ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಕ್‍ನೋ ಸ್ಪಾರ್ಕ್ ಪವರ್ 2: ದೊಡ್ಡ ಬ್ಯಾಟರಿ, ದೊಡ್ಡ ಸ್ಕ್ರೀನ್

ಅಕ್ಷರ ಗಾತ್ರ

ಬೆಂಗಳೂರು: ಹತ್ತು ಸಾವಿರಕ್ಕೂ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳ ಪೈಕಿ ಉತ್ತಮ ಸೌಲಭ್ಯಗಳನ್ನು ಟ್ರಾನ್ಸಿಯಾನ್ ಕಂಪನಿಯ ಟೆಕ್‌ನೋ ನೀಡುತ್ತಿರುವುದಾಗಿ ಹೇಳಿಕೊಂಡಿದೆ. ಸ್ಪಾರ್ಕ್‌ ಪವರ್‌ 2 ಮಾದರಿಯ ಫೋನ್‌ 7 ಇಂಚು ಡಾಟ್‌ ನಾಚ್‌ ಡಿಸ್‌ಪ್ಲೇ ಮತ್ತು 6000ಎಂಎಎಚ್‌ ಬ್ಯಾಟರಿ ಹೊಂದಿದೆ.

ದೀರ್ಘಾವಧಿಯ ಬ್ಯಾಟರಿ ಮತ್ತು ದೊಡ್ಡ ಸ್ಕ್ರೀನ್‌ ಹೊಂದಿರುವುದು ಈ ಫೋನ್‌ ವಿಶೇಷ. ಫಾಸ್ಟ್‌ ಚಾರ್ಜಿಂಗ್‌ ವ್ಯವಸ್ಥೆಯಲ್ಲಿ ಕೇವಲ 10 ನಿಮಿಷ ಚಾರ್ಜ್‌ ಮಾಡಿ 3 ಗಂಟೆಗಳ ವರೆಗೂ ಮಾತನಾಡಬಹುದು ಎಂದು ಕಂಪನಿ ಹೇಳಿದೆ. ಜೂನ್‌ 23ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಫೋನ್‌ ಖರೀದಿಗೆ ಲಭ್ಯವಿದೆ.

ಸ್ಪಾರ್ಕ್‌ ಪವರ್‌ 2 ಬೆಲೆ ₹9,999 ನಿಗದಿಯಾಗಿದೆ.

ವಿಡಿಯೊ ವೀಕ್ಷಣೆ, ಓದಲು ಹಾಗೂ ಇಂಟರ್‌ನೆಟ್‌ನಲ್ಲಿ ಹುಡುಕಾಟಕ್ಕೆ 7 ಇಂಚಿನ ದೊಡ್ಡ ಸ್ಕ್ರೀನ್‌ ಸಹಕಾರಿಯಾಗಲಿದೆ. 6000ಎಂಎಎಚ್‌ ಬ್ಯಾಟರಿ ಜೊತೆಗೆ 18 ವ್ಯಾಟ್‌ ಫಾಸ್ಟ್‌ ಚಾರ್ಜರ್‌ ಇರಲಿದೆ. ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ 4 ದಿನಗಳ ವರೆಗೂ ಫೋನ್‌ ಬಳಕೆ ಮಾಡಬಹುದು. ಸತತ 14 ಗಂಟೆಗಳು ವಿಡಿಯೊ ವೀಕ್ಷಿಸಬಹುದು.

ಸೆಲ್ಫಿಗಾಗಿ 16ಎಂಪಿ ಕ್ಯಾಮೆರಾದೊಂದಿದೆ ಎಐ ಆಯ್ಕೆಗಳನ್ನು ನೀಡಲಾಗಿದೆ. ಹಿಂಬದಿಯಲ್ಲಿ 16ಎಂಪಿ ಕ್ಯಾಮೆರಾ ಸೇರಿದಂತೆ ನಾಲ್ಕು ಕ್ಯಾಮೆರಾ ಹಾಗೂ ಫ್ಲ್ಯಾಷ್‌ ಅಳವಡಿಸಲಾಗಿದೆ. ಎರಡು ಸ್ಪೀಕರ್‌ಗಳಿವೆ. 4ಜಿಬಿ ರ್‍ಯಾಮ್‌ ಮತ್ತು 64ಜಿಬಿ ಸಂಗ್ರಹ ಸಾಮರ್ಥ್ಯವಿದ್ದು, 256ಜಿಬಿ ವರೆಗೂ ಸಂಗ್ರಹ ವಿಸ್ತರಿಸಿಕೊಳ್ಳಬಹುದಾಗಿದೆ. ಆಕ್ಟಾ ಕೋರ್‌ 2.0 ಗಿಗಾ ಹರ್ಟ್ಸ್‌ ಪ್ರೊಸೆಸರ್‌ ಹಾಗೂ ಆ್ಯಂಡ್ರಾಯ್ಡ್ 10ರಲ್ಲಿ ಕಾರ್ಯಾಚರಿಸುತ್ತದೆ.

ಫಿಂಗರ್‌ಪ್ರಿಂಟ್‌ ಸೆನ್ಸರ್‌ ಮತ್ತು ಫೇಸ್‌ ಅನ್‌ಲಾಕ್‌ 2.0 ಇದೆ.

ಟೆಕ್‍ನೋ ಸ್ಪಾರ್ಕ್ ಪವರ್ 2 ಗುಣಲಕ್ಷಣಗಳು:

* ಡಿಸ್‌ಪ್ಲೇ : 7 ಇಂಚು ಡಾಟ್‌ ನಾಚ್‌
* ಬ್ಯಾಟರಿ: 6000ಎಂಎಎಚ್‌ (18 ವ್ಯಾಟ್‌ ಫಾಸ್ಟ್‌ ಚಾರ್ಜಿಂಗ್‌)
* ಸಾಮರ್ಥ್ಯ: 4ಜಿಬಿ ರ್‍ಯಾಮ್‌, 64ಜಿಬಿ ಸಂಗ್ರಹ
* ಕ್ಯಾಮೆರಾ: ಸೆಲ್ಫಿಗಾಗಿ 16ಎಂಪಿ + ಹಿಂಬದಿಯಲ್ಲಿ 16ಎಂಪಿ ನಾಲ್ಕು ಕ್ಯಾಮೆರಾ
* ಪ್ರೊಸೆಸರ್‌: ಆಕ್ಟಾ ಕೋರ್ 2.0 ಗಿಗಾ ಹರ್ಟ್ಸ್‌
* ಬೆಲೆ: ₹9,999

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT