ಮೆಲ್ಬರ್ನ್: ಇಷ್ಟಪಟ್ಟು ಖರೀದಿಸಿದ ಬಟ್ಟೆಯು ಮೊದಲ ಒಗೆತದಲ್ಲೇ ಕುಗ್ಗಿ ಅಳತೆಯೇ ಏರುಪೇರಾಗುವ ಸಾಧ್ಯತೆಗಳು ಹೆಚ್ಚು. ಕೆಲವೊಂದು ಬಟ್ಟೆಗಳು ಮಾತ್ರ ಹೀಗಾಗುವ ಗುಣ ಹೊಂದಿರುತ್ತವೆ. ಆದರ ಕುಗ್ಗಿದ ನಂತರವೂ ಬಟ್ಟೆಯನ್ನು ಮರಳಿ ಸಹಜ ಸ್ಥಿತಿಗೆ ತರುವ ಮಾರ್ಗೋಪಾಯಗಳನ್ನು ತಜ್ಞರು ವಿವರಿಸಿದ್ದಾರೆ.

ಕೆಲ ಬಟ್ಟೆಗಳಲ್ಲಿ ಬಳಸುವ ನಾರಿನ ಗುಣ ಲಕ್ಷಣಗಳನ್ನು ಅರಿತರೆ, ಬಟ್ಟೆಗಳು ಒಗೆತದ ನಂತರ ಕುಗ್ಗುವಿಕೆಯನ್ನು ತಪ್ಪಿಸಲು ಸಾಧ್ಯವಿದೆ. ಜತೆಗೆ ಕೆಲ ಅಪರೂಪದ ಸಂದರ್ಭಗಳಲ್ಲಷ್ಟೇ ತೊಡಲು ಮೀಸಲಿಟ್ಟ ವಸ್ತ್ರಗಳನ್ನು ಇಂಥ ಲಾಂಡ್ರಿ ಆಘಾತಗಳಿಂದ ತಪ್ಪಿಸಬಹುದಾಗಿದೆ.

ನೂಲಿನಂತೆ ಬಟ್ಟೆ...

ನೀರಿಗೆ ಹಾಕಿ ಒಗೆದ ತಕ್ಷಣ ಬಟ್ಟೆಯ ಗಾತ್ರ ಕುಗ್ಗುತ್ತದೆ ಎಂದಾದರೆ, ಆ ಬಟ್ಟೆ ತಯಾರಿಸಲು ಬಳಸಿದ ನೂಲಿನ ಲಕ್ಷಣವನ್ನು ಅರಿಯುವುದು ಮುಖ್ಯ.

ಸಾಮಾನ್ಯವಾಗಿ ವಸ್ತ್ರಗಳ ತಯಾರಿಕೆಯಲ್ಲಿ ಬಳಸಲಾಗುವ ನೂಲು, ಹತ್ತಿ ಅಥವಾ ಲಿನೆನ್ನಿಂದ ಉತ್ಪಾದಿಸಲಾಗಿರುತ್ತದೆ. ಇವುಗಳು ಸಸ್ಯಜನ್ಯ ನೂಲುಗಳು. ಈ ನೂಲುಗಳು ನೈಸರ್ಗಿಕವಾಗಿ ಸುಕ್ಕುಗಟ್ಟುವ ಗುಣವನ್ನು ಹೊಂದಿವೆ. ಅವುಗಳನ್ನು ಸೂಕ್ಷ್ಮದರ್ಶಕದಿಂದ ಗಮನಿಸಿದರೆ ಇವುಗಳಲ್ಲಿ ಲಕ್ಷಗಟ್ಟಲೆ ಅತಿ ಸೂಕ್ಷ್ಮವಾದ ಸಸ್ಯತಂತು (ಸೆಲ್ಯುಲೋಸ್) ಕಣಗಳಿದ್ದು, ಅವುಗಳು ಸುರಳಿ ಆಕಾರದಲ್ಲಿರುತ್ತವೆ.

ಜವಳಿ ಉದ್ಯಮದಲ್ಲಿ ಈ ನಾರುಗಳನ್ನು ಯಂತ್ರಗಳ ಸಹಾಯದಿಂದ ಎಳೆದು, ನೇರಗೊಳಿಸಲಾಗುತ್ತದೆ. ಹಾಗೆಯೇ ಸೆಲ್ಯುಲೋಸ್ಗಳನ್ನು ಒಗ್ಗೂಡಿಸಲಾಗುತ್ತದೆ. ಇದರಿಂದ ನಾರುಗಳು ಹೆಚ್ಚು ಮೃದು ಹಾಗೂ ಲಂಭವಾಗುತ್ತವೆ.

ರಸಾಯನ ವಿಜ್ಞಾನ ದೃಷ್ಟಿಕೋನದಿಂದ ನೋಡುವುದಾದರೆ ಜಲಜನಕ ಬಂಧಗಳು ಎಂದು ಕರೆಯಲಾಗುವ ಸರಪಳಿಗಳ ನಡುವಿನ ಕೊಂಡಿಗಳು ಈ ಪ್ರಕ್ರಿಯೆಗೆ ಕಾರಣ. ಇವುಗಳು ನಾರನ್ನು ಬಲಪಡಿಸುತ್ತವೆ ಹಾಗೂ ನಾರುಗಳನ್ನು ಒಗ್ಗೂಡಿಸಿ ದಾರವಾಗಿಸುತ್ತವೆ. ಇದರಿಂದ ಹೆಣೆಯುವುದು ಅಥವಾ ನೇಯುವ ಮೂಲಕ ವಸ್ತ್ರಗಳನ್ನು ಸಿದ್ಧಪಡಿಸಬಹುದು.

ಆದರೆ ಈ ನಾರಿಗೆ ‘ನೆನಪಿನ ಶಕ್ತಿ’ ಹೆಚ್ಚು. ಬಿಸಿಗೆ, ತಂಪಿಗೆ ಅಥವಾ ಯಾಂತ್ರಿಕ ಬಲಕ್ಕೆ ಒಳಗೊಂಡಾಗ ಸ್ವಲ್ಪ ಮೈ ಮುರಿದು ತಮ್ಮ ಮೂಲ ಗುಣಲಕ್ಷಣವಾದ ಸುರುಳಿ ಆಕಾರಕ್ಕೆ ಮರಳುತ್ತವೆ. ಹೀಗಾಗಿ ಏಕೆ ಕೆಲ ಬಟ್ಟೆಗಳು ಮಾತ್ರ ಒಗೆತ ಅಥವಾ ತೊಟ್ಟ ನಂತರ ಸುಕ್ಕಾಗುತ್ತವೆ ಎಂಬುದನ್ನು ಅರಿಯಬಹುದು. ವಾಷಿಂಗ್ ಮಷಿನ್ಗಳ ಮೂಲಕ ಬಟ್ಟೆಯನ್ನು ಒಗೆದಾಗ ಇಂಥ ನೈಸರ್ಗಿಕ ನಾರುಗಳು ಬೇಗನೆ ಸುರಳಿಯಾಗುವುದು ಮತ್ತು ಗಾತ್ರದಲ್ಲಿ ಕುಗ್ಗುವ ಗುಣಲಕ್ಷಣಗಳನ್ನು ಹೊಂದಿರುತ್ತವೆ.

ಬಟ್ಟೆ ಒಗೆಯುವುದರಿಂದ ಬಟ್ಟೆಗಳು ಹೇಗೆ ಗಾತ್ರದಲ್ಲಿ ಕುಗ್ಗುತ್ತವೆ?

ಒಗೆದ ನಂತರ ಬಟ್ಟೆಗಳು ಏಕೆ ಕುಗ್ಗುತ್ತವೆ ಎಂಬುದನ್ನು ಅರಿಯಲು ಮತ್ತೆ ಆಣ್ವಿಕ ಮಟ್ಟಕ್ಕೆ ಇಳಿದು ಅವಲೋಕಿಸುವುದು ಅಗತ್ಯ. ಬಟ್ಟೆ ಒಗೆಯುವ ಪ್ರಕ್ರಿಯೆಯಲ್ಲಿ ಬಿಸಿ ನೀರು ಬಟ್ಟೆಯಲ್ಲಿನ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಅಂದರೆ, ಹೆಚ್ಚು ವೇಗವಾಗಿ ಅಲುಗಾಡುವುದರಿಂದ ಜಲಜನಕ ಬಂಧಗಳನ್ನು ಒಡೆಯುತ್ತವೆ.

ಈ ಹಂತದಲ್ಲಿ ಬಟ್ಟೆಗಳು ನೇಯ್ಗೆಯಿಂದ ಮಾಡಿದ್ದೇ ಅಥವಾ ಹೆಣೆಯಲಾಗಿದ್ದೇ ಎಂಬುದೂ ಪ್ರಮುಖ ಪಾತ್ರ ವಹಿಸಲಿದೆ. ಸಡಿಲವಾಗಿ ಹೆಣೆದ ಬಟ್ಟೆಗಳಲ್ಲಿ ಹೆಚ್ಚು ಸ್ಥಳಾವಕಾಶ ಹಾಗೂ ಕುಣಿಕೆಗಳಿರುತ್ತವೆ. ಹೀಗಾಗಿ ಕುಗ್ಗುವ ಗುಣ ಹೆಚ್ಚು. ಬಿಗಿಯಾಗಿ ನೇಯ್ದ ಬಟ್ಟೆಗಳಲ್ಲಿ ದಾರಗಳನ್ನು ಬಂಧಿಸಲಾಗಿರುವುದರಿಂದ, ಅಷ್ಟು ನಾರುಗಳು ಅಷ್ಟು ಬೇಗ ಸುರಳಿಯಾಗಲು ಬಿಡುವುದಿಲ್ಲ.

ಮತ್ತೊಂದೆಡೆ ಸೆಲ್ಯುಲೋಸ್ಗಳಿಗೆ ನೀರೆಂದರೆ ಇಷ್ಟ. ನೀರನ್ನು ಹೀರಿಕೊಳ್ಳುವ ಗುಣ ಇದರದ್ದು. ನೀರು ಸೋಕಿದರೆ ತಕ್ಷಣವೇ ಇದು ತನ್ನ ನಾರುಗಳ ಒಳಗೆ ಎಳೆದುಕೊಳ್ಳಲಿದೆ. ನೀರು ಹೀರಿಕೊಂಡು ಬೇಗನೆ ಊದಿಕೊಳ್ಳುವ ಈ ವಸ್ತ್ರಗಳು ಚಲನಶೀಲವಾಗುತ್ತವೆ. ಬಟ್ಟೆ ಒಗೆದ ನಂತರ ಹಿಂಡುವುದು ಸಹಜ ಪ್ರಕ್ರಿಯೆ. ಈ ಎಲ್ಲದರಿಂದ ಬಟ್ಟೆಗಳಲ್ಲಿ ಬಳಸಿದ ನಾರು ಮರಳಿ ತಮ್ಮ ನೈಸರ್ಗಿಕ ಗುಣವಾದ ಸುರಳಿಯಾಕಾರ ಪಡೆದುಕೊಳ್ಳುತ್ತವೆ. ಇದರಿಂದ ಬಟ್ಟೆಗಳು ಗಾತ್ರದಲ್ಲಿ ಕುಗ್ಗುತ್ತವೆ.

ಬಿಸಿ ನೀರಿಗೆ ಮಾತ್ರವಲ್ಲ, ಎಲ್ಲಾ ತಾಪಮಾನದ ನೀರಿನಲ್ಲೂ ಹೀಗೆ... ಏಕೆ?

ಬಟ್ಟೆಗಳು ಕುಗ್ಗುವುದು ಬಿಸಿನೀರಿಗೆ ಮಾತ್ರವಲ್ಲ. ಏಕೆಂದರೆ ರಯಾನ್ ಮಾದರಿಯ ಬಟ್ಟೆಗಳನ್ನು ಗಮನಿಸಿದರೆ ಇದು ಅನುಭವಕ್ಕೆ ಬಂದಿರಬಹುದು.

ತಣ್ಣೀರು ಸಹ ನಾರಿನೊಳಗೆ ಇಳಿಯುತ್ತದೆ. ಇದರಿಂದಲೂ ಬಟ್ಟೆ ಬೇಗನೆ ಉಬ್ಬಿಕೊಳ್ಳುತ್ತವೆ. ಇದರೊಂದಿಗೆ ಯಾಂತ್ರಿಕ ಘರ್ಷಣೆಯೂ ಒಳಗೊಂಡಲ್ಲಿ ಬಟ್ಟೆಗಳು ಸುರಳಿಯಾಗಿ, ಕುಗ್ಗುತ್ತವೆ. ಆದರೆ ಇದರ ಪ್ರಮಾಣ ಬಿಸಿನೀರಿಗಿಂತ ಕಡಿಮೆ.

ಹೀಗಾಗಬಾರದೆಂದರೆ ಏನು ಮಾಡಬೇಕು

ಕುಗ್ಗುವಿಕೆಯ ಪ್ರಕ್ರಿಯೆಯನ್ನು ತಗ್ಗಿಸಬೇಕೆಂದರೆ ತಣ್ಣನೆಯ ನೀರು ಬಳಸಬೇಕು. ವಾಷಿಂಗ್ ಮಷಿನ್ಗಳಲ್ಲಿ ಕಡಿಮೆ ವೇಗದಲ್ಲಿ ಬಟ್ಟೆಯನ್ನು ತಿರುಗಿಸುವಂತೆ ಹೊಂದಿಸಬೇಕು. ಅದರಲ್ಲೂ ಹತ್ತಿ ಮತ್ತು ರಯಾನ್ ಬಟ್ಟೆಗಳನ್ನು ಒಗೆಯುವಾಗ ಹೆಚ್ಚು ಸಾವಧಾನ ವಹಿಸುವುದು ಮುಖ್ಯ. ಬಹಳಷ್ಟು ಯಂತ್ರಗಳಲ್ಲಿ ಯಾವ ಬಗೆಯ ಬಟ್ಟೆಗೆ ಎಷ್ಟು ವೇಗ ನಿಗದಿ ಮಾಡಬೇಕು ಎಂಬುದನ್ನು ನಮೂದಿಸಿರುವುದಿಲ್ಲ. ಹೀಗೆ ಗೊಂದಲ ಉಂಟಾದಲ್ಲಿ, ‘ಡೆಲಿಕೇಟ್’ ಎಂಬ ಗುಂಡಿಯನ್ನು ಒತ್ತುವುದು ಸೂಕ್ತ.

ಉಣ್ಣೆಯ ಬಟ್ಟೆಗಳಿಗೆ ಯಾವ ಕ್ರಮ ಅನುಸರಿಸುವುದು ಸೂಕ್ತ?

ಎಲ್ಲಾ ಬಟ್ಟೆಗಳಿಗೂ ಒಂದೇ ಮಾದರಿಯ ಬದಲು, ಬಗೆಬಗೆಯ ಬಟ್ಟೆಗಳಿಗೆ ವಿಭಿನ್ನ ಮಾರ್ಗೋಪಾಯಗಳನ್ನು ಅನುಸರಿಸುವುದು ಅಗತ್ಯ.

ಸೆಲ್ಯುಲೋಸ್ ಆಧಾರಿತ ಬಟ್ಟೆಗಳು ಹೇಗೆ ಕುಗ್ಗುತ್ತವೆ ಎಂಬುದನ್ನು ಮೇಲೆ ತಿಳಿದುಕೊಳ್ಳಲಾಗಿದೆ. ಆದರೆ ಉಣ್ಣೆಯು ಪ್ರಾಣಿಜನ್ಯ ಪದಾರ್ಥ. ಇದರಲ್ಲಿ ಕೆರಟಿನ್ ಪ್ರೊಟೀನ್ ಇರುತ್ತದೆ. ಇದರ ಮೇಲ್ಮೈ ಅನ್ನು ಕ್ಯೂಟಿಕಲ್ ಅಣುಗಳು ಎಂದು ಕರೆಯಲಾಗುವ ಅತಿಸೂಕ್ಷ್ಮವಾದ ಹಾಗೂ ಒಂದರ ಮೇಲೊಂದರಂತೆ ಹೊದ್ದಿರುವ ಹೊರುಪುಗಳಿರುತ್ತವೆ. ಇದೂ ಕುಗ್ಗುವ ಗುಣ ಹೊಂದಿರುತ್ತದೆ.

ಹಾಗಿದ್ದರೆ, ಸಿಂಥೆಟಿಕ್ ಬಟ್ಟೆಗಳು ಏಕೆ ಕುಗ್ಗುವುದಿಲ್ಲ?

ಸಿಂಥೆಟಿಕ್ ಬಟ್ಟೆಗಳಾದ ಪಾಲಿಸ್ಟರ್ ಅಥವಾ ನೈಲಾನ್ಗಳನ್ನು ಪೆಟ್ರೋಲಿಯಂ ಆಧಾರಿತ ಪಾಲಿಮರ್ಗಳಿಂದ ತಯಾರಿಸಲಾಗಿರುತ್ತದೆ. ಇವುಗಳನ್ನು ಸ್ಥಿರತೆ ಮತ್ತು ದೀರ್ಘ ಬಾಳಿಕೆಗೆ ತಕ್ಕಂತೆ ಸಿದ್ಧಪಡಿಸಲಾಗಿರುತ್ತದೆ. ಇವುಗಳಲ್ಲಿ ಸ್ಫಟಿಕದಂತ ಕಣಗಳಿದ್ದು, ಇವುಗಳು ಒಳಭಾಗದಲ್ಲಿ ಭದ್ರ ರಚನೆಯನ್ನು ಸಿದ್ಧಪಡಿಸುತ್ತವೆ. ಇದು ಬಟ್ಟೆಯನ್ನು ಕುಗ್ಗಿಸುವ ಅಥವಾ ಸುಕ್ಕಾಗುವ ಪ್ರಕ್ರಿಯೆಯಿಂದ ತಡೆಯುತ್ತದೆ.

ಕಡಿಮೆ ಸುಕ್ಕುಗಟ್ಟುವ ಹಾಗೂ ಕುಗ್ಗುವಿಕೆ ನಿರೋಧಕ ಬಟ್ಟೆಗಳ ವಿನ್ಯಾಸದಲ್ಲಿ ಜವಳಿ ತಜ್ಞರು ಹಾಗೂ ಎಂಜಿನಿಯರ್ಗಳು ತೊಡಗಿದ್ದಾರೆ. ಇದರಲ್ಲಿ ನೈಸರ್ಗಿಕ ಹಾಗೂ ಸಿಂಥೆಟಿಕ್ ಫೈಬರ್ಗಳನ್ನು ಬಳಸಿ ನೂಲುಗಳನ್ನು ಸಿದ್ಧಪಡಿಸುತ್ತಿದ್ದಾರೆ. ತಾಪಮಾನ ಅಥವಾ ನೀರಿಗೆ ಹಾಕಿದಾಗ ನೈಸರ್ಗಿಕ ನೂಲುಗಳು ಸುರಳಿಯಾಗುವುದು ಮತ್ತು ನೇರವಾಗಿಸಿದರೂ ಮರಳಿ ತನ್ನ ಸಹಜ ರೂಪಕ್ಕೆ ತಿರುಗುವುದನ್ನು ಬದಲಿಸುವ ಪ್ರಕ್ರಿಯೆಯಲ್ಲಿ ಹಲವು ವಿಜ್ಞಾನಿಗಳು ಕೆಲಸ ಮಾಡುತ್ತಿದ್ದಾರೆ. ಎಲಾಸ್ಟಿಕ್ ನಾರುಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಇವುಗಳು ಒಗೆದ ನಂತರವೂ ಸುರಳಿಯಾಗದೆ, ತಮ್ಮ ಮೂಲ ಸ್ವರೂಪಕ್ಕೆ ಮರಳುವ ಗುಣ ಹೊಂದಿವೆ ಎಂದು ಅಧ್ಯಯನ ವರದಿಗಳು ಹೇಳುತ್ತವೆ.

ಬಟ್ಟೆ ಕುಗ್ಗುವಿಕೆಯಿಂದ ರಕ್ಷಿಸುವುದು ಹೇಗೆ?

ನಿಮ್ಮ ನೆಚ್ಚಿನ ಉಡುಪು ಒಗೆದ ನಂತರ ಕುಗ್ಗಿದರೆ, ಈ ಸರಳ ತಂತ್ರಗಳನ್ನು ಪ್ರಯೋಗಿಸಿ.

ಉಗುರು ಬೆಚ್ಚಗಿನ ನೀರಿಗೆ ಕೂದಲಿಗೆ ಬಳಸುವ ಕಂಡೀಷನರ್ ಅಥವಾ ಬೇಬಿ ಶಾಂಪುವನ್ನು ಪ್ರತಿ ಒಂದುಲೀಟರ್ ನೀರಿಗೆ ಒಂದು ಟೇಬಲ್ ಸ್ಪೂನ್ನಂತೆ ಹಾಕಿ ಕಲಸಿ. ಅದರಲ್ಲಿ ಕುಗ್ಗಿದ ಬಟ್ಟೆಯನ್ನು ಹಾಕಿ ನೆನೆಸಿಡಿ. ನಂತರ ಬಟ್ಟೆಯನ್ನು ಹಗುರವಾಗಿ ಎಳೆಯಿರಿ. ಆಗ ನಿಮ್ಮ ನೆಚ್ಚಿನ ಬಟ್ಟೆ ಮರಳಿ ಅದೇ ರೂಪ ಹಾಗೂ ಅಳತೆಯನ್ನು ಪಡೆದುಕೊಳ್ಳಲಿದೆ. ನಂತರ ಒಣಗಿಸುವ ಹ್ಯಾಂಗರ್ಗೆ ತೂಗುಹಾಕಿ.

ಧನ ಅಯಾನ್ ಮೇಲ್ಮೈ ಸಾಂದ್ರತೆಯನ್ನು ಕಡಿಮೆ ಮಾಡುವ ಗುಣ ಈ ಕಂಡೀಷನರ್ ಅಥವಾ ಬೇಬಿ ಶಾಂಪುವಿನಲ್ಲಿರುತ್ತದೆ. ಇದು ಕುಗ್ಗಿದ ಬಟ್ಟೆಯಲ್ಲಿನ ನೂಲುಗಳ ಚಲನೆಯನ್ನು ಸುಲಭಗೊಳಿಸುತ್ತದೆ. ಹಿಂದಿನ ಸಹಜ ಸ್ಥಿತಿಗೆ ಮರಳಿ ತರುತ್ತದೆ.

ಆದರೆ ಅತಿಯಾಗಿ ಕುಗ್ಗಿದ್ದರೆ ಈ ಪ್ರಕ್ರಿಯೆ ಮೊದಲಿನ ಸ್ಥಿತಿಗೆ ಮರಳಿ ತರದು. ಆದರೆ ತುಸು ಮಟ್ಟಿಗೆ ನೆರವಾಗುತ್ತದೆ ಮತ್ತು ತೊಡಲು ಯೋಗ್ಯವಾಗುವಂತೆ ಮಾಡುವ ಸರಳ ತಂತ್ರವಾಗಿದೆ ಎಂದು ತಜ್ಞರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.