ಶುಕ್ರವಾರ, ಸೆಪ್ಟೆಂಬರ್ 24, 2021
27 °C
ವಿವೊ ನೂತನ ಫೋನ್ ದರದಲ್ಲಿ ಇಳಿಕೆಯಾಗಿದೆ.

Vivo X60: ದೇಶದಲ್ಲಿ ವಿವೊ ಸ್ಮಾರ್ಟ್‌ಫೋನ್ ಬೆಲೆ ₹3000 ಇಳಿಕೆ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

VIVO India

ಬೆಂಗಳೂರು: ವಿವೋ ಪ್ರೀಮಿಯಂ ಎಕ್ಸ್ ಸರಣಿಯಲ್ಲಿ ಬಿಡುಗಡೆ ಮಾಡಿದ್ದ ನೂತನ ಫೋನ್ ಒಂದರ ಬೆಲೆಯನ್ನು ದೇಶದಲ್ಲಿ ಇಳಿಕೆ ಮಾಡಿದೆ.

ವಿವೊ X ಸರಣಿಯಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿದ್ದ Vivo X60 ಸ್ಮಾರ್ಟ್‌ಫೋನ್ ಬೆಲೆ ದೇಶದಲ್ಲಿ ₹3,000 ದರ ಇಳಿಕೆಯಾಗಿದೆ.

ಇದೇ ಸರಣಿಯಲ್ಲಿ ಮಾರುಕಟ್ಟೆಗೆ ಪ್ರವೇಶಿಸಿದ್ದ ವಿವೊ X60 Pro ಮತ್ತು ವಿವೊ X60 Pro+ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

ವಿವೊ X60: ವಿವೊ ಎಕ್ಸ್ ಸರಣಿಯ ಸ್ಮಾರ್ಟ್‌ಫೋನ್ X60 ದರ, 8 GB + 128 GB ಮಾದರಿಗೆ ಬೆಲೆ ಇಳಿಕೆಯ ಬಳಿಕ ₹34,990 ದರವಿದೆ. ಈ ಮೊದಲು ₹37,990 ದರವಿತ್ತು. ಅಲ್ಲದೆ, 12 GB + 256 GB ಮಾದರಿಗೆ ₹39,990 ದರವಿದೆ. ಈ ಆವೃತ್ತಿಗೆ ₹2,000 ದರ ಕಡಿತವನ್ನು ವಿವೊ ದೇಶದಲ್ಲಿ ಪ್ರಕಟಿಸಿದೆ.

ವಿವೊ X60 ಸ್ಮಾರ್ಟ್‌ಫೋನ್‌ನಲ್ಲಿ 6.56 ಇಂಚಿನ ಫುಲ್‌ಎಚ್‌ಡಿ+ ಡಿಸ್‌ಪ್ಲೇ, ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 870 ಪ್ರೊಸೆಸರ್ ಇದೆ. ಅಲ್ಲದೆ, ಹಿಂಭಾಗದಲ್ಲಿ 48 ಮೆಗಾಪಿಕ್ಸೆಲ್ ಕ್ಯಾಮರಾ ಜತೆಗೆ 13+13 ಮೆಗಾಪಿಕ್ಸೆಲ್ ಕ್ಯಾಮರಾ, 32 ಮೆಗಾಪಿಕ್ಸೆಲ್ ಸೆಲ್ಫಿ ಕೂಡ ಇದೆ. ಉಳಿದಂತೆ, 4,200mAh ಬ್ಯಾಟರಿ ಇದರ ವಿಶೇಷತೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು