ಬುಧವಾರ, ಜುಲೈ 6, 2022
23 °C

Xiaomi Redmi: ಶಓಮಿ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Xiaomi Redmi

ಬೆಂಗಳೂರು: ಶಓಮಿ ಕಂಪನಿ ತನ್ನ ರೆಡ್ಮಿ ನೋಟ್ ಸರಣಿಯಲ್ಲಿ ನೂತನ ಮಾದರಿಯನ್ನು ದೇಶದ ಮಾರುಕಟ್ಟೆಗೆ ಪರಿಚಯಿಸಿದೆ.

ರೆಡ್ಮಿ 11T 5G ಮಂಗಳವಾರ ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಹಿಂಬದಿಯಲ್ಲಿ ಎರಡು ಕ್ಯಾಮರಾ ವ್ಯವಸ್ಥೆ, ಪಂಚ್ ಹೋಲ್ ಡಿಸ್‌ಪ್ಲೇ, ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿದೆ.

ಬೆಲೆ ಮತ್ತು ಲಭ್ಯತೆ
ನೂತನ ರೆಡ್ಮಿ ನೋಟ್ 11T 5G ಸ್ಮಾರ್ಟ್‌ಫೋನ್, ದೇಶದಲ್ಲಿ 6 GB + 64 GB ಆರಂಭಿಕ ಮಾದರಿಗೆ ₹16,999 ದರ ಹೊಂದಿದೆ.

6 GB + 128 GB ಆವೃತ್ತಿಗೆ ₹17,999 ಮತ್ತು 8 GB + 128 GB ಮಾದರಿಗೆ ₹19,999 ಬೆಲೆ ಹೊಂದಿದೆ.

ಅಕ್ವಾಮೆರಿನ್ ಬ್ಲೂ, ಮ್ಯಾಟ್ ಬ್ಲ್ಯಾಕ್ ಮತ್ತು ಸ್ಟಾರ್‌ಡಸ್ಟ್ ವೈಟ್ ಎಂಬ ಮೂರು ಆಕರ್ಷಕ ಬಣ್ಣಗಳಲ್ಲಿ ನೂತನ ಮಾದರಿ ಡಿಸೆಂಬರ್ 7ರಿಂದ ಅಮೆಜಾನ್ ಮತ್ತು ಎಂಐ.ಹೋಮ್, ಶಓಮಿ ಆನ್‌ಲೈನ್ ಮೂಲಕ ದೊರೆಯಲಿದೆ.

6.6 ಇಂಚಿನ ಫುಲ್ ಎಚ್‌ಡಿ ಡಿಸ್‌ಪ್ಲೇ, 50+8 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮರಾ ಹಾಗೂ 16 ಮೆಗಾಪಿಕ್ಸೆಲ್ ಸೆಲ್ಫಿ ಇದರಲ್ಲಿದೆ. 5,000mAh ಬ್ಯಾಟರಿ ಬೆಂಬಲವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು