ಗುರುವಾರ , ಮೇ 26, 2022
23 °C
ಡಿ.12ರಂದು ಭೂಮಿಗೆ ಸಮೀಪಿಸಲಿರುವ ಲಿಯೋನಾರ್ಡ್

35 ಸಾವಿರ ವರ್ಷಗಳ ನಂತರ ಭೂಮಿಗೆ ಸಮೀಪಿಸುತ್ತಿದೆ ಲಿಯೋನಾರ್ಡ್ ಧೂಮಕೇತು

ಎಚ್.ಎಸ್.ಟಿ. ಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಲಿಯೋನಾರ್ಡ್ ಧೂಮಕೇತು ಡಿ.12ರಂದು ಭೂಮಿಗೆ ಸಮೀಪಿಸುತ್ತಿದೆ. ಜನವರಿಯಲ್ಲಿ ಈ ಧೂಮಕೇತು ಪತ್ತೆಯಾಗಿದ್ದು, ಇದನ್ನು ಸಿ/2021/ಎ1 ಎಂದು ಕರೆಯಲಾಗುತ್ತಿದೆ.

ಈ ತಿಂಗಳು ಪ್ರತಿದಿನ ಮಧ್ಯರಾತ್ರಿಯಿಂದ ಬೆಳಗಿನವರೆಗೆ ಆಕಾಶದಲ್ಲಿ ಧೂಮಕೇತು ಕಾಣಿಸಿಕೊಳ್ಳಲಿದೆ. ತಿಂಗಳ ಕೊನೆಯಲ್ಲಿ ಧೂಮಕೇತು ತುಂಬಾ ಪ್ರಕಾಶಮಾನವಾಗಿರುವುದರಿಂದ ಬರಿಗಣ್ಣಿಗೆ ಗೋಚರಿಸಲಿದೆ. ಪ್ರಸಿದ್ಧ ಖಗೋಳವಿಜ್ಞಾನಿ ಗ್ರೆಗೊರಿ ಜೆ. ಲಿಯೋನಾರ್ಡ್ ಈ ಧೂಮಕೇತುವನ್ನು ಕಂಡುಹಿಡಿದಿದ್ದಾರೆ.

ಈ ಧೂಮಕೇತು ಸುಮಾರು 35 ಸಾವಿರ ವರ್ಷಗಳ ನಂತರ ಭೂಮಿಯ ಸಮೀಪ ಬರುತ್ತಿದೆ. ಇದು 523 ಶತಕೋಟಿ ಕಿ.ಮೀ. ದೂರದಲ್ಲಿ ಇರಲಿದೆ. ಖಗೋಳವಿಜ್ಞಾನದ ಪ್ರಕಾರ ಅತಿ ಪ್ರಕಾಶಮಾನವಾದ ಲಿಯೋನಾರ್ಡ್ ಧೂಮಕೇತುವನ್ನು ಪ್ರತಿಯೊಬ್ಬರೂ ಬರಿಗಣ್ಣಿನಲ್ಲಿ ನೋಡಿ ಆನಂದಿಸಬಹುದಾಗಿದೆ.

ಡಿ.12ರಂದು ಇದು ಭೂಮಿಗೆ ತುಂಬಾ ಸಮೀಪದಲ್ಲಿ ಹಾದುಹೋಗಲಿದೆ. ಎರಡು ವಾರಗಳ ಮೊದಲು ಇದು ಸೂರ್ಯನಿಗೆ ಅತಿ ಸಮೀಪ ಹಾದುಹೋಗಿತ್ತು. ಭೂಮಿಗೆ ಬೇಕಾಗುವ ರಸವಸ್ತುಗಳನ್ನು ಬಿಟ್ಟುಹೊಗಲಿದೆ. ಸೌರವ್ಯೂಹದ ಅಂಚಿನಲ್ಲಿರುವ ಕೈಪರ್ ಪಟ್ಟಿಯಿಂದ (ಊರ್ಥ್ ಮೋಡ) ಹೊರಬಂದು 523 ಶತಕೋಟಿ ಕಿ.ಮೀ. ಸಂಚಾರ ಮಾಡಿದೆ.

ಇದು ಸಾಕಷ್ಟು ವರ್ಷಗಳಿಂದ ಭೂಮಿಯ ಮೇಲಿಂದ ಯಾರೊಬ್ಬರಿಗೂ ಕಾಣಿಸದೇ ಸಂಚರಿಸಿದೆ. ಇದರ ಒಡಲಲ್ಲಿ ಘನೀಕೃತ ಕಾರ್ಬನ್-ಡೈ-ಆಕ್ಸೈಡ್, ಸಾರಜನಕ ಮತ್ತು ಕಾರ್ಬನ್ ಮಾನಾಕ್ಸೈಡ್ ಅನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ಭೂಮಿಯ ವಾತಾವರಣವನ್ನು ಬಿಟ್ಟು ಸೂರ್ಯನ ಹತ್ತಿರ ಹೋದಂತೆಲ್ಲಾ ಅದರಲ್ಲಿನ ವಸ್ತುಗಳೆಲ್ಲಾ ಕರಗಿ ಆವಿಯಾಗಿ ಧೂಮಕೇತು ಬಾಲ ತುಂಬಾ ಉದ್ದವಾಗುತ್ತದೆ. ಜನವರಿಯಲ್ಲಿ ಸೂರ್ಯನ ಹತ್ತಿರ ಹೋಗಿ ಮತ್ತೆ ತನ್ನ ಸ್ವಸ್ಥಾನಕ್ಕೆ ಹಿಂದಿರುಗಲಿದೆ ಎಂದು ಖಗೋಳವಿಜ್ಞಾನಿಗಳು ಊಹಿಸಿದ್ದಾರೆ.

ಸೌರವ್ಯೂಹದ ಉತ್ತರ ಮತ್ತು ಪೂರ್ವ ದಿಕ್ಕಿನ ಮಧ್ಯೆ ಕಾಣುವ ಸಪ್ತರ್ಷಿಮಂಡಲ ಮತ್ತು ಬೂಟಿಸ್ ನಕ್ಷತ್ರಪುಂಜಗಳ ಸಮೀಪದಲ್ಲಿ ಈ ಲಿಯೋನಾರ್ಡ್ ಧೂಮಕೇತು ಗೋಚರಿಸಲಿದೆ. ಬೈನಾಕ್ಯುಲರ್ ಇಲ್ಲವೇ ದೂರದರ್ಶಕವಿದ್ದರೆ ತುಂಬಾ ಚೆನ್ನಾಗಿ ನೋಡಿ ಆನಂದಿಸಬಹುದಾಗಿದೆ.

(ಲೇಖಕರು: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯ ಮತ್ತು ನಿವೃತ್ತ ವಿಜ್ಞಾನ ಶಿಕ್ಷಕ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು