ಬುಧವಾರ, ನವೆಂಬರ್ 30, 2022
16 °C

ಚಂದ್ರನ ಮೇಲ್ಮೈ ಮೇಲೆ ಸೌರ ಪ್ರೋಟಾನ್‌ ಕಣ ಪತ್ತೆಹಚ್ಚಿದ ಚಂದ್ರಯಾನ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಚಂದ್ರನ ಕಕ್ಷೆಯಲ್ಲಿ ಪರಿಭ್ರಮಣ ನಡೆಸುತ್ತಿರುವ ಚಂದ್ರಯಾನ–2 ರ ಲಾರ್ಜ್‌ ಏರಿಯಾ ಸ್ಪೆಕ್ಟೋಮೀಟರ್‌ ಉಪಕರಣವು ಚಂದ್ರನ ಮೇಲ್ಮೈ ಮೇಲೆ ಸೌರ ಧನವಿದ್ಯುತ್‌ ಕಣಗಳನ್ನು (ಸೋಲಾರ್‌ ಪ್ರೋಟಾನ್‌) ಪತ್ತೆ ಹಚ್ಚಿದೆ.

ವಿಶೇಷವೆಂದರೆ, ಈ ಸೌರ ಧನವಿದ್ಯುತ್‌ ಕಣಗಳ ಸೂಸುವ ವಿಕಿರಣಗಳು ಬಾಹ್ಯಾಕಾಶದಲ್ಲಿ ಮಾನವರ ಮೇಲೆ ಹೆಚ್ಚಿನ ಪ್ರಭಾವ ಉಂಟು ಮಾಡುತ್ತವೆ ಎಂದು ಇಸ್ರೊ ಹೇಳಿದೆ.

ಜನವರಿ 18 ರಂದು ಸೌರ ಜ್ವಾಲೆಯ ಹೊರ ಸೂಸುವಿಕೆಯನ್ನು ಈ ಸಾಧನವು ದಾಖಲು ಮಾಡಿತ್ತು. ಸೂರ್ಯನಲ್ಲಿ ಪ್ಲಾಸ್ಮಾ ಮತ್ತು ಅಯಸ್ಕಾಂತೀಯ ಕ್ಷೇತ್ರ ಸ್ಫೋಟವಾಗಿತ್ತು. ಇದಾದ ಕೆಲವು ದಿನಗಳಲ್ಲಿ ಅಯಾನೀಕೃತ ಕಣಗಳು ಮತ್ತು ಅಯಸ್ಕಾಂತೀಯ ಕ್ಷೇತ್ರದ ಪ್ರವಾಹ ಭೂಮಿಯನ್ನು ತಲುಪಿತು. ಇದರಿಂದಾಗಿ, ಭೂಅಯಸ್ಕಾಂತಿಯ ಮಾರುತ ಮತ್ತು ಭೂಧ್ರುವದ ಆಕಾಶದಲ್ಲಿ ಬೆಳಕಿನ ಪ್ರಭೆ ಕಾಣಿಸಿಕೊಂಡಿತ್ತು ಎಂದೂ ಹೇಳಿದೆ.

ಈ ವಿದ್ಯಮಾನದಿಂದ ವಿವಿಧ ತಾರಾ ಮಂಡಲಗಳ ವ್ಯವಸ್ಥೆಗಳ ಮೇಲೆ ಆಗುವ ಪರಿಣಾಮವನ್ನು ಬಹುವಿಧದ ಅವಲೋಕನದ ಮೂಲಕ ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಸೂರ್ಯ ಹೆಚ್ಚು ಕ್ರಿಯಾಶೀಲವಾಗಿದ್ದಾಗ ಸೌರ ಜ್ವಾಲೆಗಳು ಹೊಮ್ಮುತ್ತವೆ, ಕೆಲವು ಬಾರಿ ವಿದ್ಯುದ್ದಾವೇಶಗೊಂಡ ಕಣಗಳನ್ನು ಅಂತರ್‌ಗ್ರಹಗಳ ಮಧ್ಯೆ ಇರುವ ಬಾಹ್ಯಾಕಾಶಕ್ಕೆ ಹೊಮ್ಮಿಸುತ್ತದೆ. ಇದನ್ನು ಸೋಲಾರ್ ಪ್ರೋಟಾನ್‌ ವಿದ್ಯಮಾನ ಎನ್ನಲಾಗುತ್ತದೆ ಎಂದು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು