ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಸ್ಮಾರ್ಟ್ ವಾಚ್‌ ಹೇಗಿತ್ತು? ವಿಡಿಯೊ ಹಂಚಿಕೊಂಡ ಸಚಿವ ರಾಜೀವ್‌ ಚಂದ್ರಶೇಖರ್‌

Published 12 ಫೆಬ್ರುವರಿ 2024, 13:13 IST
Last Updated 12 ಫೆಬ್ರುವರಿ 2024, 13:13 IST
ಅಕ್ಷರ ಗಾತ್ರ

ನವದೆಹಲಿ: ಮೊಟ್ಟ ಮೊದಲು ಮಾರುಕಟ್ಟೆಗೆ ಬಂದ ಸ್ಮಾರ್ಟ್‌ ವಾಚ್‌ ಕುರಿತಾದ ವಿಡಿಯೊವೊಂದನ್ನು ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಅವರು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

ವಿಡಿಯೊದಲ್ಲಿ 1982ರಲ್ಲಿ ಬಿಡುಗಡೆಯಾದ ಮೊದಲ ಸ್ಮಾರ್ಟ್‌ವಾಚ್‌ಬಗ್ಗೆ ವಿವರಿಸಲಾಗಿದೆ.  ಇದು ಸೀಕೊ (Seiko) ಕಂಪನಿಯದ್ದಾಗಿದೆ.

ಟಿವಿ ಕಾರ್ಯಕ್ರಮವೊಂದರ ವಿಡಿಯೊವನ್ನು ಸಚಿವರು ಹಂಚಿಕೊಂಡಿದ್ದಾರೆ. ಇದರಲ್ಲಿ ಸ್ಮಾರ್ಟ್‌ವಾಚ್‌ ಕುರಿತು ಕುತೂಹಲದ ವಿಷಯವನ್ನು ನಿರೂಪಕರು ಹಂಚಿಕೊಳ್ಳುವ ದೃಶ್ಯವನ್ನು ಕಾಣಬಹುದು.

‘1982ರಲ್ಲಿ ಬಿಡುಗಡೆಯಾದ ಮೊದಲ ಸ್ಮಾರ್ಟ್‌ ವಾಚ್‌ನಿಂದ ಇಂದಿನ ತಂತ್ರಜ್ಞಾನದವರೆಗೆ...ಇದು ತಂತ್ರಜ್ಞಾನ ಅಭಿವೃದ್ಧಿಯ ಪಯಣ’ ಎಂದು ಬರೆದುಕೊಂಡಿದ್ದಾರೆ.

ವಿಡಿಯೊ ನೋಡಿ ಹಲವು ಬಳಕೆದಾರರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ತಂತ್ರಜ್ಞಾನದ ಬೆಳವಣಿಗೆ ಅಚ್ಚರಿ ಮೂಡಿಸುತ್ತಿದೆ. ಮುಂದಿನ ದಿನಗಳಲ್ಲಿ ಇದು ಇನ್ನೂ ಬದಲಾಗಲಿದೆ ಎಂದು ಕಾಮೆಂಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT