ಶವೊಮಿ ಭಾರತದಲ್ಲಿ ಮೊದಲ ಬಾರಿಗೆ 'ರೆಡ್‌ಮಿ ಸ್ಮಾರ್ಟ್ ಬ್ಯಾಂಡ್' ಬಿಡುಗಡೆ ಮಾಡಿದೆ. ಎಂಐ ಬ್ಯಾಂಡ್‌ಗಳ ರೀತಿಯಲ್ಲೇ ರೆಡ್‌ಮಿ ಬ್ಯಾಂಡ್ ಸಹ ಫಿಟ್ನೆಸ್ ಸಂಬಂಧಿತ ಹಲವು ಆಯ್ಕೆಗಳನ್ನು ಒಳಗೊಂಡಿದ್ದು, ವಿನ್ಯಾಸದಲ್ಲಿ ಬದಲಾವಣೆ ಗಮನಿಸಬಹುದು.
ಸೆಪ್ಟೆಂಬರ್ 9ರಿಂದ ಹೊಸ ಫಿಟ್ನೆಸ್ ಬ್ಯಾಂಡ್ ಖರೀದಿಗೆ ಸಿಗಲಿದ್ದು, ಬೆಲೆ ₹1,599 ನಿಗದಿಯಾಗಿದೆ.
1.08 ಇಂಚು ಎಲ್‌ಸಿಡಿ ಕಲರ್ ಡಿಸ್‌ಪ್ಲೇ ನೀಡಲಾಗಿದ್ದು, ಎಮೊಲೆಡ್ ಡಿಸ್‌ಪ್ಲೇ ಇರುವ ಎಂಐ ಬ್ಯಾಂಡ್ 4ಕ್ಕಿಂತ ದೊಡ್ಡದಾಗಿದೆ. ಡಿಸ್‌ಪ್ಲೇ ಸ್ಕ್ರೀನ್‌ನಲ್ಲಿ ಕಾಣುವ ಗಡಿಯಾರದ ವಿನ್ಯಾಸವನ್ನು 50 ರೀತಿಯಲ್ಲಿ ಬದಲಿಸಿಕೊಳ್ಳುವ ಆಯ್ಕೆಗಳಿವೆ. ಹಸಿರು, ಕಪ್ಪು, ನೀಲಿ ಹಾಗೂ ಕಿತ್ತಳೆ–ನಾಲ್ಕು ಬಣ್ಣಗಳಲ್ಲಿ ಬ್ಯಾಂಡ್ ಲಭ್ಯವಿರಲಿದೆ.
ರೆಡ್‌ಮಿ ಸ್ಮಾರ್ಟ್ ಬ್ಯಾಂಡ್ 24 ಗಂಟೆಯೂ ಹೃದಯದ ಬಡಿತ ಗಮನಿಸುತ್ತದೆ. 50 ಮೀಟರ್ ನೀರಿನ ಆಳದಲ್ಲಿ 10 ನಿಮಿಷಗಳ ವರೆಗೂ ನೀರು ಒಳನುಸುಳದಂತೆ ತಡೆಯುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ ಡೈರೆಕ್ಟ್ ಯುಎಸ್‌ಬಿ ಚಾರ್ಜಿಂಗ್ ವ್ಯವಸ್ಥೆಯಿದ್ದು, ಪವರ್ ಬ್ಯಾಂಕ್, ಲ್ಯಾಪ್‌ಟಾಪ್ ಅಥವಾ ಚಾರ್ಜಿಂಗ್ ಅಡಾಪ್ಟರ್‌ಗೆ ನೇರವಾಗಿ ಪ್ಲಗ್ ಮಾಡಿ ಚಾರ್ಜ್ ಮಾಡಬಹುದು. ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ, 14 ದಿನಗಳವರೆಗೂ ಬಳಸಬಹುದಾಗಿದೆ.
ಬ್ಲೂಟೂಥ್ 5.0 ಸಂಪರ್ಕ ವ್ಯವಸ್ಥೆ ಅಳವಡಿಸಲಾಗಿದೆ. ಆ್ಯಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳೊಂದಿಗೆ ಸಂಪರ್ಕಿಸಬಹುದಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.