ಬುಧವಾರ, ಸೆಪ್ಟೆಂಬರ್ 22, 2021
25 °C

ಭಾರತಕ್ಕೆ ಟೆಕ್ನೊ ಸ್ಪಾರ್ಕ್‌ ಸ್ಮಾರ್ಟ್‌ಫೋನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಟೆಕ್ನೊ ಕಂಪನಿಯು ಭಾರತದ ಮಾರುಕಟ್ಟೆಗೆ ’ಸ್ಪರ್ಕ್‌‘ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. 6.1 ಎಚ್‌ಡಿ ಪ್ಲಸ್‌ ಡಾಟ್‌ ನಾಚ್‌ ಡಿಸ್‌ಪ್ಲೇ ಮತ್ತು ಎಐ ಫ್ರಂಟ್‌ ಫ್ಲ್ಯಾಷ್‌ ಹೊಂದಿರುವ ಹ್ಯಾಂಡ್‌ಸೆಟ್‌ ₹ 5,499 ರಿಂದ ಆರಂಭವಾಗಲಿದೆ.

ಆರಂಭಿಕ, ಮಧ್ಯಮ ಮತ್ತು ಪ್ರೀಮಿಯಂ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿರುವ ಕಂಪನಿಯು ಇದೀಗ ಹಬ್ಬದ ಸಂದರ್ಭದ ಕೊಡುಗೆಯಾಗಿ ಆರಂಭಿಕ ಬೆಲೆಯ ಹ್ಯಾಂಡ್‌ಸೆಟ್‌ ಬಿಡುಗಡೆ ಮಾಡಿದೆ.

ಈಚೆಗಷ್ಟೇ ಪ್ರೀಮಿಯಂ ವಿಭಾಗದಲ್ಲಿ ಫ್ಯಾಂಟಮ್‌ 9 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿರುವ ಕಂಪನಿಯು ತನ್ನ ಜಾಗತಿಕ ಉತ್ಪನ್ನವಾದ ’ಸ್ಪಾರ್ಕ್‌‘ ಅನ್ನು ಭಾರತದಲ್ಲಿಯೂ ಪರಿಚಯಿಸಿದೆ. ದೇಶದಾದ್ಯಂತ 35 ಸಾವಿರಕ್ಕೂ ಅಧಿಕ ರಿಟೇಲ್‌ ಮಳಿಗೆಗಳಲ್ಲಿ ಇಂದಿನಿಂದಲೇ ಖರೀದಿಗೆ ಲಭ್ಯವಾಗಿವೆ.

ಟೆಕ್ನೊ ಸ್ಪಾರ್ಕ್‌ ಗೊ: ಬೆಲೆ ₹ 5,499. 8ಎಂಪಿ ಎಐ ರಿಯರ್‌ ಕ್ಯಾಮೆರಾ, 5ಎಂಪಿ ಸೆಲ್ಫಿ ಕ್ಯಾಮೆರಾ ಇದೆ. 2ಜಿಬಿ ರ್‍ಯಾಮ್ ಮತ್ತು 16 ಜಿಬಿ ರೋಮ್  256 ಜಿಬಿವರೆಗೂ ವಿಸ್ತರಣೆ ಸಾಧ್ಯ. ಟೆಕ್ನೊ ಸ್ಪಾರ್ಕ್ ಗೊ ಖರೀದಿಸುವವರಿಗೆ ₹ 799ರ ಬೆಲೆಯ ಬ್ಲೂಟೂತ್ ಇಯರ್‌ಫೋನ್‌ ಉಚಿತವಾಗಿ ಸಿಗಲಿದೆ. ಈ ಕೊಡುಗೆಯು ಸೀಮಿತ ಅವಧಿಗೆ ಮಾತ್ರವೇ ಇರಲಿದೆ ಎಂದು ಕಂಪನಿ ತಿಳಿಸಿದೆ. 

ಟೆಕ್ನೊ ಸ್ಪಾರ್ಕ್‌ 4 ಏರ್‌: ಬೆಲೆ ₹ 6,999. 13ಎಂಪಿ ಡ್ಯುಯಲ್‌ ಲೆನ್ಸ್ ರಿಯರ್ ಕ್ಯಾಮೆರಾ, 5 ಎಂಪಿ ಸೆಲ್ಪಿ ಕ್ಯಾಮೆರಾ ಇದೆ. 3ಜಿಬಿ ರ್‍ಯಾಮ್‌ ಮತ್ತು 32 ಜಿಬಿ ರೋಮ್‌  256 ಜಿಬಿವರೆಗೂ ವಿಸ್ತರಣೆ ಸಾಧ್ಯ.

ಎರಡೂ ಫೋನ್‌ಗಳು ಆಂಡ್ರಾಯ್ಡ್ 9.0 ಆಧಾರಿತ HiOS, 3000 ಎಂಎಎಚ್‌ ಬ್ಯಾಟರಿ ಹೊಂದಿವೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು