ಬುಧವಾರ, ಸೆಪ್ಟೆಂಬರ್ 29, 2021
20 °C

ಸ್ಮಾರ್ಟ್ ಗ್ಲಾಸ್ ಪರಿಚಯಿಸಿದ ಶಿಯೋಮಿ ರೆಡ್ಮಿ: ಫೋನ್ ಕರೆ, ಕ್ಯಾಮರಾ ಸೌಲಭ್ಯ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Xiaomi Smart Glasses

ಬೆಂಗಳೂರು: ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೆಸರು ಗಳಿಸಿರುವ ಶಿಯೋಮಿ ಕಂಪನಿ, ಹೊಸ ಸ್ಮಾರ್ಟ್ ಗ್ಲಾಸ್ ಬಿಡುಗಡೆ ಮಾಡಿದೆ.

ಫೋನ್ ಕರೆ ಮಾಡುವ ಸೌಲಭ್ಯ, ಫೋಟೊ ಕ್ಲಿಕ್ ಮಾಡುವ ಅವಕಾಶ, ನ್ಯಾವಿಗೇಷನ್ ಆಯ್ಕೆಗಳನ್ನು ಶಿಯೋಮಿ ಸ್ಮಾರ್ಟ್‌ ಗ್ಲಾಸ್ ಹೊಂದಿದೆ. ಜತೆಗೆ ಬರಹವನ್ನು ಅನುವಾದಿಸುವ ಆಯ್ಕೆ ಕೂಡ ಶಿಯೋಮಿ ಸ್ಮಾರ್ಟ್ ಗ್ಲಾಸ್‌ನಲ್ಲಿದೆ.

ನೋಡಲು ಸಾಮಾನ್ಯ ಕನ್ನಡಕದಂತೆ ಕಾಣಿಸಿದರೂ, ಇದರಲ್ಲಿ ಸೆನ್ಸರ್‌ಗಳಿದ್ದು, ವಿವಿಧ ಸ್ಮಾರ್ಟ್‌ ಫೀಚರ್‌ಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ.

ಫೇಸ್‌ಬುಕ್ ಇತ್ತೀಚೆಗೆ ಪರಿಚಯಿಸಿದ್ದ ರೇ-ಬಾನ್ ಸ್ಟೋರೀಸ್ ಸ್ಮಾರ್ಟ್‌ ಗ್ಲಾಸಸ್‌ ಮಾದರಿಯಲ್ಲಿಯೇ ಶಿಯೋಮಿ ರೆಡ್ಮಿ ಸ್ಮಾರ್ಟ್ ಗ್ಲಾಸ್ ಮಾರುಕಟ್ಟೆಯಲ್ಲಿ ದೊರೆಯಲಿದೆ.

ನೂತನ ಸ್ಮಾರ್ಟ್ ಗ್ಲಾಸ್ ಲಭ್ಯತೆ ಮತ್ತು ಬೆಲೆ ವಿವರವನ್ನು ಶಿಯೋಮಿ ಕಂಪನಿ ಬಹಿರಂಗಪಡಿಸಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು