ಶಿಯೋಮಿ ರೆಡ್ಮಿ ನೋಟ್ 10T ಶೀಘ್ರದಲ್ಲಿ ಅಮೆಜಾನ್ ಮೂಲಕ ಬಿಡುಗಡೆ

ಬೆಂಗಳೂರು: ಶಿಯೋಮಿ ಸ್ಮಾರ್ಟ್‌ಫೋನ್ ಸರಣಿಯ ಹೊಸ ಮಾದರಿ ದೇಶದ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದೆ.
ರೆಡ್ಮಿ ನೋಟ್ 10T ಈಗಾಗಲೇ ರಷ್ಯಾ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 700 ಪ್ರೊಸೆಸರ್, ಹಿಂಭಾಗದಲ್ಲಿ ಮೂರು ಕ್ಯಾಮರಾ ಮತ್ತು 5000mAh ಬ್ಯಾಟರಿ ಹೊಂದಿದೆ.
ಹೊಸ ಶಿಯೋಮಿ ರೆಡ್ಮಿ ಫೋನ್ ಅಮೆಜಾನ್ ಮೂಲಕ ದೇಶದಲ್ಲಿ ಲಭ್ಯವಾಗಲಿದೆ. ಅಲ್ಲದೆ, ಹೊಸ ಫೋನ್ 5G ಹೊಂದಿರುತ್ತದೆ ಎಂಬ ಸುಳಿವನ್ನು ಕೂಡ ಕಂಪನಿ ನೀಡಿದೆ.
ಆದರೆ ಹೊಸ ಫೋನ್ ಬಿಡುಗಡೆ ದಿನಾಂಕವನ್ನು ಮಾತ್ರ ಕಂಪನಿ ಇನ್ನು ಕೂಡ ಘೋಷಿಸಿಲ್ಲ.
Redmi 9 Power: ದೇಶದಲ್ಲಿ ಶಿಯೋಮಿ ಸ್ಮಾರ್ಟ್‌ಫೋನ್ ಬೆಲೆ ಇಳಿಕೆ
ರಷ್ಯಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ರೆಡ್ಮಿ 10T ಫೋನ್, 4 GB + 128 GB ಆವೃತ್ತಿಗೆ ಅಂದಾಜು ₹20,500 ದರವಿದ್ದು, ನೀಲಿ, ಹಸಿರು, ಬೂದು ಮತ್ತು ಬೆಳ್ಳಿಯ ಬಣ್ಣದಲ್ಲಿ ಲಭ್ಯವಿದೆ.
Samsung Galaxy F22: ದೇಶದ ಮಾರುಕಟ್ಟೆಗೆ ಹೊಸ ಸ್ಯಾಮ್ಸಂಗ್ ಸ್ಮಾರ್ಟ್‌ಫೋನ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.