ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ ನೋಡಿ: ಬಾಹ್ಯಾಕಾಶದ ಅಂಚಿನಲ್ಲಿ ರಾರಾಜಿಸಿದ ತ್ರಿವರ್ಣ ಧ್ವಜ

Last Updated 15 ಆಗಸ್ಟ್ 2022, 13:02 IST
ಅಕ್ಷರ ಗಾತ್ರ

ಚೆನ್ನೈ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಚೆನ್ನೈ ಮೂಲದ ‘ಸ್ಪೇಸ್ ಕಿಡ್ಸ್’ ಸಂಘಟನೆ ಭೂಮಿಯಿಂದ ಸುಮಾರು 30 ಕಿಲೋ ಮೀಟರ್ ಎತ್ತರದಲ್ಲಿ, ಬಾಹ್ಯಾಕಾಶದ ಅಂಚಿನಲ್ಲಿ ತ್ರಿವರ್ಣ ಧ್ವಜ ಹಾರಿಸಿದೆ.

ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ದೇಶ ಮಾಡಿರುವ ಸಾಧನೆಗಳ ಸಂಕೇತವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಘಟನೆ ತಿಳಿಸಿದೆ.

ಹೀಲಿಯಂ ಬಲೂನ್‌ಗೆ ಸಿಲುಕಿಸಿರುವ ರಾಷ್ಟ್ರ ಧ್ವಜ ಬಾಹ್ಯಾಕಾಶದ ಅಂಚಿನಲ್ಲಿ ಹಾರಾಡುತ್ತಿರುವ ವಿಡಿಯೊವನ್ನು ಸ್ಪೇಸ್‌ ಕಿಡ್ಸ್ ಸಂಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದೆ.

‘ಈ ವರ್ಷ ಜನವರಿ 27ರಂದು ನಾವು ಚೆನ್ನೈಯಿಂದ ಬಲೂನ್‌ಸ್ಯಾಟ್ ಅನ್ನು ಹಾರಿಬಿಟ್ಟಿದ್ದೆವು. ಅದು ಸುಮಾರು 30 ಕಿಲೋಮೀಟರ್ ಎತ್ತರದಲ್ಲಿ ತ್ರಿವರ್ಣ ಧ್ವಜವನ್ನು ಹಾರಾಡುವಂತೆ ಮಾಡಿದೆ’ ಎಂದು ಸಂಘಟನೆಯ ಸ್ಥಾಪಕಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಕೇಸನ್ ‘ಪಿಟಿಐ’ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಸೋಮವಾರ ವಿಡಿಯೊ ಬಿಡುಗಡೆ ಮಾಡಲಾಗಿದೆ. ಬಲೂನ್‌ನಲ್ಲಿ ಜೋಡಿಸಿದ್ದ ಕ್ಯಾಮೆರಾ ತ್ರಿವರ್ಣಧ್ವಜ ಹಾರಾಡುತ್ತಿರುವ ದೃಶ್ಯವನ್ನು ಸೆರೆಹಿಡಿದಿದೆ ಎಂದು ಅವರು ತಿಳಿಸಿದ್ದಾರೆ.

ಸರ್ಕಾರಿ ಶಾಲೆಗಳ 750 ವಿದ್ಯಾರ್ಥಿನಿಯರು ‘ಆಜಾದಿಸ್ಯಾಟ್’ ಉಪಗ್ರಹ ಅಭಿವೃದ್ಧಿಪಡಿಸಲು ‘ಸ್ಪೇಸ್‌ ಕಿಡ್ಸ್’ ಪ್ರೋತ್ಸಾಹ ನೀಡಿತ್ತು. ‘ಆಜಾದಿಸ್ಯಾಟ್’ ಉಪಗ್ರಹವನ್ನು ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ಇಸ್ರೊದ ಚೊಚ್ಚಲ ಬಾಹ್ಯಾಕಾಶ ನೌಕೆ ಎಸ್‌ಎಸ್‌ಎಲ್‌ವಿ–ಡಿ1 ಮೂಲಕ ಆಗಸ್ಟ್ 7ರಂದು ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗಿತ್ತು.

‘ಎಸ್‌ಎಸ್‌ಎಲ್‌ವಿ–ಡಿ1’ ಮೂಲಕ ಉಡಾವಣೆ ಮಾಡಿದ ಉಪಗ್ರಹಗಳು ತಪ್ಪು ಕಕ್ಷೆಗೆ ಸೇರಿರುವುದರಿಂದ ಅವುಗಳ ಬಳಕೆ ಸಾಧ್ಯವಿಲ್ಲ ಎಂದು ಬಳಿಕ ಇಸ್ರೊ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT