ಬೆಂಗಳೂರು: ಗ್ಯಾಜೆಟ್ಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಒನ್ಪ್ಲಸ್ ಕಂಪನಿಯು ತನ್ನ ಬಹುನಿರೀಕ್ಷಿತ ಪ್ಯಾಡ್ ಗೊ 2 ಬಿಡುಗಡೆಗೆ ದಿನಾಂಕ ನಿಗದಿಪಡಿಸಿದ್ದು, ಡಿ. 17ರಂದು ಜಾಗತಿಕವಾಗಿ ಬಿಡುಗಡೆಯಾಗುತ್ತಿದೆ.

ಒನ್ಪ್ಲಸ್ನ 15ಆರ್ ಜತೆಯಲ್ಲೇ ಪ್ಯಾಡ್ ಗೊ2 ಕೂಡಾ ಮಾರುಕಟ್ಟೆ ಪ್ರವೇಶಿಸುತ್ತಿವೆ. ಶಾಡೋ ಬ್ಲಾಕ್ ಮತ್ತು ಲ್ಯಾವೆಂಡರ್ ಡ್ರಿಫ್ಟ್ ಎಂಬ ಬಣ್ಣಗಳ ಪ್ಯಾಡ್ ಗೊ2 ಚಿತ್ರಗಳು ಈಗಾಗಲೇ ಹೆಚ್ಚು ಹರಿದಾಡುತ್ತಿವೆ.

ಈ ಹಿಂದೆ ಬಿಡುಗಡೆಯಾಗಿದ್ದ ಒನ್ಪ್ಲಸ್ ಪ್ಯಾಡ್ ಗೋ 28.85 ಸೆಂ.ಮೀ. ಪರದೆ ಹೊಂದಿತ್ತು. 2.4ಕೆ 7:5 ಅನುಪಾತದ ರೆಡ್ಫಿಟ್ ಐ ಕೇರ್ ಎಲ್ಸಿಡಿ ಡಿಸ್ಪ್ಲೇ ಹೊಂದಿತ್ತು. ಡಾಲ್ಬಿ ಆಟಮ್ಸ್ ಕ್ವಾಡ್ ಸ್ಪೀಕರ್, 4ಜಿ ಎಲ್ಟಿಇ (ಕರೆ)+ವೈಫೈ ಸಂಪರ್ಕಕ್ಕೂ ಅವಕಾಶವಿತ್ತು. 8ಜಿಬಿ ರ್ಯಾಮ್ ಮತ್ತು 256 ಜಿಬಿ ಸ್ಟೋರೇಜ್ ಇದ್ದು, ಇದನ್ನು 1 ಟೆರಾ ಬೈಟ್ವರೆಗೆ ವಿಸ್ತರಿಸಲೂ ಅವಕಾಶವಿತ್ತು.

ಇದೀಗ ಪ್ಯಾಡ್ ಗೋ2 ಅನ್ನು ಒನ್ಪ್ಲಸ್ ಬಿಡುಗಡೆಗೊಳಿಸುತ್ತಿದೆ. ಹಾಗಿದ್ದರೆ ಇದರ ವಿಶೇಷವೇನು?

ಒನ್ಪ್ಲಸ್ ಪ್ಯಾಡ್ ಗೊ 2 ಗ್ಯಾಜೆಟ್ನಲ್ಲಿ 12.1 ಇಂಚಿನ 120 ಹರ್ಟ್ಜ್ ಎಲ್ಸಿಡಿ ಡಿಸ್ಪ್ಲೇ ಇದೆ. ಇದೂ 7:5 ಆಸ್ಪೆಕ್ಟ್ ರೇಷಿಯೊ ಮತ್ತು ಶೇ 88.5 ಡಿಸ್ಪ್ಲೇ–ಟು–ಬಾಡಿ ಅನುಪಾತ ಹೊಂದಿದೆ. ಪರದೆಯ ಪಿಕ್ಸೆಲ್ ಡೆನ್ಸಿಟಿ 284 ಪಿಪಿಐ ಇದ್ದು, ಶೇ 98ರಷ್ಟು ಡಿಸಿಐ–ಪಿ3 ಕಲರ್ ಕವರೇಜ್ ಹೊಂದಿದೆ. ಜತೆಗೆ 900 ನಿಟ್ಸ್ನಷ್ಟು ಗರಿಷ್ಠ ಬೆಳಕಿನ ಪ್ರಕರತೆ ಇದರದ್ದು. ಡಾಲ್ಬಿ ವಿಷನ್, ಟಿಯುವಿ ರೀನ್ಲ್ಯಾಂಡ್ ಇಂಟೆಲಿಜೆಂಟ್ ಐಕೇರ್ 4.0 ಮಾನ್ಯತೆಯನ್ನೂ ಪಡೆದಿದೆ.

ಈ ಟ್ಯಾಬ್ನಲ್ಲಿ ಮೀಡಿಯಾಟೆಕ್ ಡೈಮೆನ್ಸಿಟಿ 7300 ಅಲ್ಟ್ರಾ ಆಕ್ಟಾ ಕೋರ್ ಚಿಪ್ಸೆಟ್ ಅಳವಡಿಸಲಾಗಿದೆ ಎಂಬ ಸಂಗತಿ ಬಹಿರಂಗಗೊಂಡಿದೆ. ಇದಕ್ಕೆ 8 ಜಿಬಿ. ಎಲ್ಪಿಡಿಡಿಆರ್5ಎಕ್ಸ್ ರ್ಯಾಮ್ ಮತ್ತು 128ಜಿಬಿ ಅಥವಾ 256ಜಿಬಿಯ ಯುಎಫ್ಎಸ್ 3.1 ಸ್ಟೋರೇಜ್ ಇದೆ.

ಒನ್ಪ್ಲಸ್ ಪ್ಯಾಡ್ ಗೋ2 ಟ್ಯಾಬ್ಲೆಟ್ನಲ್ಲಿ 10,050 ಎಂಎಎಚ್ ಬ್ಯಾಟರಿ ನೀಡಲಾಗಿದೆ. ಇದನ್ನು ಚಾರ್ಜ್ ಮಾಡಲು 33 ವಾಟ್ ಸೂಪರ್ವೂಕ್ ವೈರ್ ಚಾರ್ಜಿಂಗ್ ಸೌಕರ್ಯವೂ ಇರಲಿದೆ. ಒಂದು ಬಾರಿಯ ಗರಿಷ್ಠ ಚಾರ್ಜ್ ಮೂಲಕ 15 ಗಂಟೆಗಳ ವಿಡಿಯೊ ನೋಡಬಹುದು. 60 ದಿನಗಳ ಸ್ಟಾಂಡ್ಬೈ ಸಾಧ್ಯ. ಇಷ್ಟು ಮಾತ್ರವಲ್ಲ ಗೋ2ನಲ್ಲಿ ರಿವರ್ಸ್ ಚಾರ್ಜಿಂಗ್ಗೂ ಅವಕಾಶವಿದೆ. ಅಂದರೆ ಇತರ ಗ್ಯಾಜೆಟ್ಗಳಿಗೆ ಚಾರ್ಜ್ ಬೇಕಾದಾಗ, ಇದರ ಬ್ಯಾಟರಿ ಪವರ್ ಬ್ಯಾಂಕ್ ರೀತಿಯಲ್ಲಿ ಕೆಲಸ ಮಾಡಲಿದೆ. ಆದರೆ ಇದರ ವೇಗ ಎಷ್ಟು ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ಪ್ಯಾಡ್ ಗೋ2 ಸ್ಟೈಲೊ ಕೂಡಾ ಹೊಂದಿದೆ. ಇದರಲ್ಲೂ ಫಾಸ್ಟ್ ಚಾರ್ಜಿಂಗ್ ಮತ್ತು 10 ನಿಮಿಷಗಳ ಚಾರ್ಜ್ನಲ್ಲಿ ಅರ್ಧ ದಿನ ಬಳಸುವಂತೆ ವಿನ್ಯಾಸಗೊಳಿಸಲಾಗಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ಬಿಡುಗಡೆಯಾಗಬೇಕಿರುವ ಈ ಟ್ಯಾಬ್ಲೆಟ್ ‘ಓಪನ್ ಕ್ಯಾನ್ವಾಸ್’ ಬೆಂಬಲಿಸುತ್ತದೆ. ಪರದೆಯನ್ನು ಎರಡು ಉದ್ದೇಶಗಳಿಗೆ ಏಕಕಾಲಕ್ಕೆ ಬಳಸುವಂತೆ ಶಕ್ತಿಶಾಲಿಯಾಗಿದೆ. ಇದು 5ಜಿ ಅನ್ನೂ ಬೆಂಬಲಿಸಲಿದೆ ಎಂದೆನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.