ಸೋಮವಾರ, ಅಕ್ಟೋಬರ್ 18, 2021
22 °C

Thomson TV: ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್‌ನಲ್ಲಿ ವಿಶೇಷ ರಿಯಾಯಿತಿ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Thomson TV

ಬೆಂಗಳೂರು: ಅಕ್ಟೋಬರ್‌ 3ರಿಂದ ಆರಂಭವಾಗುವ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ವಿಶೇಷ ಆಫರ್ ಸೇಲ್‌ನಲ್ಲಿ ಥಾಮ್ಸನ್ ಟಿವಿಗಳು ಆಕರ್ಷಕ ದರದಲ್ಲಿ ದೊರೆಯಲಿವೆ.

ಹೊಸ ಸರಣಿಯ ಸ್ಮಾರ್ಟ್ ಟಿವಿ ಬಿಡುಗಡೆ ಜತೆಗೇ ಥಾಮ್ಸನ್ ಈಗಾಗಲೇ ಪರಿಚಯಿಸಿರುವ ವಿವಿಧ ಟಿವಿ ಮಾದರಿಗಳ ದರದಲ್ಲಿ ರಿಯಾಯಿತಿ ಪ್ರಕಟಿಸಿದೆ.

ಥಾಮ್ಸನ್ ಸ್ಮಾರ್ಟ್ ಟಿವಿ ದರ ₹6,999ರಿಂದ ಆರಂಭವಾದರೆ, ವಾಷಿಂಗ್ ಮೆಶೀನ್ ದರ ₹8,499 ರಿಂದ ಆರಂಭವಾಗಲಿದೆ.

ಥಾಮ್ಸನ್ ಆ್ಯಂಡ್ರಾಯ್ಡ್ ಮತ್ತು ಓಥ್ ಪ್ರೊ ಟಿವಿ ಮಾದರಿ 32 ಇಂಚಿನ ಆವೃತ್ತಿಗೆ ₹12,999 ದರ ಇರಲಿದೆ. ಅಲ್ಲದೆ, ಆ್ಯಕ್ಸಿಸ್ ಮತ್ತು ಐಸಿಐಸಿಐ ಬ್ಯಾಂಕ್ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಶೇ 10ರ ಡಿಸ್ಕೌಂಟ್ ಕೂಡ ಲಭ್ಯವಾಗಲಿದೆ.

ಥಾಮ್ಸನ್ ಸ್ಮಾರ್ಟ್ ಟಿವಿಗಳು ಗೂಗಲ್ ಆ್ಯಂಡ್ರಾಯ್ಡ್ ಮೂಲಕ ಕಾರ್ಯನಿರ್ವಹಿಸುತ್ತಿದ್ದು, ಎಲ್ಲ ಪ್ರಮುಖ ಒಟಿಟಿ ತಾಣಗಳು ದೊರೆಯಲಿವೆ ಎಂದು ಕಂಪನಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು