ಚಾಲಕನಿಲ್ಲದ, ಪ್ರಯಾಣಿಕರು ಮಾತ್ರವೇ ಡ್ರೈವರ್ ಅಸಿಸ್ಟೆನ್ಸ್ ಟೆಕ್ನಾಲಜಿಯನ್ನು ಬಳಸಿಕೊಂಡು ಪ್ರಯಾಣಿಸಬಹುದಾದ ವಾಹನಗಳ ಬಗ್ಗೆ ಇತ್ತೀಚೆಗೆ ನೀವೆಲ್ಲ ಕೇಳಿರುತ್ತೀರಿ. ಈ ಚಾಲಕರಹಿತ ವಾಹನಗಳನ್ನು ‘ಸ್ವಾಯತ್ತ ವಾಹನಗಳು’ ಎಂದೂ ಕರೆಯಲಾಗುತ್ತದೆ. ಇಂತಹ ವಾಹನಗಳು ಜಿಪಿಎಸ್, ಕ್ಯಾಮೆರಾ, ರೆಡಾರ್ (ರೇಡಿಯೋ ಡಿಟೆಕ್ಷನ್ ಅಂಡ್ ರೇಂಜಿಂಗ್), ಲಿಡಾರ್ (ಲೈಟ್ ಡಿಟೆಕ್ಷನ್ ಅಂಡ್ ರೇಂಜಿಂಗ್) ತಂತ್ರಜ್ಞಾನಗಳನ್ನು ಬಳಸಿಕೊಂಡು ಕಾರ್ಯ ನಿವರ್ಹಿಸುತ್ತವೆ.

ಅಬ್ಬಾ! ಎಂಥ ಅದ್ಭುತ ತಂತ್ರಜ್ಞಾನ – ಎಂದೆನಿಸಿದರೂ ಮರುಕ್ಷಣವೇ ಸಣ್ಣದೊಂದು ಭಯವೂ ನಮ್ಮನ್ನು ಕಾಡುತ್ತದೆ. ಈ ತಂತ್ರಜ್ಞಾನ ದಾರಿಯಲ್ಲಿ ಕೈಕೊಟ್ಟುಬಿಟ್ಟರೆ? ಇಂತಹ ವಾಹನಗಳು ಸಂಚಾರ ದಟ್ಟಣೆಯನ್ನು ನಿವರ್ಹಿಸಬಲ್ಲವೇ? ಜನಸಂದಣಿ ಇರುವಲ್ಲಿ ಘರ್ಷಣೆ ಮಾಡಿಕೊಳ್ಳದೆ ಹೇಗೆ ಚಲಿಸಬಲ್ಲವು? ಯಾರಾದರೂ ಅಡ್ಡ ಬಂದರೆ ಅದನ್ನು ಗ್ರಹಿಸಬಲ್ಲವೆ? ಇಷ್ಟೆಲ್ಲ ಗೊಂದಲಗಳಿರುವ ನಮ್ಮನ್ನು ಇವು ತಲುಪಬೇಕಿರುವ ಜಾಗಕ್ಕೆ ಹೇಗೆ ತಲುಪಿಸಬಲ್ಲವು? ಇಂಥ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕುತ್ತವೆ. ಕೃತಕ ಬುದ್ದಿಮತ್ತೆಯಾಧಾರಿತ ತಂತ್ರಜ್ಞಾನಗಳಿಗೆ ಈಗ ಸಾಮಾಜಿಕ ಅರಿವನ್ನೂ ಕಲಿಸಲಾಗಿದೆ. ಇಂತಹ ಸಾಮಾಜಿಕವಾಗಿ ಅರಿವಿರುವ ಕೃತಕ ಬುದ್ದಿಮತ್ತೆಯು, ಈಗ ಚಾಲಕರಹಿತ ವಾಹನಗಳಿಗೆ ಯಾವುದೇ ಘರ್ಷಣೆ ಮಾಡಿಕೊಳ್ಳದಂತೆ ಜನಸಂದಣಿ ಹಾಗೂ ವಾಹನದಟ್ಟಣೆಯನ್ನು ನಿರ್ವಹಿಸಿಕೊಂಡು ಚಲಿಸುವಲ್ಲಿ ನೆರವಾಗುತ್ತಿವೆಯಂತೆ!

ಈ ಸ್ವಾಯತ್ತ ವಾಹನಗಳು ಅಚ್ಚುಕಟ್ಟಾಗಿ ಕೆಲಸ ಮಾಡುವುದು ಖಚಿತವಾಗಿದ್ದರೂ ಕೆಲವೇ ದೇಶಗಳಲ್ಲಿ ಮಾತ್ರವೇ ರಸ್ತೆಗಿಳಿದಿವೆ. ಆಯಾ ದೇಶಗಳ ಎಲ್ಲ ರೀತಿಯ ವಾತಾವರಣಗಳನ್ನೂ ಪರಿಗಣಿಸಿ, ಜನರಿಗೂ ಇವುಗಳ ಬಗ್ಗೆ ವಿಶ್ವಾಸ ಹಾಗೂ ಅರಿವು ಮೂಡಿಸಿ, ನಂತರವೇ ಇವನ್ನು ಕಾರ್ಯರೂಪಕ್ಕೆ ತರಬೇಕಿದೆ. ಈ ವಾಹನಗಳು ಅಸುರಕ್ಷಿತವೆನಿಸಿದರೆ ಜನರ ವಿಶ್ವಾಸ ಗಳಿಸುವುದರಲ್ಲಿ ಸೋಲಬಹುದು. ಇವು ಪಾದಾಚಾರಿಗಳು ಯಾವಾಗ ನಿಧಾನಿಸಬಹುದು ಅಥವಾ ವೇಗವಾಗಿ ಚಲಿಸಬಹುದು ಅಥವಾ ಅವರ ಮಾರ್ಗಗಳನ್ನು ಹೇಗೆ ಬದಲಾಯಿಸಬಹುದು ಎಂಬುದರ ಬಗ್ಗೆ ಕ್ಷಣಮಾತ್ರದಲ್ಲಿ ನಿರ್ಧಾರ ತೆಗೆದುಕೊಳ್ಳುವಂತಿರಬೇಕು. ಇವೆಲ್ಲ ಅಡಚಣೆಗಳನ್ನು ಮೀರಿಯೂ ಸ್ವಾಯತ್ತ ವಾಹನಗಳು ನೈಜ ಸಮಯದ ಅವಶ್ಯಕತೆಗಳನ್ನು ಪೂರೈಸಬಲ್ಲವು ಎನ್ನುವುದನ್ನು ಚೀನೀ ವಿಜ್ಞಾನಿಗಳು ತೋರಿಸಿದ್ದಾರೆ.

ಹೌದು. ಚೀನಾದ ಟಾಂಜ್ಷಿ ವಿಶ್ವವಿದ್ಯಾನಿಲಯ ಮತ್ತು ಶಾಂಘೈ ಜಿಯಾವೊ ಟಾಂಗ್ ವಿಶ್ವವಿದ್ಯಾನಿಲಯಗಳು ಜೊತೆಗೂಡಿ ಇಂಥದೊಂದು ಅಧ್ಯಯನವನ್ನು ಮಾಡಿದ್ದಾರೆ. ಚಾಲಕರಹಿತ ವಾಹನಗಳು ರಸ್ತೆಯಲ್ಲಿ ಚಲಿಸಬೇಕಾದರೆ, ಅವು ಪಾದಾಚಾರಿಗಳು ಹಾಗೂ ಇತರೆ ವಾಹನಗಳು ಚಲಿಸಬಹುದಾದ ಎಲ್ಲಾ ರೀತಿಗಳನ್ನೂ ಮುಂದಾಲೋಚಿಸುವುದು ಅತ್ಯವಶ್ಯಕ. ಈ ಸ್ವಾಯತ್ತ ವಾಹನಗಳು ಸುರಕ್ಷಿತವಾಗಿ ಚಲಿಸಬಲ್ಲಂತಹ, ಸಾಮಾಜಿಕ ಅರಿವನ್ನು ಪಡೆದಿರುವ ನಿರೀಕ್ಷೆಯಿಂದ ನಿಯಂತ್ರಣ (ಪ್ರೆಡಿಕ್ಷನ್ ಟು ಕಂಟ್ರೋಲ್) ಎನ್ನುವ ವ್ಯವಸ್ಥೆಯೊಂದನ್ನು ಚೀನಾದ ಜಿಹಾನ್ ಜಿಯಾಂಗ್ ಮತ್ತು ಸಂಗಡಿಗರು ರೂಪಿಸಿದ್ದಾರೆ. ಇಲ್ಲಿ ‘ಜನರೇಟಿವ್ ಅಡ್ವರ್ಸೇರಿಯಲ್ ನೆಟ್ವರ್ಕ್’ (ಜಿಎಎನ್), ‘ಟ್ರ್ಯಾಜೆಕ್ಟರಿ ಪ್ರೆಡಿಕ್ಟರ್’ ಮತ್ತು ‘ಮಾಡೆಲ್ ಪ್ರೆಡಿಕ್ಟಿವ್ ಕಂಟ್ರೋಲ್’ (ಎಂಪಿಸಿ) ಪ್ಲಾನರ್ ವ್ಯವಸ್ಥೆಗಳನ್ನು ಎಐನೊಂದಿಗೆ ಮಿಳಿತಗೊಳಿಸಲಾಗಿದೆ.

ಜಿಎಎನ್ ಟ್ರ್ಯಾಜೆಕ್ಟರಿ ಪ್ರೆಡಿಕ್ಟರ್ ಹಾಗೂ ಎಂಪಿಸಿ ಪ್ಲಾನರುಗಳು ಯಾವುದೇ ವಾಹನ, ವ್ಯಕ್ತಿ ಅಥವಾ ಡ್ರೋನ್ಗಳು ಚಲಿಸಬಹುದಾದ ಮಾರ್ಗಗಳನ್ನು, ಅವುಗಳ ಹಿಂದಿನ ಚಲನವಲನಗಳನ್ನು ಅಧ್ಯಯನ ಮಾಡಿಕೊಂಡು, ಪ್ರಸ್ತುತ ಚಾಲನೆಗೆ, ವಾಸ್ತವಿಕ, ಬಹುಮುಖ ಮತ್ತು ಸಾಮಾಜಿಕವಾಗಿ ಹೊಂದಿಕೊಳ್ಳಬಹುದಾದ ಮಾರ್ಗಗಳನ್ನು ಸೂಚಿಸುವ ತಂತ್ರಜ್ಞಾನಗಳಾಗಿವೆ. ಇವರೆಡರ ಸಂಯೋಜನೆಯು ‘ಸುಗಮ ಚಾಲನೆ’ ಹಾಗೂ ‘ಶೂನ್ಯ ಸುರಕ್ಷಾ ಉಲ್ಲಂಘನೆ’ (ಝೀರೋ ಸೇಫ್ಟಿ ವಯಲೇಷನ್ಸ್) ಅನ್ನು ಖಾತರಿಪಡಿಸುತ್ತದೆ. ಅರ್ಥಾತ್, ಯಾವುದೇ ನಿಯಮಗಳನ್ನು ಉಲ್ಲಂಘಿಸದೆ ಪ್ರಯಾಣಿಕರು ಹಾಗೂ ವಾಹನದ ಸುರಕ್ಷತೆಯನ್ನು ಕಾಪಾಡಬಲ್ಲದಂತೆ. ಅಲ್ಲದೇ, ಜನಸಂದಣಿಯಿರುವ ನಗರದ ವಾತಾವರಣದಲ್ಲಿಯೂ ಘರ್ಷಣೆಗಳಾಗದಂತೆ ಎಚ್ಚರ ವಹಿಸಬಲ್ಲದಂತೆ.

‘ಟ್ರೆಡಿಷನಲ್ ಮೋಷನ್ ಪ್ಲಾನರ್’(ಆಲ್ಗಾರಿದಮ್ ಉಪಯೋಗಿಸಿ ರೋಬೋಟ್ಗಳಿಗೆ ಘರ್ಷಣಾರಹಿತ ರಸ್ತೆಗಳನ್ನು ತಿಳಿಸುವ ಮಾದರಿ)ಗಳು, ಪಾದಾಚಾರಿಗಳು ಯಾವಾಗಲೂ ಸುಲಭ ಹಾಗೂ ನಿರೀಕ್ಷಿಸಿದಂತೆಯೇ ವರ್ತಿಸುತ್ತಾರೆ ಎಂದು ಅಂದಾಜಿಸುತ್ತವೆ. ಆದರೆ ವಾಸ್ತವಿಕವಾಗಿ ಅದು ನಿಜವಲ್ಲ. ಒಮ್ಮೊಮ್ಮೆ ಜಾಗಕ್ಕಾಗಿ ಪರದಾಡುವುದು, ಇದ್ದಕ್ಕಿದ್ದಂತೆ ಜನ ಒಂದೆಡೆ ಸೇರುವುದು ಅಥವಾ ಗುಂಪುಗಳಾಗಿಬಿಡುವುದು, ಅಥವಾ ತಕ್ಷಣವೇ ನಿಂತು ತಮ್ಮ ಫೋನುಗಳನ್ನು ನೋಡುವುದು – ಹೀಗೆ ಏನಾದರೂ ಮಾಡುತ್ತಿರುತ್ತಾರೆ. ಇದು ಬಹಳ ಅನಿಶ್ಚಿತ. ಆದರೆ ಇಂತಹ ವಾಹನಗಳಲ್ಲಿ ಕೆಲಸ ನಿರ್ವಹಿಸುವ ಕಂಪ್ಯೂಟರುಗಳಿಗೆ ಇವನ್ನು ಅಂದಾಜಿಸಲು ಸುಲಭವಾಗಿಸುವ ಸಲುವಾಗಿ, ಸದ್ಯ ಇರುವ ವ್ಯವಸ್ಥೆಗಳು ಇಂತಹ ಅನಿಶ್ಚಿತತೆಗಳನ್ನು ಸರಾಸರಿ ತೆಗೆದು ಒಂದು ವರದಿಯನ್ನು ನೀಡುತ್ತವೆ; ಕೆಟ್ಟದಾದ ಪ್ರಕರಣವೊಂದನ್ನು ಸರಾಸರಿಗೊಳಿಸಿ ಪೂರ್ವಸಿದ್ದತೆಗೆ ವಾಹನವನ್ನು ಜಾಗೃತವಾಗಿರುವಂತೆ ಅನುವು ಮಾಡಿಕೊಡುತ್ತದೆ. ಈ ವಿಧಾನವು ಅಂದಾಜು ಪ್ರಕ್ರಿಯೆಗಳನ್ನು ಸುಲಭವಾಗಿಸಿದರೂ, ಮತ್ತೊಂದೆಡೆ ವಾಹನವನ್ನು ವಿಪರೀತವಾಗಿ ಎಚ್ಚರ ವಹಿಸುವಂತೆ ಮಾಡುತ್ತದೆ. ಆಗ ವಾಹನವು ಆಗಾಗ್ಗೆ ನಿಲ್ಲುವಂತಾಗಬಹುದು ಅಥವಾ ಈ ಸರಾಸರಿಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ವಾಹನ ಅತಿವಿಶ್ವಾಸ ತೋರಬಹುದು. ಅದು ಮಾರಕ ಪರಿಣಾಮಕ್ಕೆ ಎಡೆಮಾಡಿಕೊಡಬಹುದು.

ಆದರೆ ಹೊಸದಾಗಿ ರೂಪಿಸಿರುವ ಯೋಜನೆಯು ಕಲಿಕಾಧಾರಿತ ಅಂದಾಜು ಮತ್ತು ಸುಧಾರಿತ ನಿಯಂತ್ರಣ, ಎನ್ನುವೆರೆಡರ ನಡುವೆ ಕೆಲಸ ಮಾಡುತ್ತದೆ. ಮೊದಲನೆಯದಾಗಿ ಅಂದಾಜು ಮಾಡುವಾಗ, ಸಾಮಾಜಿಕ ಜಿಎಎನ್ ಮಾದರಿಯು ಪಾದಾಚಾರಿಗಳ ಚಲನವಲನಗಳ ಕಿರುದತ್ತಾಂಶವನ್ನು ತೆಗೆದುಕೊಂಡು, ರಸ್ತೆಯಲ್ಲಿರುವ ಪ್ರತಿ ವ್ಯಕ್ತಿಗೂ ಸಾಮಾಜಿಕವಾಗಿ ಸ್ಥಿರವೆನಿಸುವ, ಅವರು ಚಲಿಸಬಹುದಾದೆಲ್ಲ ಮುಂದಿನ ಮಾರ್ಗಗಳನ್ನು ನೀಡುತ್ತದೆ. ನೇರವಾಗಿ ಹೋಗುವವರು, ನಿಧಾನಕ್ಕೆ ಚಲಿಸುವವರು ಅಥವಾ ನಿಂತು ಇತರರಿಗೆ ದಾರಿ ನೀಡಿ ನಂತರ ಹೊರಡುವವರು – ಹೀಗೆ ಎಲ್ಲ ಸಾಧ್ಯತೆಗಳನ್ನೂ ಅಚ್ಚುಕಟ್ಟಾಗಿ ತಿಳಿಸುತ್ತದೆ. ಎರಡನೆಯದಾಗಿ ನಿಯಂತ್ರಣ ಕಾರ್ಯದಲ್ಲಿ, ಎಂಪಿಸಿ ಪ್ಲಾನರು, ಭೌತಿಕ ಮಿತಿ ಹಾಗೂ ನಿರ್ಬಂಧಗಳನ್ನು ಗಮನದಲ್ಲಿರಿಸಿಕೊಂಡು, ಮುಂದೆ ವಾಹನ ತಿರುಗಿಸುವ ಸ್ಟಿಯರಿಂಗ್ ದಿಕ್ಕು ಹಾಗೂ ವೇಗವರ್ಧಕದ ಸೂಚನೆಗಳೆಲ್ಲವನ್ನೂ ಅಂದಾಜಿಸುತ್ತದೆ. ಈ ಯೋಜನೆಯ ವಿಶೇಷತೆಯಿರುವುದು, ನಿರತವಾಗಿ ಬದಲಾಗುತ್ತಿರುವ ಸಾಮಾಜಿಕ ಜಿಎಎನ್ ಟ್ರ್ಯಾಜೆಕ್ಟರಿ ಅಥವಾ ಮಾರ್ಗಕ್ಕೆ ಅನುಸಾರವಾಗಿ ತನ್ನದೇ ಅತ್ಯುತ್ತಮ ದಾರಿಯನ್ನು ಕಂಡುಕೊಳ್ಳುವಲ್ಲಿ ಸೂಕ್ಷ್ಮವಾಗಿರುವುದು. ಇನ್ನೂ ಸುಲಭವಾಗಿ ಹೇಳುವುದಾದರೆ, ‘ಪ್ರೆಡಿಕ್ಟರ್, ಪ್ರತಿ ಪಾದಾಚಾರಿಗಳಿಗೂ ಸಾಮಾಜಿಕವಾಗಿ ಸಾಧ್ಯವಿರುವ ಅನೇಕ ಚಲನೆಗಳನ್ನು ಅಂದಾಜಿಸಿದರೆ, ಕಂಟ್ರೋಲರ್ ಅವುಗಳೆಲ್ಲದರಲ್ಲಿ ಅತ್ಯುತ್ತಮ ಹಾಗೂ ಸುರಕ್ಷಿತ ದಾರಿಯನ್ನು ಆಯ್ಕೆ ಮಾಡಿಕೊಡುತ್ತದೆ’.

ಪಾದಾಚಾರಿಗಳು ಚಲನವಲನಗಳನ್ನು ಅಂದಾಜಿಸುವ ದತ್ತಾಂಶಗಳ ಮಾನದಂಡಗಳೊಂದಿಗೆ ಪರೀಕ್ಷಿಸಿ ಹೋಲಿಸಿಯೂ ನೋಡಲಾಗಿದೆ. ಫಲಿತಾಂಶವೂ ಅತ್ಯುತ್ತಮವಾಗಿದ್ದುದನ್ನು ಖಚಿತಪಡಿಸಿಕೊಂಡ ನಂತರ, ಅತಿ ಹೆಚ್ಚಿನ ಮಟ್ಟದ ಜನಸಂಚಾರವಿರುವೆಡೆ ಪಾದಾಚಾರಿಯ ಜಾಗಕ್ಕೆ ಒಂದು ರೋಬೋಟನ್ನಿರಿಸಿ ಒಂದು ವೇಳೆ ಆ ಪಾದಾಚಾರಿ ತುಂಬಾ ಹತ್ತಿರಕ್ಕೆ ಸಮೀಪಿಸಿದಾಗ, ಈ ವ್ಯವಸ್ಥೆ ಹೇಗೆ ಕೆಲಸ ಮಾಡಬಹುದು ಎಂದು ಎರಡು ವ್ಯವಸ್ಥೆಗಳನ್ನು ಹೋಲಿಕೆ ಮಾಡಿದ್ದಾರೆ.

ಸುರಕ್ಷತೆ ವಿಚಾರದಲ್ಲಿ ಎರಡೂ ವಿಧಾನಗಳೂ ಒಂದೇ ಆಗಿದ್ದರೂ, ಜಿಎಎನ್ + ಎಂಪಿಸಿ ಕಂಟ್ರೋಲರ್ ಮಾತ್ರ ಸುರಕ್ಷತಾ ನಿಯಮವನ್ನು ಉಲ್ಲಂಘಿಸದೆ, ಹತ್ತಿರದ ಪಾದಾಚಾರಿಯೊಂದಿಗೆ ಸರಾಸರಿ 0.94 ಮೀಟರುಗಳ ಅಂತರವನ್ನು ಕಾಯ್ದುಕೊಂಡಿದ್ದು, ವೇಗ ಹಾಗೂ ಪೂರ್ವಭಾವಿಯಾಗಿ ಹೊಂದಾಣಿಕೆಗಳನ್ನು ಮಾಡಿಕೊಳ್ಳಬಲ್ಲದಂತೆ. ಎಮರ್ಜೆನ್ಸಿ ಸ್ಟಾಪ್ ವಿಧಾನದಲ್ಲಿ ಇಷ್ಟು ಅಂತರ ಕಾಯ್ದುಕೊಳ್ಳುವುದೂ ಕಷ್ಟವಾಗಿತ್ತು ಎನ್ನುತ್ತಾರೆ ಸಂಶೋಧಕರು. ಒಟ್ಟಾರೆ, ಕೇವಲ ೦.೮ 0.8 ಸೆಕೆಂಡುಗಳಷ್ಟು ನಿಧಾನವಾಗುವುದನ್ನು ಹೊರತುಪಡಿಸಿದರೆ, ಚಾಲಕರಹಿತ ವಾಹನದಲ್ಲಿ ಪ್ರಯಾಣ ಸುರಕ್ಷಿತವಾಗಿರುತ್ತದೆ. ಅರ್ಥಾತ್, ಇವರ ಅಧ್ಯಯನಗಳ ಪ್ರಕಾರ ಎಲ್ಲಾ ಅಂಕಿಗಳೂ ಒಪ್ಪಿತ ಮಿತಿಯೊಳಗೇ ಇದ್ದು, ಪ್ರಯಾಣಿಕರು ಸ್ವಾಯತ್ತ ವಾಹನಗಳ ಕುಶಲತೆಯನ್ನು ಆಕ್ರಮಣಕಾರಿ ಎನ್ನದೆ, ವಿಶ್ವಾಸವಿಟ್ಟು ಒಪ್ಪಿಕೊಳ್ಳುತ್ತಾರೆ ಎನ್ನಬಹುದು. ಈಗ ನಾವು ನಡೆಸುತ್ತಿರುವ ವಾಹನಗಳಷ್ಟೇ ಈ ಸ್ವಾಯತ್ತ ವಾಹನಗಳೂ ಸುರಕ್ಷಿತವಾಗಿವೆ ಎನ್ನುವುದು ಸಂಶೋಧಕರ ವಿಶ್ವಾಸ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.