ಬುಧವಾರ, ಮಾರ್ಚ್ 3, 2021
30 °C
ಗಣರಾಜ್ಯೋತ್ಸವದ ದಿನದ ವಿಶೇ‍ಷ ಮಾರಾಟ ಜ. 20ರಿಂದ 24ರವರೆಗೆ ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರ 

ಥಾಮ್ಸನ್‌ ಪಾಥ್‌ ಆ್ಯಂಡ್ರಾಯ್ಡ್‌ ಟಿವಿಗಳು ಬಿಡುಗಡೆ: ಜ.20ರಿಂದ ಮಾರಾಟ ಆರಂಭ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಾಥ್‌ ಆಂಡ್ರಾಯ್ಡ್‌ ಟಿವಿಯನ್ನು ಥಾಮ್ಸನ್‌ ಕಂಪನಿಯು 42 ಮತ್ತು 43 ಇಂಚಿನ ಅಳತೆಯಲ್ಲಿ ಬಿಡುಗಡೆ ಮಾಡುತ್ತಿದೆ. ಜ. 20ರಿಂದ 24ರವರೆಗೆ ಫ್ಲಿಪ್‌ಕಾರ್ಟ್‌ನಲ್ಲಿ ನಡೆಯುವ ಗಣರಾಜ್ಯೋತ್ಸವ ವಿಶೇಷ ಮಾರಾಟದಲ್ಲಿ ಈ ಟಿವಿಗಳು ₹19,999 ವಿಶೇಷ ದರಲದಲ್ಲಿ ಲಭ್ಯವಿದೆ!

43 ಇಂಚಿನ ಫ್ರೇಮ್‌ಲೆಸ್‌ ಪ್ರೀಮಿಯಮ್‌ ಪಾಥ್‌ ಸರಣಿಯು ₹22,499 ಲಭ್ಯವಿದೆ. 

ವಾಯ್ಸ್ ಕಂಟ್ರೋಲ್, ಗೂಗಲ್ ಅಸಿಸ್ಟೆಂಟ್, ಪ್ರೈಮ್‌, ಯೂಟ್ಯೂಬ್ ಮತ್ತು ಸೋನಿ ಲಿವ್‌ ಸೇರಿದಂತೆ ಹಲವು ವಿಶೇಷತೆಗಳು ಇದರಲ್ಲಿವೆ. ಎರಡೂ ಮಾದರಿಗಳು ವಿದ್ಯುತ್ ಕ್ಷಮತೆ ಹೊಂದಿವೆ. 43 ಇಂಚಿನ ಪಾಥ್ ಸರಣಿ ಟಿವಿ, 40 ವ್ಯಾಟ್‌ಗಳ ಸೌಂಡ್ ಔಟ್‌ಪುಟ್ ಹೊಂದಿದ್ದು ಇದು ಈ ವರ್ಗದಲ್ಲಿ ಅತ್ಯುತ್ತಮವಾಗಿದೆ. 

ಈ ಬಿಡುಗಡೆ ಕುರಿತಂತೆ ಮಾತನಾಡಿರುವ ಥಾಮ್ಸನ್ ಟಿ.ವಿ.ಯ ವಿಶೇಷ ಬ್ರಾಂಡ್ ಲೈಸೆನ್ಸಿ, ಎಸ್‌ಪಿಪಿಎಲ್‌ನ ಸಿಇಒ ಅವನೀತ್ ಸಿಂಗ್ ಮಾರ್ವಾ, ‘ಕಳೆದ ವರ್ಷ ನಮಗೆಲ್ಲರಿಗೂ ಅತ್ಯಂತ ಬದಲಾವಣೆಯ ಹಾಗೂ ಸವಾಲಿನ ವರ್ಷವಾಗಿತ್ತು. ಕಳೆದ ವರ್ಷದಲ್ಲಿ ಕಲಿತ ಒಂದು ಪ್ರಮುಖ ಪಾಠವೆಂದರೆ ನಮ್ಮ ಪ್ರೀತಿಪಾತ್ರರೊಂದಿಗೆ ನಮ್ಮ ಬಾಂಧವ್ಯಗಳಿಗೆ ಮೌಲ್ಯನೀಡುವುದು, ಗೌರವ ಸಲ್ಲಿಸುವುದೇ ಆಗಿದೆ. ಗ್ರಾಹಕರು ಸದಾ ಥಾಮ್ಸನ್‌ಗೆ ಅತ್ಯಂತ ಮೌಲ್ಯಯುತ ಮಿತ್ರರಾಗಿದ್ದಾರೆ. ನಾವು ಈ ವರ್ಷದ ಪ್ರಾರಂಭವನ್ನು ಎರಡು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಮೂಲಕ ಸಂಭ್ರಮಿಸಲು ಬಯಸುತ್ತಿದ್ದೇವೆ. ನಾವು ಭಾರತದ ಏಕೈಕ 42 ಅಳತೆಯ ಆ್ಯಂಡ್ರಾಯ್ಡ್‌ ಟಿ.ವಿ.ಯನ್ನು ಬಿಡುಗಡೆ ಮಾಡುತ್ತಿದ್ದೇವೆ. ಅತ್ಯಂತ  ಕೈಗೆಟುಕುವ ದರಗಳಲ್ಲಿ ಅತ್ಯುತ್ತಮ ಉತ್ಪನ್ನಗಳನ್ನು ಒದಗಿಸುವುದನ್ನು ಈ ಹೊಸ ಉತ್ಪನ್ನಗಳೊಂದಿಗೆ ನಾವು ಮುಂದುವರಿಸುತ್ತೇವೆ,‘ ಎಂದು ಹೇಳಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು