ವೈರ್‌ ಎಸ್‌1 ಬ್ಲೂಟೂಥ್‌ ವೈರ್‌ಲೆಸ್‌ ಸ್ಪೀಕರ್‌ ಕೊಡುಗೆ ರೂಪದಲ್ಲಿ ಸಿಗುತ್ತಿದೆ. ₹1,299 ಬೆಲೆಯ ಸ್ಟೀರಿಯೊ ಸರೌಂಡ್‌ ಸೌಂಡ್‌ ಸ್ಪೀಕರ್‌ 950ಎಂಎಎಚ್‌ ಬ್ಯಾಟರಿ ಹೊಂದಿದ್ದು, ಪೂರ್ಣ ಚಾರ್ಜ್‌ ಮಾಡಿದರೆ 10 ಗಂಟೆಗಳು ಸಂಗೀತ ಕೇಳಬಹುದು.

ಟೆಕ್‌ನೊ ಸ್ಪಾರ್ಕ್‌ 5 ಪ್ರೊ ಗುಣಲಕ್ಷಣಗಳು:
* ಡಿಸ್‌ಪ್ಲೇ: 6.6 ಎಚ್‌ಡಿ+ಡಾಟ್‌–ಇನ್‌
* ಕ್ಯಾಮೆರಾ: ಸೆಲ್ಫಿಗಾಗಿ 8ಎಂಪಿ; ಹಿಂಬದಿಯಲ್ಲಿ 16ಎಂಪಿ+2ಎಂಪಿ+2ಎಂಪಿ+ಎಐ ಲೆನ್ಸ್‌
* ಸಾಮರ್ಥ್ಯ: 4ಜಿಬಿ ರ್‍ಯಾಮ್‌; 64ಜಿಬಿ ಸಂಗ್ರಹ ಸಾಮರ್ಥ್ಯ
* ಬ್ಯಾಟರಿ: 5000ಎಂಎಎಚ್‌
* ಪ್ರೊಸೆಸರ್‌: ಎ25 ಆಕ್ಟಾಕೋರ್
* ಬೆಲೆ: ₹10,499

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT