ಶುಕ್ರವಾರ, ಸೆಪ್ಟೆಂಬರ್ 17, 2021
25 °C

ಎಂಐಗೆ ಬೈ ಹೇಳಿದ ಶಿಯೋಮಿ: ಹೊಸ ಲೋಗೋ ಬ್ರ್ಯಾಂಡಿಂಗ್ ಘೋಷಣೆ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

PV FILE PHOTO

ಬೆಂಗಳೂರು: ಸ್ಮಾರ್ಟ್‌ಫೋನ್ ಕಂಪನಿ ಶಿಯೋಮಿ, ‘ಎಂಐ’ ಹೆಸರನ್ನು ಬ್ರ್ಯಾಂಡಿಂಗ್‌ನಿಂದ  ತೆಗೆದು, ಹೊಸ ಶಿಯೋಮಿ ಲೋಗೊ ಬಳಸಲು ಮುಂದಾಗಿದೆ.

‘ಎಂಐ’ ಹೆಸರಿನಲ್ಲಿ ಸ್ಮಾರ್ಟ್‌ಫೋನ್ ಮತ್ತು ಟಿವಿಗಳನ್ನು ಶಿಯೋಮಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಎಂಐ ಎನ್ನುವುದು ಪ್ರೀಮಿಯಂ ಬ್ರ್ಯಾಂಡಿಂಗ್ ಆಗಿದೆ. ಆದರೆ ಅದನ್ನು ತೆಗೆದುಹಾಕಿ, ಅದರ ಬದಲಿಗೆ ಶಿಯೋಮಿ ಹೆಸರಿನಲ್ಲಿಯೇ, ಹೊಸ ಲೋಗೊ ಮೂಲಕ ಟಿವಿ ಮತ್ತು ಸ್ಮಾರ್ಟ್‌ಫೋನ್ ಪರಿಚಯಿಸಲು ಕಂಪನಿ ಮುಂದಾಗಿದೆ.

ಶಿಯೋಮಿ, ರೆಡ್ಮಿ ಮತ್ತು ಎಂಐ ಹೆಸರಿನಲ್ಲಿ ವಿವಿಧ ಗ್ಯಾಜೆಟ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಮುಂದೆ, ರೆಡ್ಮಿ ಮತ್ತು ಶಿಯೋಮಿ ಹೆಸರಿನಲ್ಲಿಯೇ ಹೊಸ ಗ್ಯಾಜೆಟ್‌ಗಳು ಮಾರುಕಟ್ಟೆ ಪ್ರವೇಶಿಸಲಿದೆ.

ಎಂಐ ಹೆಸರಿನಲ್ಲಿ ಲಭ್ಯವಾಗುತ್ತಿದ್ದ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಸ್ಮಾರ್ಟ್ ಟಿವಿ ಮುಂದೆ ಶಿಯೋಮಿ ಹೆಸರಿನ ಹೊಸ ಲೋಗೊ ಸಹಿತ ಲಭ್ಯವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು